ಎಲ್ಲ ಮಕ್ಕಳೂ ಶುದ್ಧನೀರನ್ನು ಬಳಕೆ ಮಾಡಿ


 ದಾವಣಗೆರೆ.ನ.೧೨: ಮಕ್ಕಳು ಶುದ್ಧನೀರು ಬಳಕೆ ಮಾಡಿ ಎಂದು ಶಾಮನೂರು ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಯರಾದ ದೇವೆಂದ್ರಪ್ಪ ತಿಳಿಸಿದರು.ಶಾಮನೂರು ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆದ “ ಶುದ್ಧಜಲ ಅಭಿಯಾನ ” ಕಾಯ೯ಕ್ರಮದ ಜ್ಯೋತಿ ಬೇಳಗಿಸುವ ಮೂಲಕ ಚಾಲನೆ ನೀಡಿದರು. ಪ್ರತಿಯೊಬ್ಬ ಮಕ್ಕಳು ಶುದ್ಧನೀರನ್ನು ಬಳಕೆ ಮಾಡಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಲಬೇಕು, ನಮ್ಮ ಶಾಲಾ ಆವರಣದ ಹತ್ತಿರ ಶುದ್ಧ ನೀರಿನ ಘಟಕವನ್ನು ನಿವ೯ಹಣೆಯನ್ನು ಮಾಡುತ್ತಿದ್ದು ಪ್ರತಿ ಘಟಕವು ಸ್ವಚ್ಚತೆಯಿಂದ ಜನರಿಗೆ ಸೇವೆಯನ್ನು ನೀಡುತ್ತವೆ, ಅದರ ಸದುಪಯೋಗವನ್ನು ಪ್ರತಿಯೋಬ್ಬರು ಪಡೆದುಕೊಳ್ಳಬೇಕೆಂದು ತಿಳಿಸಿದರು. ಅದರಂತೆ ಪ್ರತಿ ಮಕ್ಕಳು ತಮ್ಮ ತಂದೆ ತಾಯಿಯವರಿಗೆ ಮಾಹಿತಿಯನ್ನು ನೀಡಿ ಮನೆಗೆ ಶುದ್ಧನೀರನ್ನು ತರುವಂತೆ ತಿಳಿಸಿದರು.ನೀರಿನ ಸದ್ಬಳಕೆ, ಪರಿಸರದ ಸ್ವಚ್ಚತೆಯ ಬಗ್ಗೆ ಶಾಲಾ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಸವಿತಾ ಲಕ್ಷ್ಮೀಪತಿ ಮಾಹಿತಿ ನೀಡಿದರು.ಕಾಯ೯ಕ್ರಮದ ಮುಖ್ಯ ಅಥಿತಿಯಾಗಿ ಶುದ್ಧಗಂಗಾ ಮೇಲ್ವಿಚಾರಕರಾದ ಶ್ರೀಯುತ ಫಕ್ಕೀರಪ್ಪ ಬೆಲ್ಲಾಮುದ್ದಿ ಮಾತನಾಡಿ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಮೂಲಕ ಈಗಾಗಲೆ ನಾವು 324 ಶುದ್ಧನೀರಿನ ಘಟಕವನ್ನು ಪ್ರಾರಂಭ ಮಾಡಿ ಪ್ರತಿದಿನ ಗ್ರಾಹಕರಿಗೆ ಶುದ್ಧನೀರನ್ನು ಪೂರೈಸುತ್ತಿದ್ದೇವೆ, ಈ ತಿಂಗಳ ಶುದ್ಧ ಜಲ ಅಭಿಯಾನ ಕಾಯ೯ಕ್ರಮ ಮಾಡುವ ಮೂಲಕ ಒಂದು ಲಕ್ಷ ಗ್ರಾಹಕರಿಗೆ ಶುದ್ಧನೀರನ್ನು ಒದಗಿಸುವ ಆಶಯವನ್ನು ಇಟ್ಟು ಕೊಂಡಿದ್ದೇವೆ, ಈ ಕಾಯ೯ಕ್ರಮದ ಮೂಲಕ ಘಟಕ ವ್ಯಾಪ್ತೀಯಲ್ಲಿ ಶಾಲಾ ಮಕ್ಕಳಿಗೆ ಶುದ್ಧ ನೀರಿನ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಆದ್ದರಿಂದ ಪ್ರತಿಯೊಬ್ಬ ಮಕ್ಕಳು ಶುದ್ಧನೀರನ್ನು ಬಳಕೆ ಮಾಡಿಕೋಳ್ಳಬೇಕೆಂದು ತಿಳಿಸಿದರು.ಕಾಯಕ್ರಮದಲ್ಲಿ ಶಾಲಾ ಶಿಕ್ಷಕರಾಧ ಶ್ರೀಮತಿ ಡಿ ಉಮಾದೇವಿ, ಶುದ್ಧಗಂಗಾ ಪ್ರೇರಕರಾದ ಶ್ರೀಮತಿ ಶಾಂತಾ, ಶಾಲಾ ಮಕ್ಕಳು ಭಾಗವಹಿಸಿದ್ದರು, ಶಾಲಾ ಸಹಶಿಕ್ಷಕರಾದ ಶ್ರೀಯುತ ನಾಗೇಶ್‌ ಕಾಯ೯ಕ್ರಮನ್ನು ನಿರೂಪಿಸಿ ವಂದಿಸಿದರು.