ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ಹಾಗೂ ವೈದ್ಯೆ ವೃತ್ತಿ ಅತ್ಯಂತ ಗೌರವಯುತವಾದದ್ದು: ಶಾಸಕ ಮಹೇಶ ಕುಮಠಳ್ಳಿ

ಅಥಣಿ :ಮಾ.4: ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ಹಾಗೂ ವೈದ್ಯೆ ವೃತ್ತಿ ಬಹಳ ಗೌರವಯುತವಾಗಿದ್ದು ಎಷ್ಟೇ ಉನ್ನತ ಅಧಿಕಾರಿಯಾದರೂ ಅಕ್ಷರ ದಾಸೋಹಿಗಳಾದ ಶಿಕ್ಷಕ ವೃತ್ತಿಗಿರುವ ಗೌರವ, ಸಂತೃಪ್ತಿ, ಸಂತೋಷ, ಸಮಾಧಾನ ಬೇರೊಂದು ವೃತ್ತಿಯಲ್ಲಿರುವ ಜನರಿಗೆ ಸಿಗಲಾರದು ಆದ್ದರಿಂದಲೇ ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಮಹೇಶ ಕುಮಠಳ್ಳಿ ಹೇಳಿದರು

ಅವರು ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಸರಕಾರಿ ಕಲಾ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಅವರು ಮುಂದೆ ಮಾತನಾಡುತ್ತಾ ವಿದ್ಯೆಯನ್ನು ನೀಡಿದ ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳ ಆಸರೆಯಾಗಿದ್ದಾರೆ ಗುರಗಳ ಹಾವಬಾವ ನಡೆನುಡಿ ಹಾಗೂ ಮಾತನಾಡುವ ಶೈಲಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವಂತದ್ದು, ಶಿಕ್ಷಕರು ಜಾಗರೂಕತೆ ಪಾಲಿಸಿದರೆ ಸಾಕು ಕೆಲ ವಿದ್ಯಾರ್ಥಿಗಳು ಅಕ್ಷರಗಳನ್ನು ಕಲಿತು ಉನ್ನತ ಹುದ್ದೆಗೆ ಹೋಗುತ್ತಾರೆ, ಒಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಶಿಕ್ಷಣ ಕಲಿಬೇಕು ಅವರ ಮುಂದಿನ ಜೀವನ ಉಜ್ವಲವಾಗಿ ಬೆಳಗಲಿ ಎಂದರು.

ಇನ್ನೂ ಮುಖ್ಯ ಅಥಿತಿಗಳಾಗಿ ಯುವ ಮುಖಂಡ ಚಿದಾನಂದ ಸವದಿಯವರು ಮಾತನಾಡಿ ಇಂದು ಪಪಂಚದಲ್ಲಿಯೇ ಗುರುವನ್ನು ಮಾತ್ರ ಗುರುಬ್ರಹ್ಮ,ಗುರುವಿಷ್ಠು ಗುರುದೇವೋಭವ ಎನ್ನುತ್ತಾರೆಯೇ ಹೊರೆತೂ ಬೇರೆ ವೃತ್ತಿಯಲ್ಲಿರುವವರನ್ನಲ್ಲ ಸರ್ಕಾರಿ ಶಾಲೆಯಲ್ಲಿ ಕಲಿಯುವಂತ ವಿದ್ಯಾರ್ಥಿಗಳಿಗೆ ಹಾಗೂ ಪಟ್ಟಣದಲ್ಲಿರುವ ದೊಡ್ಡ ದೊಡ್ಡ ಶಾಲೆಗಳಲ್ಲಿ ಕಲಿತಿರುವ ವಿದ್ಯಾರ್ಥಿಗಳಿಗೆ ತುಂಬಾ ವ್ಯತ್ಯಾಸ ಕಂಡು ಬರುತ್ತದೆ ಅಷ್ಟೊಂದು ಅಪಾರವಾದ ಜ್ಞಾನವನ್ನು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಾರೆ ಅವರ ಜೀವನದಲ್ಲಿ ಬೆಳೆಯುವಂತ ವಿದ್ಯೆ ಸಂಸ್ಕಾರ ಬಹಳ ಮಹತ್ವದಾಗಿದೆ ಅಥಣಿ ತಾಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಂತಹ ಗ್ರಾಮ ಯಾವುದಾದರೂ ಇದ್ದರೆ ಅದು ನದಿ ಇಂಗಳಗಾಂವ, ಪದವಿ ಪೂರ್ವ ವಿದ್ಯಾಲಯದ ಅಭಿವೃದ್ಧಿಗೆ ನಾವು ಯಾವುತ್ತು ಬದ್ದರಾಗಿರುತ್ತೇವೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಸಿದ್ದಲಿಂಗ ಮಹಾಸ್ವಾಮಿಜಿಯವರ ಆಶಿರ್ವಚನ ನೀಡಿದರು ಶಿವಲಿಂಗ ಸಿದ್ನಾಳ ಮಾತನಾಡಿದರು.
ಇನ್ನೂ ಈ ಕಾಲೇಜಿನಲ್ಲಿ ಕಲಿತು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,

ಈ ವೇಳೆ ಗುರುಬಸು ತೇವರಮನಿ, ಶಿವಪುತ್ರ ಗೂಳಪ್ಪನ್ನವರ, ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ ಠಕ್ಕಣ್ಣವರ, ಮಲ್ಲಪ್ಪ ಠಕ್ಕಣ್ಣವರ, ಪ್ರಕಾಶ ಚನ್ನಣ್ಣವರ, ಅಲಗೌಡ ಮುದಿಗೌಡರ, ಮಹೇಶ ಚನ್ನಣ್ಣವರ, ಸತೀಶ ಗುಂಡಕಲ್ಲಿ, ನಿಂಗಪ್ಪ ನಂದೇಶ್ವರ, ನಾಗಪ್ಪ ಗೂಳಪ್ಪನ್ನವರ,ಫರೀಧ ಅವಟಿ, ವಿಠ್ಠಲ ಗುಡೆನ್ನವರ, ಅಪ್ಪು ಮಧಬಾವಿ, ಜಗನ್ನಾಥ ಕಾಂಬಳೆ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.