
ಕಲಬುರಗಿ,ಸೆ.18: ಜಾತಿ ವ್ಯವಸ್ಥೆ ಹಾಗೂ ಎಲ್ಲಾ ಸಮುದಾಯದ ಜನರಲ್ಲಿ ಸಮಾನತೆಗಾಗಿ ಹೋರಾಡಿದ ನಾರಾಯಣ ಗುರು ದೀನ ದಲಿತ ಸಮುದಾಯಗಳ ಜನರಿಗಾಗಿ ಮತ್ತು ಅವರ ಹಕ್ಕುಗಳಿಗೆ ಧ್ವನಿ ಎತ್ತಿದರು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಹೇಳಿದರು.
ಸೋಮವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಹಾನಗರ ಪಾಲಿಕೆ ಜಿಲ್ಲಾ ಪಂಚಾಯತ್ ಕಲಬುರುಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶೀ ನಾರಾಯಣ ಗುರುಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇಂದಿನ ಯುಗದಲ್ಲಿ ನಾವು ಶಿಕ್ಷಣಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಶಿಕ್ಷಣಕ್ಕಾಗಿ 30 ಪ್ರತಿಶತ ಅನುದಾನ ನೀಡುತ್ತಿದ್ದೇವೆ ಈ ಭಾಗದಲ್ಲಿರುವ 41 ತಾಲೂಕುಗಳ ಕಡ್ಡಾಯವಾಗಿ ಬಳಸಿಕೊಳ್ಳಬೇಕೆಂದರು.
ಆರ್ಯ ಈಡಿಗ ಸಮಾಜಕ್ಕೆ ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯ ನೀಡಲಾಗುವುದು ನಾವು ಎಲ್ಲಾ ಶಾಸಕರು ಮೂರು ಭಾಗದ ಉಸ್ತುವಾರಿ ಸಚಿವರೊಂದಿಗೆ ನಿಯೋಗ ತೆಗೆದುಕೊಂಡು ಹೋಗಿ ನಿಗಮ ಮಂಡಳಿ ಅನುದಾನ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚೆಸಲಾಗುವುದೆಂದರು. ಬ್ರಹಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ ಮಾಡುವುದು ನಿಜಕ್ಕೂ ಸಂತೋಷ ತಂದಿದೆ ಎಂದರು.
ಅವರು ಒಬ್ಬ ಒಳ್ಳೆಯ ಗುರುಗಳಾಗಿದ್ದಾರೆ ಅವರ ಆದರ್ಶ ತತ್ವಗಳನ್ನು ನಾವು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.
ಇದಕ್ಕೂ ಮುನ್ನ ಬ್ರಹಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ಹಾಗೂ ಅಧಿಕಾರಿಗಳಿಂದ ಭಾವ ಚಿತ್ರಕ್ಕೆ ಪೂಜ್ಯ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಮಪ್ರಭು ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಅದ್ಯಕ್ಷತೆ ವಹಿಸಿ ಮಾತನಾಡಿ, ಅವರು ಈಡಿಗ ಸಮಾಜದ ಗುರು ಆಗದೆÀ ಇಡೀ ಮಾನವ ಕುಲಕ್ಕೆ ಸಂದೇಶ ನೀಡಿದರು, ಅವರು ಕೇರಳ ರಾಜ್ಯದಲ್ಲಿ ಜನಿಸಿದರು. ಸಮಾನತೆಗೆ ಹೋರಾಡಿದರು ಎಂದರು
ಸರ್ಕಾರದಿಂದ ಸಿಗುವಂತ ಸೌಲಭ್ಯಗಳ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಬಡವರಿಗೆ ಸಿಗಬೇಕಾದ ಮನೆ ನಿರ್ಗತಿಕರಿಗೆ ಎಲ್ಲ ರೀತಿಯ ಸಹಾಯ ಸೌಕರ್ಯ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ.ಎಂದರು.
ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳು ಇವರು ಕೇರಳದಲ್ಲಿ ಹುಟ್ಟಿದ ಬೆಳದವರು ಸಮಾಜದ ಏಳಿಗೆಗಾಗಿ ದುಡಿದವರು ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು.
ನಾರಾಯಣ ಗುರುಗಳ ತತ್ವ ಸಿದ್ದಾಂತ ಜಾರಿಗೆ ತಂದಿರುವುದುಕ್ಕೆ ಸಾಮಾಜಿಕ ನ್ಯಾಯ ಪಡೆದುಕೊಂಡಿದ್ದೆ ಅವರ ತತ್ವಗಳ ಹಾಗೂ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾಲಯ ಮಂಗಳೂರು ಬ್ರಹ್ಮ ಶ್ರೀ ನಾರಾಯಾಣಗು ಗುರು ಅಧ್ಯಯನ ಪೀಠ ನಿರ್ದೇಶಕ ಡಾ. ಗಣೇಶ ಅಮೀನ ಸಂಕಮಾರ್ ವಿಶೇಷ ಉಪನ್ಯಾಸ ನೀಡಿದರು.
ಕರದಾಳ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಡಾ. ಪ್ರಣಾವಾನಂದ ಮಹಾಸ್ವಾಮಿಗಳಿ ದಿವ್ಯ ಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ಇದೇ ಸಂದರ್ಭದಲ್ಲಿ ಕನ್ನಡದ ಚಿತ್ರರಂಗದ ಯುವನಟ ಧೀರೇನ್ ರಾಮ್ ಕುಮಾರ್ ಅವರಿಗೆ ಆರ್ಯ ಇಡಿಗ ದಕ್ಷಿಣ ಮತ ಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಸಮಾಜ ಮುಖಂಡರೊಂದಿಗೆ ಸನ್ಮಾನಿಸಲಾಯಿತು
ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣೆ ನಿವೃತ್ತ ಅಧಿಕಾರಿ ಡಾ. ಸದಾನಂದ ಪೆರ್ಲ ಸ್ವಾಗತಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ನೌಕರ ಪಡೆದ ಉನ್ನತ ಹುದ್ದೆ ಹೊಂದಿದ್ದವರಿಗೆ ಸನ್ಮಾನಿಸಲಾಯಿತು.
ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆರ್ಯ ಸಮಾಜ ಮುಖಂಡರಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ಏರ್ಪಡಿಸಲಾಯಿತು.
ವೇದಿಕೆ ಮೇಲೆ ಆಳಂದ ಮಾಜಿ ಶಾಸಕ ಸುಭಾಷÀ ಗುತ್ತೇದಾರ, ಕಲಬುರಗಿ ಗ್ರೇಡ್ -1 ತಹಶೀಲ್ದಾರ ನಾಗಮ್ಮ ಎಂ.ಕೆ., ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಡಾ. ಶಿವಶರಣಪ್ಪ ದನ್ನಿ, ಕನ್ನಡ ಮತ್ತು ಸಾಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ, ಆರ್ಯ ಈಡೀಗ ಸಮಾಜ ಜಿಲ್ಲಾ ಆದ್ಯಕ್ಷರಾದ ರಾಜೇಶ ಜಗದೇವ ಗುತ್ತೇದಾರ ಜಗದೇವ ಗುತ್ತೇದಾರ, ನಿತೀನ ಗುತ್ತೇದಾರ ಬಸಯ್ಯ ಗುತ್ತೇದಾರ ಗಾರಂಪಳ್ಳಿ ಸೇರಿದಂತೆ ಎಲ್ಲಾ ಸಮಾಜ ಜಿಲ್ಲಾ ಅಧ್ಯಕ್ಷರು ಸಮಾಜದ ಮುಖಂಡರು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.