ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಒದಗಿಸುವ ಗುರಿ ; ಶಾಸಕ ರಾಮಪ್ಪ

ಹರಿಹರ.ಮೇ.೧೪; ಸಣ್ಣ ಸಮಾಜಗಳಿಗೆ ಅಭಯ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಗುರಿ ಹಮ್ಮಿಕೊಂಡಿದ್ದೇನೆ ಎಂದು ಹರಿಹರ ಶಾಸಕ ಎಸ್.ರಾಮಪ್ಪ ಹೇಳಿದರು. ಹರಿಹರ ನಗರದಲ್ಲಿ ಶ್ರೀ ಸವಿತಾ ಮಹಾ ಋಷಿ ಕಲ್ಯಾಣ ಮಂಟಪಕ್ಕೆ ಇಂದು ಭೂಮಿ ಪೂಜಾ ಕಾರ್ಯ ಮಾಡಿ ಮಾತನಾಡುತ್ತಾ  ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಎಲ್ಲಾ ದುರ್ಬಲ ವರ್ಗಗಳ ಅಭಿವೃದ್ಧಿಗೆ ನೀಡಿದ್ದೇನೆ.  ನಮ್ಮ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ, ಸರ್ವರಿಗೂ ಸಮಬಾಳು ಇದು ಪಕ್ಷದ ಸಿದ್ದಾಂತ ಹಿಂದಿನ ಕಾಂಗ್ರೆಸ್ ಸರ್ಕಾರ ದುರ್ಬಲ ವರ್ಗದವರ ಕಲ್ಯಾಣ ಕ್ಕೆ ಅನೇಕ ಯೋಜನೆ ನೀಡಿತು ಅದರೆ ಪ್ರಸ್ತುತ ಬಿಜೆಪಿ ಸರ್ಕಾರದ ಹಗರಣಗಳ ಆಗರವಾಗಿದೆ ಪರಸ್ಪರ ದ್ವೇಷ ಹರಡುವ ಕಾರ್ಯ ಮಾಡುತ್ತಾ ರಾಜ್ಯದ ಅಭಿವೃದ್ಧಿ ಕುಂಠಿತ ಅಗಿದೆ ಈ ಸರ್ಕಾರದ ದಲ್ಲಿ ದಿನ ನಿತ್ಯ ಬೆಲೆ ಏರಿಕೆ ಬಡವರಿಗೆ ಶಾಪವಾಗಿದೆ ಬಂಡವಾಳ ಶಾಹಿಗಳ ಪರ  ಸರ್ಕಾರ ಇದಾಗಿದೆ ಎಂದರು.ಈ ಸಭೆಯಲ್ಲಿ ನಗರ ಸಭೆ ಸದಸ್ಯ ಶಂಕರ್ ಖಟ್ವಕರ್ ,ಸಮಿತಾ ಸಮಾಜದ ತಾಲ್ಲೂಕು ಅದ್ಯಕ್ಷ ಹನುಮಂತಪ್ಪ ಸಮಾಜದ ಮುಖಂಡ ರಾದ ಸವಿತಾ ಸಮಾಜದ ಜಿಲ್ಲಾ ಅದ್ಯಕ್ಷ ಬಲರಾಜ್ ,ನಾಗಪ್ಪ,ಬ್ಲಾಕ್ ಅದ್ಯಕ್ಷರಾದ ಎಂ.ಬಿ.ಅಬಿದ್ ಅಲಿ, ,ಎಲ್.ಬಿ.ಹನುಮಂತಪ್ಪ,  ಸಮಾಜ ತಾಲ್ಲೂಕು ಕಾರ್ಯದರ್ಶಿ ಮಂಜುನಾಥ ಸ್ವಾಗತಿಸಿ ವಂದಿಸಿದರು.