`ಎಲ್ಲಾ ನಿನಗಾಗಿ’ ಅನ್ನುತ್ತಿದ್ದಾರೆ ಧನ್ಯ

ವರನಟ ಡಾ. ರಾಜ್‍ಕುಮಾರ್ ಕುಟುಂಬದ ಕುಡಿ ಹಾಗು ಹಿರಿಯ ನಟ ರಾಮ್ ಕುಮಾರ್ ಅವರ ಪುತ್ರಿ ಧನ್ಯ ರಾಮ್ ಕುಮಾರ್ ಇದೀಗ “ಎಲ್ಲಾ ನಿನಗಾಗಿ” ಅನ್ನುತ್ತಿದ್ದಾರೆ.

ಧನ್ಯ ನಟಿಸುತ್ತಿರುವ ಹೊಸ ಚಿತ್ರದ ಹೆಸರು ಎಲ್ಲಾ ನಿನಗಾಗಿ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಈ ಮೂಲಕ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಧನ್ಯ ಮುಂದಾಗಿದ್ದಾರೆ.

ಮಾವಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಸೋದರ ಸಂಬಧಿಗಳಾದ ವಿಜಯ್ ರಾಘವೇಂದ್ರ, ಶ್ರೀಮರುಳಿ ಅವರ ರೀತಿ ಹೆಸರು ಮಾಡುವ ಕನಸು ಕಂಡಿದ್ದಾರೆ ಧನ್ಯ ರಾಮ್ ಕುಮಾರ್

ಹೊಸ ಚಿತ್ರದ ಶೀರ್ಷಿಕೆಯನ್ನು ನಟ ಶ್ರೀಮುರುಳಿ ಬಿಡುಗಡೆ ಮಾಡಿ ಶುಭ ಹಾರೈಸಿದ್ಧಾರೆ. ಎಲ್ಲಾ ನಿಗನಾಗಿ ಚಿತ್ರವನ್ನು  ವಿದ್ಯಾ ಶ್ರೀಮುರಳಿ ಅರ್ಪಿಸುತ್ತಿರುವ  ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಶುಭಕೋರಿದ್ದಾರೆ ನಟ ಶ್ರೀಮುರಳಿ .

ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ “ಮ್ಯಾಟ್ನಿ” ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ.  ಈಗ ಅದೇ ಸಂಸ್ಥೆಯ ಲಾಂಛನದಲ್ಲಿ “ಎಲ್ಲಾ ನಿನಗಾಗಿ” ಎಂಬ ನೂತನ ಚಿತ್ರ ಆರಂಭವಾಗಿದೆ. ವಿದ್ಯಾ ಶ್ರೀಮುರಳಿ ಅವರೆ ಈ ಚಿತ್ರವನ್ನೂ ಅರ್ಪಿಸುತ್ತಿದ್ದಾರೆ. ರಾಹುಲ್ ಆರ್ಕಾಟ್ ಹಾಗೂ ಧನ್ಯ ರಾಮಕುಮಾರ್ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಚಿತ್ರಕ್ಕೆ ಕಾಶಿ ಆಕ್ಷನ್‍ಕಟ್ ಹೇಳಿದ್ದಾರೆ. ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ದೇವಸ್ಥಾನದಲ್ಲಿ ನೆರವೇರಿತು.. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ “ಎಲ್ಲಾ ನಿನಗಾಗಿ” ಎಂದು ಹೆಸರಿಡಲಾಗಿದೆ. ಸದ್ಯದಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ.

ಬಾಕ್ಸ್