ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ನಮ್ಮ ಸರ್ಕಾರ ಒದಗಿಸುತ್ತಿದೆ :ಸಚಿವ ಕೊಟಾ ಶ್ರೀನಿವಾಸ ಪೂಜಾರಿ

ಜೇವರ್ಗಿ :ಜ.18:ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ಭವನದ ಆವರಣದಲ್ಲಿ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿದ ಸರ್ಕಾರಕ್ಕೆ ಅಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೂಜಾರಿರವರು,ನಮ್ಮ ಸರ್ಕಾರ ಸರ್ವ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಿದ್ದು ನಮ್ಮ ಸರ್ಕಾರ. ಹಾಗೆಯೇ, ಮನೆಯಲ್ಲಿ ಹೆಣ್ಣು ಹುಟ್ಟಿದರೇ,ದರಿದ್ರ ಎಂದು ಲಕ್ಷ್ಮೀಗೆ ಭಾಗ್ಯಲಕ್ಷ್ಮೀ ಮಾಡಿದ್ದು ನಾವೆ ಎಂದು ಹೇಳಿದರು.
ಅಂಬೇಡ್ಕರ್ ರವರು ಜಗತ್ತಿನ ಅತಿದೊಡ್ಡ ಸಂವಿಧಾನ ರಚನೆ ಮಾಡಿದ್ದು,ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸಾಮಾಜಿಕ ನ್ಯಾಯ ಸಿಗಲಿ ಎಂಬ ಸದಾಶಯ.ಆ ಆಶಯವನ್ನು ನಾವು ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರ ಮೂಲಕ ನ್ಯಾಯ ಒದಗಿಸಿದ್ದೇವೆ ಎಂದು ಕೊಟಾ ಶ್ರೀನಿವಾಸ ಪೂಜಾರಿ ನುಡಿದರು.
ಮಗು ಅತ್ತರೇ ಮಾತ್ರ ತಾಯಿಗೆ ನಾನು ಮಗುವಿಗೆ ಹಾಲು ಕೊಡಬೇಕು ಎಂದು ಅನಿಸುತ್ತದೆ. ಹಾಗೆಯೇ ಸುದೀರ್ಘ ದಿನದಿಂದ ನಡೆದ ಹೋರಾಟದಿಂದಲೇ ಇಂದು ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಲಭಿಸಿದೆ.ನಾವುಗಳು ಭಗೀರಥ ಪ್ರಯತ್ನ ಮಾಡಿ,ಇನ್ನುಳಿದ ಸಮಾಜಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಸಿಗುವ ಹಾಗೆ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮತ್ತು ಕಾರ್ಯಕ್ರಮದ ರೂವಾರಿ ಶೋಭಾ ಬಾಣಿರವರು,ನಮ್ಮ ಸಮಾಜ ಪರಿಶಿಷ್ಟ ಪಂಗಡಕ್ಕಾಗಿ ನಡೆಯುತ್ತಿರುವ ಹೋರಾಟ ಇಂದು ನಿನ್ನೆಯದಲ್ಲ.ಸುಮಾರು1995ರ ಮುನ್ನದಿಂದಲೇ ವಿಠ್ಠಲ ಹೇರೂರ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ನಾನು ಸಹ ರಸ್ತೆಗೆ ಇಳಿದು ಹೋರಾಟ ಮಾಡಿರುವೆ ಎಂದು ಹೇಳಿದ ಅವರು,ಸತತ ಮೂವತ್ತು ವರ್ಷಗಳಿಂದ ನಡೆಯುತ್ತಿದ್ದ ಹೋರಾಟದ ಕುರಿತು ಸುಧಿರ್ಘ ಇತಿಹಾಸವನ್ನೆ ಬಿಚ್ಚಿಟ್ಟರು.ಮಾಲಿಕಯ್ಯ ಗುತ್ತೆದಾರ, ಎನ್ ರವಿಕುಮಾರ್ ಹಾಗೂ ಸಚಿವ ಕೊಟಾ ಶ್ರೀನಿವಾಸ ಪೂಜಾರಿರವರು ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಸಿಗಲು ಅವರ ಸೇವೆ ಅವಿಸ್ಮರಣೀಯ ಎಂದು ಹೇಳಿದ ಬಾಣಿರವರು ಹೇಳಿದರು ಈ ಸಂದರ್ಭದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ, ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ, ಭಾಜಪ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಮಲ್ಲಿನಾಥಗೌಡ ಪಾಟೀಲ್ ಯಲಗೋಡ, ಬೈಲಪ್ಪ ನೆಲೋಗಿ, ಶರಣಪ್ಪ ತಳವಾರ,ವಿವೇಕಾನಂದ ಡಬ್ಬಿ, ರೇವಣಸಿದ್ದಪ್ಪ ಸಂಕಾಲಿ,ತಿಪ್ಪಣ್ಣ ರೆಡ್ಡಿ, ಶಿವಪುತ್ರಪ್ಪ ಕೋಣಿನ ಹರವಾಳ, ಸಿದ್ದರಾಮ ಜೇರಟಗಿ, ಶಿವರುದ್ರಪ್ಪ ತಳವಾರ,ಅಣ್ಣಾರಾಯ ತಳವಾರ ಹಾಗರಗಿ,ಭೀಮರಾಯ ಗುಜಗೊಂಡ,ಬಾಬು ಪಾಟೀಲ್ ಮುತ್ತಕೋಡ, ಡಾ.ಹಣಮಂತ್ರಾಯ ರಾಂಪೂರೆ, ಎಸ್ ಕೆ ಹೆರೂರ,ಅಪ್ಪಾಸಾಹೇಬ ಕೊಳಕೂರ, ಬಸವರಾಜ ಬೂದಿಹಾಳ,ರಾಜು ತಳವಾರ,ಮೈಲಾರಿ ಬಣಮಗಿ,ದೇವಿಂದ್ರ ಮುತ್ತಕೋಡ, ಸಂತೋಷ ಜೈನಾಪುರ, ಸಿದ್ದಣ್ಣಗೌಡ ಮಾವನೂರ ಸೇರಿದಂತೆ
ಪ್ರಾರ್ಥನೆ ಶ್ರೇಯಸ್ಸು ಮತ್ತು ಸ್ಪೂರ್ತಿ ಭಗವಂತ ರಾವ್ ಬೆನ್ನೂರು ಪ್ರಾರ್ಥನೆ ಮಾಡಿದರು ಚಿಂತಕ ಸಮಾಜದ ಯುವ ಮುಖಂಡ ಭಗವಂತ್ರಾಯ ಬೆಣ್ಣೂರ ನಿರೂಪಿಸಿದರೇ,ಪ್ರಸ್ತಾವಿಕವಾಗಿ ಶೋಭಾ ಬಾಣಿ,ಭಾಗೇಶ ಹೋತಿನಮಡು ವಂದಿಸಿದರು.ಸ್ವಾಗತ ಗೀತೆಯನ್ನು ಕುಮಾರ್ ಶ್ರೇಯಸ್ ಬೆಣ್ಣೂರ ಮಾಡಿದರು.