ಎಲ್ಲಾ ಭಾಷೆಗಳನ್ನು ಪ್ರೀತಿಸಿ, ನಿಮ್ಮ ಭಾಷೆಯನ್ನು ಗೌರವಿಸಿ:ವಿಜಯಲಕ್ಷೀ ಸಜ್ಜನ

ಫರತಾಬಾದ :ನ.2: ಸಮೀಪದ ಹೊನ್ನಕೀರಣಗಿಯ ಶ್ರೀ ಶಿವಯೋಗಪ್ಪ ವಗ್ದರ್ಗಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಕನ್ನಡ ಶಿಕ್ಷಕಿಯಾದ ವಿಜಯಲಕ್ಷೀ ಸಜ್ಜನ ಅವರು ದೇಶದ ಎಲ್ಲಾ ಭಾಷೆಗಳನ್ನು ಪ್ರೀತಿಸಿ ಆದರೆ ನಮ್ಮ ಕನ್ನಡ ಭಾಷೆಯನ್ನು ಆರಾಧಿಸಿ, ಕರ್ನಾಟಕ ಇತಿಹಾಸದಲ್ಲಿ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖೋಪಾಧ್ಯಾರಾದ ಬಸ್ಸಪ್ಪ ಬಿರಾದಾರ ಅವರು ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳಿಂದ ಸಾಂಸೃತಿಕ ಕಾರ್ಯಕ್ರಮಗಳು ಜರುಗಿದವು. 10ನೇ ತರಗತಿ ವಿದ್ಯಾರ್ಥಿ ಲಕ್ಷೀ ನಾಗಪ್ಪ ಒಗ್ಗಿ ರಾಜ್ಯೋತ್ಸವ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗುರುಬಸ್ಸಪ್ಪ ಸಜ್ಜನಶೆಟ್ಟಿ ಅವರು ವೇದಿಕೆ ಉದ್ದೇಶಿಸಿ ಮಾತನಾಡಿದರು. ಚಿತ್ರಕಲಾ ಶಿಕ್ಷಕರಾದ ಶಿವಪುತ್ರ ವಿಶ್ವಕರ್ಮ, ಕ್ಲರ್ಕ್ ಶಿವಸಾಗರ, ಗ್ರಾಮದ ಮುಂಖಡರಾದ ವೀರಣ್ಣ ಸಿನ್ನೂರ, ಶ್ರೀಶೈಲ ಬಿ ಸಜ್ಜನ, ಬಸವರಾಜ ನರಬೋಳಿ, ಸಿದ್ದು ಬುಸಾ, ಮಂಜುನಾಥ ಸಿನ್ನೂರ್, ಬಾಬು ಬಜಿ, ಶಿಕ್ಷಕಿ ಮಧುಮತಿ, ಮಮತಾ ಹಾಗೂ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಕರಾದ ರಘುನಾಥ ಹಾಗರಗುಂಡಗಿ ಮತ್ತು ವಂದನಾರ್ಪಣೆಯನ್ನು ಇಂಗ್ಲೀಷ್ ಶಿಕ್ಷಕಿ ಸಹನಾಜ್ ಬೇಗಂ ನಡೆಸಿಕೊಟ್ಟರು.