ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ಮತದಾನ: ಡಾ.ಶಿವಕುಮಾರ ಶ್ರೀಗಳು

ಬೀದರ್:ಮೇ.10: ನಗರದ ಮೈಲೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಸಿದ್ಧಾರೂಢ ಶ್ರೀಮಠದ ಪರಮ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳವರು ಮತದಾನ ಮಾಡಿದರು.
ನಂತರ ಸಂಜೆವಾಣಿಯೊಂದಿಗೆ ಮಾತನಾಡಿರುವ ಪೂಜ್ಯರು, ಮತದಾನ ಎಲ್ಲ ದಾನಗಳಿಗಿಂತ ಶ್ರೇಷ್ಟ ದಾನವಾಗಿದ್ದು ಹಣ ಪಡೆದು ಮತಯಾಚನೆ ಮಾಡದೇ ಯೋಗ್ಯ ವ್ಯಕ್ತಿಗೆ ಮತ ನೀಡಿ ಪ್ರಜಾಪ್ರಭುತ್ವ ಬಲಪಡಿಸಲು ಮುಂದಾಗಬೇಕೆಂದು ಕರೆ ಕೊಟ್ಟರು.
ಮತದಾನ ಮಾಡುವುದು ಸಂವಿಧಾನ ನಮಗೆ ಕೊಟ್ಟ ಸೂವರ್ಣ ಕೊಡುಗೆ ಅದರ ಸದುಪಯೋಗಕ್ಕಾಗಿ ಮನೆ ಹೊರ ಬಂದು ತಮ್ಮ ತಮ್ಮಬೂತ್ ಗಳಿಗೆ ತೆರಳಿ ಮತದಾನ ಮಾಡುವಂತೆ ತಿಳಿಸಿದರು.