ಎಲ್ಲ ಕ್ಷೇತ್ರಗಳಿಗೆ ಜೈನರ ಕೊಡುಗೆ ಅಪಾರ

ಚನ್ನಮ್ಮನ ಕಿತ್ತೂರ,ಫೆ 24: ನಾಡಿನ ಸಾಹಿತ್ಯ, ಕಲೆ, ಸಂಸ್ಕøತಿ, ಪರಂಪರೆಗೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಜೈನರು ನೀಡಿದ ಕೊಡುಗೆ ಅಪಾರ ಎಂದು ಶಾಸಕಿ ಅಂಜಲಿ ನಿಂಬಾಳ್ಕರ ಹೇಳಿದರು.
ಸಮೀಪದ ಗಂದಿಗವಾಡ ಮತ್ತು ಹಿರೇಅಂಗ್ರೋಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜೈನ ಬಸದಿ ಜೀರ್ಣೋದ್ಧಾರಕ್ಕೆ ರೂ. 25 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಆ ದೇವಾಲಯದ ಕಟ್ಟಡ ಪ್ರಗತಿಯಲ್ಲಿದೆ. ನಾನು ಖಾನಾಪೂರ ಕ್ಷೇತ್ರಕ್ಕೆ ಶಾಸಕಿಯಾಗಿದ್ದು ಯಾವ ಜನ್ಮದ ಪುಣ್ಯಯೆಂಬುವುದು ತಿಳಿದಿಲ್ಲ. ನಿಮ್ಮೇಲ್ಲರ ಪ್ರೀತಿ, ಪ್ರೋತ್ಸಾಹ, ಆರ್ಶೀವಾದ ಆಕಾಶಕ್ಕಿಂತಲೂ ಆಗಾಧವಾಗಿದೆ. ಮನೆಯ ಮಗಳಂತೆ ನೋಡಿಕೊಳ್ಳುತ್ತೀರಿ ಎಲ್ಲ ಅಭಿವೃದ್ದಿ ಕೆಲಸಗಳಿಗೆ ಜನತೆ ನೀಡಿದ ಸಹಕಾರ ಅವಿಸ್ಮರಣೀಯ. ಈ ಪ್ರೀತಿ, ಪ್ರೋತ್ಸಾಹ, ಸಹಕಾರ ಹೀಗೆ ಮುಂದುವರೆಯಲಿ ಸದಾ ನಿಮ್ಮೊಂದಿಗೆ ಇರುತ್ತೇನೆಂದರು.
ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ಮಲ್ಲವ್ವ ನಾಯ್ಕರ, ಉಪಾಧ್ಯಕ್ಷ ಮಹಾವೀರ ಹುಲಿಕವಿ, ಮುಖಂಡರುಗಳಾದ ವಸಂತ ಮಂಡೇದ, ಜಗದೀಶ ಮೂಲಿಮನಿ, ನಾಗಪ್ಪ ಹುಲಿಕವಿ, ತಿಪ್ಪಣ್ಣವರ, ಬಡಸದ ಇನ್ನಿತರ ಗ್ರಾಮಸ್ಥರಿದ್ದರು.