ಎಲ್ಲ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅಪಾರ


ಧಾರವಾಡ, ಮಾ.25-ಮಹಿಳೆಯರು ಎಲ್ಲಾ ರಂಗಗಳಲ್ಲಿ ತಮ್ಮಛಾಪನ್ನು ಮೂಡಿಸಿದ್ದಾರಲ್ಲದೇ, ಮನೆಯಎಲ್ಲಾ ಜವಾಬ್ದಾರಿಗಳಲ್ಲಿ ಹಾಗೂ ವೃತ್ತಿಜೀವನದಲ್ಲಿ ದಿನನಿತ್ಯ ಎದುರಾÀಗುವ ಹೊಸ ಸಮಸ್ಯೆ ಹಾಗೂ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ಆದರೆತನ್ನ ಆರೋಗ್ಯ, ಆಹಾರದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ತಮಗಾಗಿಯೇ ಒಂದಿಷ್ಟು ವ್ಯೆಯಕ್ತಿಕ ಸಮಯವನ್ನು ಇಟ್ಟುಕೊಂಡು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕೆಂದು ಬೆಳಗಾವಿ ಜಿಲ್ಲೆಯ ಲೋಕಾಯುಕ್ತ ಪೋಲಿಸ ಅಧೀಕ್ಷಕರಾದ ಯಶೋದಾ ಒಂಟಗೋಡಿ ಅಭಿಪ್ರಾಯಪಟ್ಟರು.
ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಮತ್ತು ಕೃಷಿ ಮಹಿಳಾ ಮಂಡಳ, ಕೃಷಿನಗರ, ಧಾರವಾಡ ಹಾಗೂ ಐ.ಸಿ.ಎ.ಆರ್-ಎನ್.ಎ.ಇ ಅನುದಾನಿತ” ಅರಬಳಕೆಯಲ್ಲಿರುವ ಸಿರಿಧಾನ್ಯಗಳ ಪೌಷ್ಟಿಕ ಸಂಯೋಜನೆ, ಮೌಲ್ಯವರ್ಧನೆ ಹಾಗೂ ವಾಣಿಜ್ಯೀಕರಣ ಯೋಜನೆ” ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರದಂದು “ಮಹಿಳಾ ದಿನಾಚರಣೆ -2021″ನಿಮಿತ್ತ ಅರಬಳಕೆಯಲ್ಲಿರುವ ಸಿರಿಧಾನ್ಯಗಳ ಪೌಷ್ಟಿಕತೆಯಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದಲ್ಲದೇ,ಕಾರ್ಯಕ್ರಮದಲ್ಲಿರುವ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಯಾವರೀತಿತಯಾರಿ ನಡೆಸಬೇಕೆಂಬುದನ್ನುಕೂಡವಿವರವಾಗಿ ತಿಳಿಸಿದರು.
ಡಾ.ಪುಷ್ಪಾಭಾರತಿ ಇವರು ಅರಬಳಕೆಯಲ್ಲಿರುವ ಸಿರಿಧಾನ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು. ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾಧಿಕಾರಿಯಾದ ಡಾ. ಉಷಾ ಮಳಗಿ ಇವರು ಕಾರ್ಯಕ್ರಮವನ್ನುಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿರಿಧಾನ್ಯಗಳ ಪೌಷ್ಟಿಕತೆ ಕುರಿತಕರ ಪತ್ರವನ್ನು ಬಿಡುಗೊಡೆಗೊಳಿಸಲಾಯಿತು.
ಕೃಷಿ ನಗರದಕೃಷಿ ಮಹಿಳಾ ಮಂಡಳದ ಅಧ್ಯಕ್ಷರಾದ ಅಭಿನೇತ್ರಿ ಮ.ಚೆಟ್ಟಿ ಇವರು ಅಧ್ಯಕ್ಷತೆಯನ್ನು ವಹಿಸಿ, ಕೃಷಿ ಮಹಿಳಾ ಮಂಡಳದ ಸದಸ್ಯರಿಗೆಆಯೋಜಿಸಿದ ಹೊಲಿಗೆ, ಸಿರಿಧಾನ್ಯಗಳ ತಿನಿಸು ತಯಾರಿಕೆ ಹಾಗೂ ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಹಮ್ಮಿಕೊಂಡಆದಾಯ ಉತ್ಪನ್ನ ಚಟುವಟಿಕೆಗಳ ಆನ್‍ಲೈನ್‍ತರಬೇತಿ ಕಾರ್ಯಕ್ರಮಗಳ ಕುರಿತು ತಿಳಿಸುತ್ತಾ, ಮಹಿಳೆಯರು ಆರ್ಥಿಕವಾಗಿ ಸಬಲರಾಗುವುದು ಇಂದಿನ ದಿನಗಳಲ್ಲಿ ಅವಶ್ಯವಾಗಿರುತ್ತದೆ ಎಂದು ಸಲಹೆಯಿತ್ತರು.
ಡಾ. ಶೋಭಾ ನಾಗನೂರ, ಪ್ರಾಧ್ಯಾಪಕರು ಅತಿಥಿಗಳನ್ನು ಪರಿಚಯಿಸಿದರು. ಯೋಜನೆಯ ಪ್ರಧಾನ ಸಂಶೋಧಕರು ಹಾಗೂ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕರು ಮತ್ತುಮುಖ್ಯಸ್ಥರಾದ ಡಾ. ಸರೋಜನಿ ಜ ಕರಕಣ್ಣವರ ಸ್ವಾಗತಿಸಿದರು.ಡಾ. ವೀಣಾಜಾಧವಪ್ರಾಧ್ಯಾಪಕರು ವಂದಿಸಿದರು.ಡಾ ಸುರೇಖಾ ಸಂಕನಗೌಡರಕಾರ್ಯಕ್ರಮ ನಡೆಸಿ ಕೊಟ್ಟರು.ಕೃಷಿ ಮಹಿಳಾ ಮಂಡಳ ಕೃಷಿನಗರ, ಧಾರವಾಡದ ಪದಾಧಿಕಾರಿಗಳು ಮತ್ತುಎಲ್ಲ ಸದಸ್ಯರುಗಳು ಹಾಗೂ ಸಮುದಾಯ ವಿಜ್ಞಾನ ಮಹಾವಿದ್ಯಾಲಯದಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಗೂ ಕೃಷಿನಗರ ಪ್ರೌಡ ಶಾಲೆಯವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರು ಉಪಸ್ಥಿತರಿದ್ದರು.