ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊವಿಡ್ ಚುಚ್ಚುಮದ್ದು

ಬೀದರ:ಮಾ 18:ನಾಳೆಯಿಂದ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ದ್ ಹಾಗೂ ಕೋವ್ಯಾಕ್ಷಿನ್ ಚುಚ್ಚುಮದ್ದು ನೀಡಲಾಗುತ್ತಿದ್ದು 45 ವರ್ಷದಿಂದ 59 ವರ್ಷದೊಳಗಿರವಮಧುಮೇಹ, ಅಸ್ತಮಾ, ಹೆಚ್.ಐ.ವಿ ಸೊಂಕಿತ ವ್ಯಕ್ತಿ ಈ ಚುಚ್ಛುಮದ್ದು ಪಡೆಯಬೇಕು. ಹಾಗೇ 60 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮೂರಂಕಿಗೆ ತಲುಪಿರುವ ಕೊವಿಡ್ ಪಾಸೆಟಿವ್ ಕೇಸ್ ಗಳಿಂದ ಎಚ್ಚರವಾಗಿರಲು ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಲ್ಲೆಯ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.