ಎಲ್ಲ ಕ್ಷೇತ್ರಗಳ ಪ್ರಗತಿಗೆ ವಿಜ್ಞಾನದ ಕೊಡುಗೆ ಅಪಾರ

ಭಾಲ್ಕಿ: ಫೆ.29:ಶಿಕ್ಷಣ, ತಂತ್ರಜ್ಞಾನ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳ, ದೇಶದ ತ್ವರಿತಗತಿಯ ಬೆಳವಣಿಗೆಯಲ್ಲಿ ವಿಜ್ಞಾನ, ವಿಜ್ಞಾನಿಗಳ ಕೊಡುಗೆ ಅಪಾರ ಎಂದು ಆಡಳಿತಾಧಿಕಾರಿ ಮೋಹನರೆಡ್ಡಿ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ರಸಪ್ರಶ್ನೆ, ರಂಗೋಲಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಬಿಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ವೈಜ್ಞಾನಿಕ, ಅನ್ವೇಷಣಾತ್ಮಕ ಮನೋಭಾವ ಬೆಳೆಸಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಎಂ.ಎಸ್.ರೆಡ್ಡಿ ಮಾತನಾಡಿ, ವಿಜ್ಞಾನ ಅತ್ಯಂತ ಆಸಕ್ತಿದಾಯಕ ವಿಷಯವಾಗಿದೆ. ವಿದ್ಯಾರ್ಥಿಗಳು ಪ್ರಯೋಗಗಳ ಮೂಲಕ ವಿಷಯವನ್ನು ಆಳವಾಗಿ ಅಭ್ಯಸಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ
ಜಿಲ್ಲಾ, ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಖ್ಯಶಿಕ್ಷಕರಾದ ಮಹೇಶ ಮಹಾರಾಜ್, ಮಹೇಶ ಕುಲಕರ್ಣಿ, ಸದಾನಂದ ಪವಾರ್,
ವಿಜ್ಞಾನ ವಿಷಯದ ಮುಖ್ಯಸ್ಥ ಓಂಕಾರ ಹಾರಕುಡೆ, ಬಸವಶ್ರೀ ಮಾಳಗೆ, ಎಸ್ಸೆಸ್ಸೆಲ್ಸಿ
ಸಂಯೋಜಕ ಪ್ರವೀಣ ಖಂಡಾಳೆ, ಕಾವೇರಿ ಜ್ಯಾಂತೆ, ಮಲ್ಲಿಕಾರ್ಜುನ ಚಳಕಾಪುರೆ, ಮೋಹನ ಕಂದಗುಳೆ, ಶ್ರೀದೇವಿ ಕುಂಬಾರ, ತಾನಾಜಿ ಕಿಟ್ಟಾ, ಸುನೀತಾ, ಅರವಿಂದ, ಉತ್ತಮ ನಾಗುರೆ ಇದ್ದರು.