ಎಲ್ಲಾ ಸಮುದಾಯಕ್ಕೆ ಅನುಕೂಲ ಮಾಡಿದ ಏಕೈಕ ಪಕ್ಷ ಕಾಂಗ್ರೆಸ್

ನಾಯಕನಹಟ್ಟಿ.ಸೆ.೬; ಎಲ್ಲಾ ಜಾತಿ-ಜನಾಂಗಕ್ಕೆ ಅನುಕೂಲ ಮಾಡಿದಂತಹ ಏಕೈಕ ಪಕ್ಷ ಅದು ಕಾಂಗ್ರೇಸ್ ಪಕ್ಷ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.ನಾಯಕನಹಟ್ಟಿ ಸಮೀಪದ ತುರುವನೂರು ಗ್ರಾಮದಲ್ಲಿ  ಸ್ವಾತಂತ್ರ ಹೋರಾಟಗಾರರಿಗೆ ರಘುಮೂರ್ತಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದಅಭಿನಂದನೆ ಸಮಾರಂಭ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಚುನಾವಣೆ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ಈಡೇರಿಸಿದ್ದು ಅದು ನಮ್ಮ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ. ಬಿ.ಜೆ.ಪಿ. ಪಕ್ಷದ ಸಿದ್ಧಾಂತವು 17 ಶಾಸಕರನ್ನು ಖರೀದಿ ಮಾಡಿ ಈಗ ಬಿ.ಜೆ.ಪಿ. ಸರ್ಕಾರ ಆಡಳಿತ ಮಾಡುತ್ತಿದೆ ಎಂದು ಬಿ.ಜೆ.ಪಿ. ಪಕ್ಷದ ವಿರುದ್ದ ಹರಿದಾಯ್ದರು.ಅತೀ ಹೆಚ್ಚು ಮತ ನೀಡಿದ ತುರುವನೂರು ಹೋಬಳಿಗೆ ಶಾಸಕ ರಘುಮೂರ್ತಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ  ರಾಮಕೃಷ್ಣರೆಡ್ಡಿ, ಹನುಮಂತರೆಡ್ಡಿ, ತಿಮ್ಮಾರೆಡ್ಡಿ, ಕುಮಾರಗೌಡ, ನಾಗಭೂಷಣ, ಸತೀಶ್, ಮಲ್ಲಣ್ಣ, ಸರ್ವಕ್ಕ, ಭೀಮಪ್ಪ ಮಾಸ್ಟರ್, ಪಾಲಯ್ಯ, ಮಂಜು, ಡಿ.ಆರ್. ಮಂಜುನಾಥ, ಶಾರದಮ್ಮ, ಜಿ.ಟಿ. ತಿಪ್ಪೇಸ್ವಾಮಿ, ಬಾಬೂರೆಡ್ಡಿ ವಿವಿಧ ಸಂಘಗಳ ಕಾರ್ಯಕರ್ತರು ಇದ್ದರು.