
ತಾಳಿಕೋಟೆ:ಮಾ.10: ಕತ್ತಲೆಯನ್ನು ಕಳೆದು ಜ್ಞಾನ ಮೂಡಿಸುವಂತಹ ಕಾರ್ಯ ಮಾಡುವ ಗುರುವಿಗೆ ಜ್ಞಾನಜ್ಯೋತಿ ಎಂದು ಕರೆಯುತ್ತಾರೆ. ಅಂತಕರಣದಲ್ಲಿಯ ಮನಸ್ಸಿನ ಪಂಚೇದ್ರೀಯಗಳ ದೋಶ ಕಳೆಯುವಂತಹ ಜ್ಯೋತಿ ಗುರುವಾಗಿದ್ದಾನೆ. ಗುರುವಿಗೆ ಆದಿ ಕಾಲದಿಂದಲೂ ದೊಡ್ಡ ಸ್ಥಾನಮಾನ ಕೊಟ್ಟಿದ್ದಾರೆಂದು ಪಡೆಕನೂರ ದಾಸೋಹ ಮಠದ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ನುಡಿದರು.
ಗುರುವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 17ನೇ ದಿನದಂದು ಮುಂದುವರಿಸಿ ಮಾತನಾಡುತ್ತಿದ್ದ ಅವರು ಗುರುವಿಗೆ ಕಾಮದೇನು ಎಂದು ಅನೇಕ ಹೆಸರುಗಳಿಂದ ಋಷಿಗಳೂ ವರ್ಣನೆ ಮಾಡುತ್ತಾರೆ ಸ್ವರ್ಗ ಲೋಕದಲ್ಲಿ ದೇವತೆಗಳಿದ್ದು ಅವರಿಗೆ ಮೊಕ್ಷ ಗುರುವಿಲ್ಲ ನಿದ್ರೆ, ಹಸಿವೆ, ನಿರಡಿಕೆ ಇಲ್ಲ. ಅದಕ್ಕಾಗಿಯೇ ಅವರಿಗೆ ಗುರು ಇಲ್ಲವೆಂದರು. ಮಾನವರು ನಿದ್ರೆ ಮಾಡುತ್ತಾರೆ. ಹಸಿವೆಯಾಗಿ ಊಟ ಮಾಡುತ್ತಾರೆ ಅವರಿಗೆ ನೀರಡಿಕೆಯಾಗುತ್ತದೆ. ಕಾರಣ ಮಾನವರಿಗೆ ಮಾತ್ರ ಗುರು ಇರುತ್ತಾನೆ. ದೇವತೆಗಳಿಗೆ ಮಾತ್ರ ಗುರು ಮತ್ತು ಮೊಕ್ಷ ಇವೆರಡು ಇಲ್ಲವೆಂದರು. ಎಲ್ಲಿ ಮರಣವಿದೆ ಅಲ್ಲಿ ಮೊಕ್ಷವಿದೆ. ಆದರೆ ದೇವತೆಗಳಿಗೆ ಮರಣವಿಲ್ಲ ಮೊಕ್ಷವಿಲ್ಲ. ಮೊಕ್ಷ ಪಡೆಯುವವನಿಗೆ ಶಿಷ್ಯನೆಂದು ಕರೆಯುತ್ತಾರೆಂದರು. ಗುರುವಿಗೆ ವಾರಿದಿ ಎಂದು ಕರೆಯುತ್ತಾರೆ. ವಾರಿದಿ ಎಂದರೇ ಸಮುದ್ರ ಯಾವ ರೀತಿಯಾಗಿ ನದಿ ಹಳ್ಳ ಭೂಮಂಡಲದಲ್ಲಿ ದಾವಿಸಿ ಹರಿಯುತ್ತಾ ಸಮುದ್ರಕ್ಕೆ ಕುಡುತ್ತವೆಯೋ ಅದಕ್ಕೆ ಶಿಷ್ಯ ಎಂದು ಕರೆಯುತಾರೆ. ಗುರುವಿಗೆ ಜ್ಞಾನದ ಕಣಿ ಎಂದು ಕರೆಯುತ್ತಾರೆಂದರು. ನಾನೂ ಯಾರೂ ಎಂದು ಅರಿತುಕೊಳ್ಳಲಿಕ್ಕೆ ಎಲ್ಲ ಧರ್ಮಗಳಲ್ಲೂ ಗುರು ಇರುತ್ತಾನೆ. ಆ ಗುರುವಿಗೆ ತವನಿಧಿ ಎಂದು ಕರೆಯುತ್ತಾರೆ. ಅಜ್ಞಾನ ಕಳೆಯುವವನೇ ಗುರು ಎಂದರು.
ರಾಜ ಚಂದ್ರಗುಪ್ತ ಮರ್ಯನ ಕಾಲದಲ್ಲಿ ರಾಜ ಚಂದ್ರಗುಪ್ತನಿಗೆ ತನ್ನ ರಾಜತನದ ಆಳಿಕೆ ಮಾಡಲು ಆತನಿಗೆ ಧೈರ್ಯ ಶೌರ್ಯ ಎಂಬುದೇ ಎದ್ದು ಬರುತ್ತಿರಲಿಲ್ಲ. ಆತನ ಹತ್ತಿರ ಒಬ್ಬ ಗುರು ಬರುತ್ತಾನೆ. ಆಗುರುವೇ ಚಾಣಕ್ಯನೆಂದರು. ಗುರು ಚಾಣಕ್ಯ ತರ್ಕಶಾಸ್ತ್ರ ಮುಂದಾಲೋಚನೇಯ ಎಲ್ಲವನ್ನು ತಿಳಿದ ಮಹಾಜ್ಞಾನಿ. ರಾಜನ ಆಸ್ಥಾನಕ್ಕೆ ಬಂದ ಗುರು ಚಾಣಕ್ಯನಿಗೆ ರಾಜ ಚಂದ್ರಗುಪ್ತ ಆತನ ಪಾದ ಪೂಜೆ ಮಾಡಿ ಭಕ್ತಿಯಿಂದ ಬರಮಾಡಿಕೊಂಡ. ಜ್ಞಾನಬೇಕಾದರೇ ಗುರುವಿನ ಪಾದದಡಿ ಕುಳಿತು ಕೊಂಡರೇ ಜ್ಞಾನದ ಗಂಗೆ ಹರಿಯುತ್ತಾಳೆ ಗುರುವಿನ ಪಾದದ ಕಡೆ ಕುಳಿತವರಿಗೆ ಗುರು ಬ್ರಹ್ಮೋಪದೇಶ ತೊರಿಸುತ್ತಾನೆಂದರು. ಬಸವಣ್ಣನವರು ಹೇಳುತ್ತಾರೆ. ಮಳೆ ಬಂದಾಗ ಕೇರೆ ಹಳ್ಳ ಕೊಳ್ಳ ತುಂಬಿ ಹರಿದು ಘಂಟೆಯೊಳಗೆ ಕಾಲಿಯಾಗಿ ಆಸ್ಥಾನದಲ್ಲಿ ಮುಳ್ಳು ಕಂಟಿಗಳು ಕಾಣುತ್ತವೆ. ಆದರೆ ಸಮುದ್ರದ ದಂಡೆಯಲ್ಲಿ ಮುತ್ತು ರತ್ನಗಳೂ ದೊರಯುತ್ತವೆ. ಕಾರಣ ಜ್ಞಾನದ ಕಣಿ ಎಂದು ಕರೆಯುತ್ತಾರೆಂದರು. ಶ್ರೇಷ್ಟ ತತ್ವಜ್ಞಾನಿಯಾಗಿದ್ದ ಚಾಣಕ್ಯ ಆತನ ವಿದ್ಯಾ ಬುದ್ದಿಯನ್ನು ಕಂಡ ರಾಜಾ ಚಂದ್ರಗುಪ್ತ ಚಾಣಕ್ಯನಿಗೆ ತನ್ನ ರಾಜ್ಯದ ಸ್ಥಾನಮಾನವನ್ನು ಕೊಟ್ಟು ಇಡಿ ರಾಜ ದರ್ಬಾರವನ್ನೇ ಆತನಿಗೆ ಕೊಡಲು ಯೋಚಿಸಿ ಚಾಣಕ್ಯನಿಗೆ ಈ ಮಾತು ಹೇಳಿ ಇನ್ನೇನು ಎಲ್ಲವನ್ನು ನೊಡಿಕೊಂಡು ಹೋಗು ಎಂದು ಹೇಳಿದಾಗ ಚಾಣಕ್ಯ ನನಗೆ ರಾಜ್ಯ ಸ್ಥಾನಮಾನ ಬೇಡ ಇಗಿದ್ದಂತೆ ಯತಾಸ್ಥಿತಿ ಇರುತ್ತೆನೆಂದ ಚಾಣಕ್ಯ. ತನ್ನ ಮನೆಗೆ ಹೋದಾಗ ಆತನ ತಾಯಿ ಚಾಣಕ್ಯನನ್ನು ನೋಡಿ ದುಃಖ್ಖಿಸುತ್ತಾಳೆ. ತಾಯಿಗೆ ಯಾಕೆ ಅಳುತ್ತಿ ಎಂದು ಕೇಳಿದಾಗ ನಿನಗೆ ರಾಜನ ಸ್ಥಾನಮಾನ ದೊರೆತರೆ ರಾಜಧಾನಿಯಲ್ಲಿ ಕೆಲಸ ಕಾರ್ಯಗಳು ಹೆಚ್ಚಾಗುತ್ತವೆ. ಇದರಿಂದ ನೀನು ನನ್ನನ್ನೂ ಮರೆಯುತ್ತಿ ಎಂದು ತಾಯಿ ದುಃಖ್ಖಿಸಿ ಹೇಳುತ್ತಾಳೆ. ಆದರೆ ಚಾಣಕ್ಯ ತಾಯಿಗೆ ಉತ್ತರಿಸಿ ನಾನೂ ರಾಜನಾಗುವುದಿಲ್ಲ ಎಂದು ತಾಯಿಗೆ ಪ್ರಮಾಣಿಸಿ ಹೇಳಿದ ಚಾಣಕ್ಯ ಮುಂದೆ ತಾನೂ ರಾಜನಾಗಬಾರದೆಂಬ ಉದ್ದೇಶದಿಂದ ತನ್ನ ಮುಂದಿನ ಎರಡು ಹಲ್ಲುಗಳನ್ನು ಕಿತ್ತುಕೊಂಡು ನನಗೆ ರಾಜನಾಗಲೂ ಬರುವುದಿಲ್ಲ ಎಂಬ ಮಾತನ್ನು ರಾಜನಾದ ಚಂದ್ರಗುಪ್ತನಿಗೆ ತಿಳಿಸುತ್ತಾನೆ.
ಮೂರನೇ ಕಣ್ಣು ಹೊಂದಿದ್ದ ಸಿದ್ದರಾಮ ಸೊಲ್ಲಾಪೂರದಲ್ಲಿ ಕೇರೆ ಹಾಗೂ ಮಂದಿರವನ್ನು ಕಟ್ಟಿಸಲೂ ಪಾರಂಭಿಸುತ್ತಾನೆ. ಅದೇ ಸ್ಥಳಕ್ಕೆ ಅಲ್ಲಮಪ್ರಭು ದೇವರು ಹೊಗುತ್ತಾರೆ. ಈ ಎಲ್ಲ ಕಟ್ಟಡ ಕಾರ್ಯವನ್ನು ನೋಡಿದ ಅಲ್ಲಮಪ್ರಭು ಈ ಕಾರ್ಯ ನಡೆಸಿದ ಹಿತೈಶಿಗಳೂ ಯಾರೂ ಎಂದು ಎತ್ತರದ ಧ್ವನಿಯಲ್ಲಿ ಮಾತನಾಡುತ್ತಾನೆ ಅಲ್ಲಿಯ ಕಾರ್ಮಿಕರು ನಮ್ಮ ಒಳ್ಳೆಯ ಗುರು ಸಿದ್ದರಾಮನಿಗೆ ಇತ ಟೀಕೆಮಾಡುವವ ಯಾರು ಎಂದು ಅಲ್ಲಮಪ್ರಭುವಿನ ಕುರಿತು ಸಿದ್ದರಾಮನಿಗೆ ಕಾರ್ಮಿಕರು ತಿಳಿಸುತ್ತಾರೆ. ಅದನ್ನೆಲ್ಲ ಕೇಳಿದ ಸಿದ್ದರಾಮ ಆಸ್ಥಾನಕ್ಕೆ ಬಂದು ನನಗೆ ಬೈಯುವ ನೀನ್ಯಾರು ಎಂದು ತನ್ನ ಮೂರನೇ ಕಣ್ಣನ್ನು ತಗೆದು ಅಲ್ಲಮನಿಗೆ ಸುಡಲು ಯತ್ನಿಸುತ್ತಾನೆ. ಅಲ್ಲಮನ ಶಕ್ತಿಯಿಂದ ಆ ಮೂರನೇ ಕಣ್ಣು ಅಲ್ಲಮನ ಪಾದದಲ್ಲಿ ಮಾಯವಾಗುತ್ತದೆ. ಇದನ್ನು ಕಂಡ ಸಿದ್ದರಾಮ ಇನ್ನಷ್ಟೂ ಸಿಟ್ಟು ನೆತ್ತಿಗೇರಿಸಿ ಕೊಂಡು ಅಲ್ಲಮಪ್ರಭುವನ್ನು ಹಿಡಿಯಲು ಹೋಗುತ್ತಾನೆ ಅಲ್ಲಮ ಮಾಯವಾದ. ಇವನೊಬ್ಬ ಯಾರೋ ಗುರುವಿನ ಸ್ಥಾನಮಾನ ಹೊಂದಿದವನಿದ್ದಾನÉಂದು ತಿಳಿದು ಸಿದ್ದರಾಮ ತಪ್ಪಾಯಿತ್ತೆಂದು ಅಲ್ಲಮನಿಗೆ ಹೇಳಿದಾಗ ಅಲ್ಲಮಪ್ರಭು ಸಿದ್ದರಾಮನಿಗೆ ತಿಳಿಹೇಳಿ ಕಲ್ಯಾಣಕ್ಕೆ ನಡೆ ಅಲ್ಲಿ ಚೆನ್ನಬಸವಣ್ಣನಿಂದ ದೀಕ್ಷೆ ಪಡೆದುಕೋ ನಿನಗೆ ದೀಕ್ಷೆಯಾಗುತ್ತದೆ ಎಂದು ಅಲ್ಲಮಪ್ರಭು ಹೇಳಿದಾಗ, ಅಲ್ಲಮಪಪ್ರಭು ಹಾಗೂ ಸಿದ್ದರಾಮ ಇವರು ಕಲ್ಯಾಣಕ್ಕೆ ತೆರಳುತ್ತಾರೆ. ಅರಿವು ಎಂಬುದು ಮನುಷ್ಯನಿಗೆ, ದನಕರುಗಳಿಗೆ ಬೆಕ್ಕು ನಾಯಿಗಳಿಗೆ ಅರಿವಿದೆ. ನಾಯಿ ಬೆಕ್ಕುಗಳೂ ದನ ಕರುಗಳು ಎಲ್ಲೇಲ್ಲಿ ತಿರುಗಾಡಿ ಬಂದರು ಸಾಕಿದವನ ಮನೆಗೆ ಬರುತ್ತವೆ. ಯಾಕೆಂದರೇ ಅವುಗಳಿಗೆ ಅರಿವು ಎಂಬುವುದಿದೆ. ಎಂದು ಹೇಳಿದ ಶ್ರೀಗಳು ಎಲ್ಲವೂ ಗೊತ್ತಿದ್ದೂ ಮರುವು ಮಾಡಿಕೊಳ್ಳುತ್ತಿದ್ದ ಮನುಷ್ಯನಿಗೆ ಸದ್ಗುಣ ಇಲ್ಲದಿದ್ದರೇ ಮೊಕ್ಷವಾಗಲಾರದೆಂದರಲ್ಲದೆ ಗುರು ಮತ್ತು ಹರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶ್ರೀಗಳು ಪ್ರವಚನವನ್ನು ಮುಂದುವರೆಸಿದರು.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ,ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ,ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.