ಎಲ್ಲಾ ಬಡಾವಣೆಯ ರಸ್ತೆಗಳನ್ನುಸಿಮೆಂಟ್ ನಿರ್ಮಿತ ರಸ್ತೆಗಳನ್ನು ಮಾಡಲು ಯೋಜನೆಃ ಶಾಸಕ ಬಸನಗೌಡ

ವಿಜಯಪುರ, ಡಿ.30-ವಿಜಯಪುರ ನಗರವನ್ನು ಸುಂದರ ನಗರವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಅವರು ವರುಣ ನಗರ ಹಾಗೂ ಪಿ.ಡಿ.ಜೆ. ಬಡಾವಣೆಯ ಉದ್ಯಾನವನ ಭೂಮಿ ಪೂಜೆ ಉದ್ಘಾಟಿಸಿ ಮಾತನಾಡಿ ಅದರಂತೆ ಈ ಬಡಾವಣೆಯ ನಿರ್ಮಾಣ ಸಲುವಾಗಿ ಸುಂದರ ಸುಸಜ್ಜಿತ ಉದ್ಯಾನವನವನ್ನು ನಗರಾಭಿವೃದ್ಧಿ ಪ್ರಾಧಿಕಾರದ 25 ಲಕ್ಷ ರೂ. ಮೊತ್ತದಲ್ಲಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಅವರು ಇದಲ್ಲದೆ ನಗರದ ಎಲ್ಲ ರಸ್ತೆಗಳನ್ನು ಎಲ್ಲಾ ಬಡಾವಣೆಯ ರಸ್ತೆಗಳನ್ನು ಸಹ ಸಿಮೆಂಟ್ ನಿರ್ಮಿತ ರಸ್ತೆಗಳನ್ನು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕರು ಸಹ ರಸ್ತೆ ನಿರ್ಮಾಣದ ನಂತರ ರಸ್ತೆಗಳನ್ನು ವಿರೂಪಗೊಳಿಸದೆ ಕಾಪಾಡಿಕೊಳ್ಳುವುದು ಸಾರ್ವಜನಿಕ ಕರ್ತವ್ಯ ಆಗಿದೆ ಎಂದ ಅವರು ಬೇರೆ ಜಿಲ್ಲೆಯ ನಗರ ಸೌಂದರ್ಯಗಿಂತಲು ವಿಜಯಪುರ ನಗರ ಸೌಂದರ್ಯ ಹೆಚ್ಚಿಸುವಂತೆ ಮಾಡಲು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ವಿಜಯಕುಮಾರ ಬಿ. ಅಜೂರ, ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರೇಮಾನಂದ ಬಿರಾದಾರ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಲಕ್ಷ್ಮಣ ಜಾಧವ, ವಿಕ್ರಮ ಗಾಯಕವಾಡ, ಚಂದ್ರು ಚೌಧರಿ, ನಗರಾಭಿವೃದ್ಧಿ ಪ್ರಾಧಿಕಾರ ಮುಖ್ಯ ಅಭಿಯಂತರರಾದ ಶ್ರೀಮತಿ ಪಿ.ಕೆ. ಚಿಮ್ಮಲಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಬಡಾವಣೆಯ ಓಣಿಯ ಪ್ರಮುಖರಾದ ಪುರಹಿತ ಎ.ಎನ್. ಕುಲಕರ್ಣಿ, ಎಸ್.ಎಸ್. ಹಿರೇಮಠ, ಪಾಂಡು ಸಾಹುಕಾರ ದೊಡ್ಡಮನಿ, ರಾಜಗೌಡ ಪಾಟೀಲ್ ಮುಳವಾಡ, ಸಿದ್ದಣ್ಣ ಹಿಟ್ನಳ್ಳಿ ಮತ್ತು ಮುರಿಗೆಪ್ಪಾ ಕನ್ನೂರ ಮುಂತಾದವರು ಉಪಸ್ಥಿತರಿದ್ದರು.
ಸಾಹಿತಿ ರಮೇಶ ಕೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಎಲ್. ಮೊಕಾಶಿ ಅವರು ಸ್ವಾಗತಿಸಿದರು. ಕಲಾವಿದ ಮಲ್ಲಿಕಾರ್ಜುನ ಕನ್ನೂರ, ಕಾರ್ಯಕ್ರಮ ನಿರೂಪಿಸಿದರು. ಸಿದ್ದಣ್ಣ ಹಿಟ್ನಳ್ಳಿ ವಂದಿಸಿದರು.