ಎಲ್ಲಾ ಪಕ್ಷಗಳಿಗೂ ಮಾದರಿಯಾದ ಆಮ್ ಆದ್ಮಿಪಕ್ಷ

ದಾವಣಗೆರೆ.ಜ.೧೩: ಆಮ್ ಆದ್ಮಿ ಪಕ್ಷ ಜನರ ಅನುಕೂಲಕ್ಕಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ ಅಂದು ನಮ್ಮ ಯೋಜನೆಗಳನ್ನು ವಿರೋಧಿಸಿದವರು ಇಂದು ತಮ್ಮ ಪಕ್ಷದಲ್ಲೂ ಇಂತಹ ಯೋಜನೆಗಳನ್ನು ಅಳವಡಿಸಿಕೊಂಡಿದ್ದಾರೆ. ದೆಹಲಿಯ ಉಚಿತ ಯೋಜನೆಗಳನ್ನು ಟೀಕಿಸುತಿದ್ದವರು ಇಂದು  ಅವರುಗಳೇ ಇಂತಹ ಸೇವೆಗೆ ಮುಂದಾಗಿದ್ದಾರೆ ಎಂದು ಎಎಪಿ ದಾವಣಗೆರೆ ಮುಖಂಡ ಕೆ.ಎಲ್ ರಾಘವೇಂದ್ರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಜನರು ಕಟ್ಟುವ ತೆರಿಗೆ ಬಹಳಷ್ಟು ಸಂಗ್ರಹಣೆ ಯಾಗುತಿದ್ದು ಈ ಹಣವನ್ನು ದೇಶದ ಜನತೆಗೆ ವಿದ್ಯುತ್, ಶಾಲಾ, ಕಾಲೇಜು, ಆರೋಗ್ಯ ಹಾಗೂಮೂಲಭೂತ ಸೌಕರ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಿದೆ ಎಂದು ಸಾಬೀತು ಪಡಿಸಿದ ಏಕೈಕ ಮುಖ್ಯಮಂತ್ರಿ ಎಂದರೆ ದೆಹಲಿಯ ಆಮ್ ಆದ್ಮಿ ಪಾರ್ಟಿಯ ಸಂಸ್ಥಾಪಕರು ಹಾಗೂ ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್ , ದೆಹಲಿಯಲ್ಲಿ ಬರೀ ವಿದ್ಯುತ್ ಉಚಿತವಲ್ಲದೆ  ಮಹಿಳೆಯರಿಗೆ ಉಚಿತ ಪ್ರಯಾಣ, ವಿದ್ಯಾವಂತ ನಿರುದ್ಯೋಗಿಗಳಿಗೆ ತಿಂಗಳ ಮಾಶಾಸನ, ಪ್ರತಿಯೊಂದು ವಾರ್ಡ್ ಗಳಲ್ಲಿಯೂ 24/7, ಆಸ್ಪತ್ರೆ, ಹೈಟೆಕ್ ಶಾಲಾ, ಕಾಲೇಜು, ಪಡಿತರ ಸಾಮಗ್ರಿ ಅವರವ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ, ಅನೇಕ ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ, ಇನ್ನೂ ಅನೇಕ ಜನಪರ ಸೇವೆಗಳು ತೆರಿಗೆ ಹಣದಲ್ಲಿ ಮಾಡಲು ಸಾಧ್ಯ, ಹಾಗೂ ಭ್ರಷ್ಟಾಚಾರ ರಹಿತ ರಾಜ್ಯ ಎಂದು ದೆಹಲಿ ಹಾಗು ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಸರ್ಕಾರ ತೋರಿಸಿಕೊಟ್ಟಿದೆ. ಆದರೆ ಉಳಿದ ಎಲ್ಲಾ ರಾಜ್ಯದಲ್ಲಿ ಈ ಸೇವೆಗಳು ತರಲು ಹಣದ ಕೊರತೆ ಇಲ್ಲಾ, ಕೊರತೆ ಇರುವುದು ರಾಜಕಾರಣಿಗಳ ಇಚ್ಚಾಶಕ್ತಿ. ಮೊದಲು ನಾವುಗಳು ತಿಳಿದುಕೊಳ್ಳಬೇಕಾಗಿದ್ದು ಸರ್ಕಾರಗಳು ನಮಗೆ ನೀಡುವ ಸೇವೆಗಳು ಯಾವುದೂ ಉಚಿತವಲ್ಲ ಅದು ನಮ್ಮ ತೆರಿಗೆ ಹಣದಿಂದ, ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ಘೋಷಣೆ ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ತಲುಪಿಸುವ ಹಾಗೆ ಜನರು ತಮ್ಮ ರಾಜ್ಯಗಳಲ್ಲಿ ಬೇಡಿಕೆಯನ್ನು ಇಡಬೇಕು ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ ಹಾಕಬೇಕು. ಆಗ ಮಾತ್ರ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಜೀವನ ನಡೆಸಲು ಸಾಧ್ಯ. ಚುನಾಯಿತ ಪ್ರತಿನಿಧಿ ಜನರ ನಾಯಕನಾಗದೆ, ಜನರ ಸೇವಕರಾಗಿ ಜನರಿಗೊಸ್ಕರ ಕೆಲಸ ಮಾಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್,ಶ್ರೀಧರ್ ಪಾಟೀಲ್,ಸಾಗರ್ ಮಿಸ್ಕಿಲ್ ಇದ್ದರು.