ಎಲ್ಲಿ ನಿಜಭಕ್ತಿ ಇರುವುದೋ ಅಲ್ಲಿ ದೇವರಿರುವನು: ವೈಜಿನಾಥ ಮಹಾರಾಜರು

ಭಾಲ್ಕಿ:ಮೇ.29: ಪೂಜ್ಯ ಶ್ರೀ ದಿವ್ಯಯೋಗಿ ಶ್ರೀ ಕಂಠಯ್ಯಾ ಸ್ವಾಮಿಗಳ 49ನೆಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮವು ಉಚ್ಚ ಗ್ರಾಮದ ಪೂಜ್ಯ ಶ್ರೀ ಕಂಠಯ್ಯ ಸ್ವಾಮಿಗಳ ಲಿಂಗಯೋಗ ಧ್ಯಾನ ಮಂದಿರದಲ್ಲಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ವೈಜಿನಾಥ ಮಹಾರಾಜರು ವಹಿಸಿದ್ದರು. ಬಳಿಕ ಮಾತನಾಡಿದ ಅವರು ಭಕ್ತಿಯ ಕುರಿತು ಅನುಭಾವ ಹೇಳಿದರು. ಎಲ್ಲಿ ನಿಜ ಭಕ್ತಿ ಇರುವುದೋ ಅಲ್ಲಿ ದೇವರಿರುವನು ಡಾಂಭಿಕ ಭಕ್ತಿ ಸಲ್ಲದು, ಹಿತವಾದ ಭಕ್ತಿ ಶಿವನಿಗೆ ಪ್ರಿಯವಾದುದು. ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜ್ಯರ ಅಪ್ಪಟ ಶಿಷ್ಯೆ ಅನಿತಾ ಜಾಣೆ ಅವರು ವಹಿಸಿದ್ದರು.
ಬಸವ ಗುರು ಪೂಜೆಯನ್ನು ಶ್ರೀಮತಿ ಸುಧಾರಾಣಿ ಸಿದ್ದಲಿಂಗ ಮಠಪತಿ ಅವರು ನೆರವೇರಿಸಿದ್ದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೇ ಚಾಲನೆ ನೀಡಿದರು. ವಚನ ಗಾಯನವನ್ನು ಶ್ರೀಮತಿ ಶ್ರೀದೇವಿ ಶಾಂತಯ್ಯ ಸ್ವಾಮಿ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಶ್ರೀಮತಿ ನಾಗಮ್ಮ ವೈಜಿನಾಥ ಮಠಪತಿ, ಶ್ರೀಮತಿ ಗೌರಮ್ಮ, ಶ್ರೀ ವೀರಯ್ಯ ಸ್ವಾಮಿ, ಶ್ರೀಮತಿ ನಾಗಮ್ಮ ಶಿವಯ್ಯ ಸ್ವಾಮಿ ಅವರನ್ನು ಶಾಲು ಹೊದೆಸಿ ಗೌರವಿಸಿ ಸನ್ಮಾನಿಸಲಾಯಿತು. ಅದೇ ರೀತಿ ಶಿವಗೀತಾ ವಿರೂಪಾಕ್ಷಪ್ಪ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು.
ಕವನ ಶಾಂತಯ್ಯ ಸ್ವಾಮಿ ಅವರು ವಚನ ಪಠಣ ಮಾಡಿದರು. ಸುನೀತಾ ಹಾಗೂ ಶ್ರೀದೇವಿ ಸ್ವಾಮಿ ಭಕ್ತಿಗೀತೆ ಹಾಡಿದರು. ಶ್ರೀಮತಿ ಅನಿತಾ ಜಾಣೆ ಪ್ರಾರ್ಥನೆ ಗೀತೆ ಹಾಡಿದರು. ಶಾಂತಯ್ಯ ಸ್ವಾಮಿ ನಿರೂಪಿಸಿದರು. ಚಂದನ ಸ್ವಾಮಿ ಸ್ವಾಗತಿಸಿದರು. ಶಿವಯೋಗಿ ಸ್ವಾಮಿ ವಂದಿಸಿದರು. ಭಜನೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.