ಎಲ್ಲಾ ಶಾಲಾ ಕಾಲೇಜು,ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸಲು ಆದೇಶ ನೀಡಲು ಒತ್ತಾಯ

ರಾಯಚೂರು,ಅ.೩೧- ೬೭ನೇ ಕರ್ನಾಟಕ ರಾಜ್ಯೋತ್ಸವ ದಿನದಂದು ಎಲ್ಲಾ ಶಾಲಾ ಕಾಲೇಜು ಸರಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸುವಂತೆ ಮುಖ್ಯಮಂತ್ರಿಗಳು ಅದೇಶಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಭುವನೇಶ್ವರಿ ಸೇನಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ತಮೇಶ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ರಾಜ್ಯದಲ್ಲಿ ಕನ್ನಡವೇ ಸಾರ್ವಬೌಮೇತೆ ಎಂದು ನಿಜವಾದ ಅರ್ಥ ಬರಬೇಕಾದರೆ , ರಾಜ್ಯದ ಎಲ್ಲಾ ಕಾಲೇಜ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಧ್ವಜವನ್ನು ಹಾರಿಸುವಂತೆ ಆದೇಶಿಸುವುದರೊಂದಿಗೆ ೬೭ ನೇ ಕರ್ನಾಟಕ ರಾಜ್ಯೋತ್ಸವವನ್ನು ಎಲ್ಲಾ ಸಮಸ್ತ ಕನ್ನಡಿಗರಿಗೆ ಕೊಡುಗೆಯಾಗಿ ನೀಡಬೇಕು. ಜೋತೆಗೆ ಧ್ವಜದ ಎಲ್ಲಾ ಖಾಸಗಿ ಮಹಲ್‌ಗಳು ,ಹೋಟೆಲ್ ಗಳು , ರೆಸ್ಟೋರೆಂಟ್ ಗಳು ಎಲ್ಲಾ ತರವಾದ ಅಂಗಡಿ ಮುಗ್ಗಟ್ಟುಗಳ ಮೇಲೆ ೭೫ % ಭಾಗದಷ್ಟು ಕನ್ನಡದಲ್ಲಿ ನಾಮ ಪಾಲಕ ಹಾಕುವಂತೆ ಕಟ್ಟು ನಿಟ್ಟಾಗಿ ಆದೇಶಿಸಲಿ ಮತ್ತು ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ಕನಿಷ್ಟ ೧೫ ದಿನಗಳ ಕಾಲ ಅಥವಾ ಕನಿಷ್ಠ ಒಂದು ವಾರಗಳ ಕಾಲ ಮಲ್ಟಿ ಪಿಚ್ಚರಗಳು ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವಂತೆ ಕಟ್ಟು ನಿಟ್ಟಾಗಿ ಆದೇಶಿಸಿ ಇದನ್ನು ಪಾಲಿಸದ ಚಿತ್ರಮಂದಿರಗಳ ಲೈಸನ್ಸ್ ( ಪರವಾನಿಗೆ ) ಯನ್ನು ರದ್ದುಗೊಳಿಸಿ ದಂಡ ಹಾಕಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆ.ವಾಗುಲು ನರಸಿಂಹಲು,ಪಿ.ನರಸಿಂಹಲು ಇದ್ದರು.