ಎಲ್ಲ ಎಸ್ಕಾಂಗಳಿಗೆ ೪೭೬ ಕೋಟಿ ಸಹಾಯಧನ ಬಿಡುಗಡೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೨:ಗೃಹಜ್ಯೋತಿ ಯೋಜನೆಗಾಗಿ ರಾಜ್ಯ ಸರ್ಕಾರ ಎಲ್ಲ ಎಸ್ಕಾಂಗಳಿಗೆ ಸಹಾಯಧನ ಬಿಡುಗಡೆ ಮಾಡಿದ್ದು, ಜುಲೈ ತಿಂUಳ ಸಹಾಯಧನವಾಗಿ ಒಟ್ಟು ೪೭೬ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಈ ಸಹಾಯ ಧನವನ್ನು ನೀಡಲಾಗಿದ್ದು, ಇದರಲ್ಲಿ ಬೆಂಗಳೂರು ವಿದ್ಯುತ್ ಕಂಪನಿಗೆ ಹೆಚ್ಚು ಸಹಾಯ ಧನ ಸಿಕ್ಕಿದೆ. ಗೃಹಜ್ಯೋತಿ ಯೋಜನೆಯಡಿ ವಿವಿಧ ಎಸ್ಕಾಂಗಳಿಗೆ ಸಿಕ್ಕಿರುವ ಅನುದಾನದ ವಿವರ ಈ ರೀತಿ ಇದೆ.ಬೆಸ್ಕಾಂ ೨೩೫.೦೭ ಕೋಟಿ, ಮೆಸ್ಕಾಂ ೫೨.೭೩ ಕೋಟಿ, ಹೆಸ್ಕಾಂ ೮೩.೪೮ ಕೋಟಿ ರೂ. ಗೆಸ್ಕಾಂ ೫೩.೪೬ ಕೋಟಿ, ಚೆಸ್ಕಾಂ ೫೧.೨೬ ಕೋಟಿ ರೂ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಶೂನ್ಯ ಬಿಲ್‌ನ್ನು ಈ ವಿದ್ಯುತ್ ಸರಬರಾಜು ಕಂಪನಿಗಳು ನೀಡಿತ್ತಿದ್ದು,, ಇದಕ್ಕೆ ಪರಿಹಾರ ರೂಪದಲ್ಲಿ ರಾಜ್ಯಸರ್ಕಾರ ಸಹಾಯಧನ ನೀಡುತ್ತಿದೆ.ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತವಾಗಿ ಓಡಾಡುವ ಮಹಿಳಾ ಪ್ರಯಾಣಿಕರ ಟಿಕೆಟ್ ದರವನ್ನು ಸಹ ಸರ್ಕಾರ ಭರಿಸುತ್ತಿದ್ದು, ಪ್ರತಿ ತಿಂಗಳು ಸಾರಿಗೆ ಸಂಸ್ಥೆಗೆ ೨೯೪ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ತೀರ್ಮಾನ ಮಾಡಲಾಗಿದ್ದು, ಅದರಂತೆ ೨ ದಿನಗಳ ಹಿಂದೆಯಷ್ಟೇ ೧೨೫ ಕೋಟಿ ರೂ,ಗಳನ್ನು ಸಾರಿಗೆ ನಿಗಮಗಳಿಗೆ ಸರ್ಕಾರ ಬಿಡುಗಡೆ ಮಾಡಿದೆ.