ಎಲ್ಲಾ ಶಿಶುಗಳಿಗೆ ಸೂಕ್ತ ಸಮಯಕ್ಕೆ ಲಸಿಕೆ ಕೊಡಿಸಿ; ಉಪ ನಿರ್ದೇಶಕ


ಸಂಜೆವಾಣಿ ವಾರ್ತೆ
ಸಂಡೂರು: ಆ: 12: ತಾಲೂಕಿನ ಕೃಷ್ಣ ನಗರ ಗ್ರಾಮದ ಅಂಗನವಾಡಿ ಕೇಂದ್ರ ಮತ್ತು ಆರೋಗ್ಯ ಕ್ಷೇಮ ಕೇಂದ್ರದಲ್ಲಿ ನಡೆಯುತ್ತಿದ್ದ ಲಸಿಕೆ ವಂಚಿತ ಮಕ್ಕಳಿಗಾಗಿ ಆಯೋಜಿಸಿರುವ  ಪರಿಣಾಮಕಾರಿ ಇಂದ್ರ ಧನುಷ್ ಲಸಿಕಾ ಅಭಿಯಾನದಡಿ ಲಸಿಕಾ ಸತ್ರಗೆ ಡಾ.ರಾಜಕುಮಾರ್, ಉಪ ನಿರ್ದೇಶಕರು, ತಾಯಿ ಆರೋಗ್ಯ, ನಿರ್ದೇಶನಾಲಯ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ಇವರು ಮತ್ತು ಇವರ ತಂಡ ಬೇಟಿ ನೀಡಿ ಲಸಿಕೆ ನೀಡುವುದನ್ನು ಪರಿಶೀಲನೆ ಮಾಡಿದರು, ಮಕ್ಕಳು ಲಸಿಕೆ ವಂಚಿತರಾಗಲು ಕಾರಣಗಳು,ಲಸಿಕೆ ನೀಡುವ ವಿಧಾನ,ತಾಯಂದಿರಗೆ ಲಸಿಕೆಯ ಮಹತ್ವದ ಮಾಹಿತಿ, ಲಸಿಕೆ ನಂತರ ಅಡ್ಡ ಪರಿಣಾಮಗಳು, ಪೋಷಕರ ಸಹಕಾರ, ಆರೋಗ್ಯ ಸೇವೆಗಳನ್ನು ಪಡೆಯಲು ಸಾರ್ವಜನಿಕರ ಆಸಕ್ತಿ ಇತರೆ ಎಲ್ಲಾ ವಿಷಗಳ ಬಗ್ಗೆ ಸುದೀರ್ಘವಾಗಿ ಪರಿಶೀಲನೆ ಮಾಡಿದರು,ನಂತರ ಫಲಾನುಭವಿಗಳ ಮನೆ ಬೇಟಿ ಮಾಡಿ ವಿಚಾರ ಮಾಡಿದರು,  
  ಈ ಸಂದರ್ಭದಲ್ಲಿ ಅವರು  ತಾಯಂದಿರಿಗೆ ಹನ್ನೆರಡು ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆ ಪರಿಣಾಮಕಾರಿಯಾಗಲು ಸೂಕ್ತ ಸಮಯಕ್ಕೆ ಲಸಿಕೆ ಕೊಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಅಭಿಯಾನದ ಉದ್ದೇಶಗಳ ಬಗ್ಗೆ ವಿವರಿಸುತ್ತಾ ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು ಎನ್ನುವುದನ್ನು ಮನಗಾಣಬೇಕು, ಮುಂದಿನ ದಿನಗಳಲ್ಲಿ ಸೂಕ್ತ ಸಮಯಕ್ಕೆ ಲಸಿಕೆ ಕೊಡಿಸಿ ಎಂದು ತಿಳಿಸಿದರು,
 ಈ ಸಂದರ್ಭದಲ್ಲಿ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್ ಕುಮಾರ್, ಡಾ.ಕುಶಾಲ್ ರಾಜ್, ಡಾ.ಹರೀಶ್, ಆರೋಗ್ಯ ಸಿಬ್ಬಂದಿ ವಿಜಯಲಕ್ಷ್ಮಿ,ಬಸಂತಿ,ದೀಪಾ,ಆಶಾ ಕಾರ್ಯಕರ್ತೆ ಜಲಜಾಕ್ಷಿ, ವಿಜಯಲಕ್ಷ್ಮಿ, ಮೀನಾಕ್ಷಿ, ಅಂಗನವಾಡಿ ಕಾರ್ಯಕರ್ತೆ ಉಷಾ, ಮಕ್ಕಳು ಮತ್ತು ತಾಯಂದಿರು ಉಪಸ್ಥಿತರಿದ್ದರು

One attachment • Scanned by Gmail