ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠವಾದದ್ದು: ನಿಜಗುಣರಾಜು

ಚಾಮರಾಜನಗರ, ಮಾ.17:- ಸಮಾಜದಲ್ಲಿ ಸಮಾನತೆಯನ್ನು ಸಾರಿ ಬೇಧ ಭಾವವಿಲ್ಲದೇ ಸಮಾನ ಸಮಾಜಕ್ಕಾಗಿ ಹೋರಾಡಿದವರು. ಎಲ್ಲಾ ಧರ್ಮಗಳಿಗಿಂತ ಮಾನವಧರ್ಮ ಶ್ರೇಷ್ಠವಾದದ್ದುಎಂದು ಹೇಳಿದವರು ಸಂತ ಶ್ರೀ ಜಗದ್ಗುರುರೇಣುಕಾಚಾರ್ಯರು ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿಜಗುಣರಾಜು ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಆವರಣದಲ್ಲಿರುವ ವರನಟಡಾ. ರಾಜ್‍ಕುಮಾರ್ ಜಿಲ್ಲಾರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿಂದು ನಡೆದಶ್ರೀ ಜಗದ್ಗುರುರೇಣುಕಾಚಾರ್ಯರ ಜಯಂತಿಂ iÀುುಗಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೇಣುಕಾಚಾರ್ಯರ ತತ್ವಗಳು, ಮನೋಭಾವನೆಗಳು, ಸಂದೇಶಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ಅವರ ಜಯಂತಿಯ ಅಚರಣೆ ಸಾರ್ಥಕವಾಗುತ್ತದೆ. ಯುವ ಪೀಳಿಗೆಯು ಉದ್ದೇಶವನ್ನು ಅರಿತು ಕೊಂಡು ಮುಂದೆ ಸಾಗಬೇಕು. ಸಮಾಜದ ಹಲವಾರು ಕಟ್ಟುಪಾಟುಗಳ ವಿರುದ್ಧದನಿ ಎತ್ತಿದವರುಎಂದರು.
ಮಾನವಧರ್ಮದ ಏಳಿಗೆಗೆ ಶ್ರಮಿಸಬೇಕು. ಜಾತಿ ವ್ಯವಸ್ಥೆ, ಪುರುಷ ಸ್ತ್ರೀ ಎಂಬ ಸಮಾಜದ ಭಿನ್ನತೆಯನ್ನು ಹೋಗಲಾಡಿಸಲು ರೇಣುಕಾಚಾರ್ಯರು ಅಂದಿನ ಕಾಲದಲ್ಲಿ ಹೋರಾಡಿದವರು ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಿಜಗುಣರಾಜು ಅವರು ಹೇಳಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರೇಣು ಕಾಚಾರ್ಯರ ಚರಿತ್ರೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಅವರ ಮೌಲ್ಯಗಳ ಬಗ್ಗೆ ಅರಿಯಬೇಕು ಎಂದರು.
ಸರ್ಕಾರಿ ಮಹಾರಾಜ ಸಂಸ್ಕøತಕಾಲೇಜಿನ ವಿದ್ವಾನ್. ಪ್ರೊ. ಡಾ. ಕೆ.ಎಂ. ಮಹದೇವಯ್ಯ ಅವರು ಮಾತನಾಡಿ ರೇಣುಕಾಚಾರ್ಯರು ಶ್ರೇಷ್ಠ ಸಂತರು ಹಾಗೂ ಪವಾಡ ಪುರುಷರು ಆಗಿದರು. ಜ್ಯಾತ್ಯತೀತ ಮಾನೋಭಾವವನ್ನು ಅಂದಿನ ಕಾಲದಲ್ಲಿ ಸಾರಿದವರು. ಅಸ್ಪøಶ್ಯತೆ ನಿವಾರಣೆಯಗುರಿಯನ್ನು ಹೊಂದಿದವರು. ಸಮ ಸಮಾಜದ ನಿರ್ಮಾಣಕ್ಕಾಗಿತನ್ನ ತತ್ವಗಳು ಸಿದ್ಧಾಂತಗಳ ಮೂಲಕ ಹೋರಾಟ ನಡೆಸಿದ ಸಂತಎಂದು ಹೇಳಬಹುದು. ಪ್ರಸ್ತುತ ಸಮಾಜಕ್ಕೆ ಹಿಂದಿನ ಕಾಲದ ಪರಂಪರೆಯಲ್ಲಿ ಹಲವಾರುಆದರ್ಶ ವಿಷಯಗಳನ್ನು ಬಳುವಳಿಯಾಗಿ ನೀಡಿದ್ದಾರೆಎಂದು ತಿಳಿಸಿದರು.
ಇದೇ ವೇಳೆ ಸಮುದಾಯದ ಮುಖಂಡರು ಮತ್ತು ಪರೀಕ್ಷೆಯಲ್ಲಿಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮೈಸೂರಿನ ಅರಮನೆ ಜಪದಕಟ್ಟೆ ಮಠದಚಂದ್ರಶೇಖರ್ ಶಿವಾಚಾರ್ಯಸ್ವಾಮಿಗಳು, ಮುಡುಕುತೊರೆ ತೋಪಿನ ಮಠದ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿ, ಮುಡುಕನಪುರ ಹಲವಾರ ಮಠದ ಷಡಕ್ಷರ ದೇಶಿಕೇಂದ್ರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಧಿಕಾರಿ ಎಸ್. ಪೂವಿತಾ, ನಗರಸಭೆಯ ಅಧ್ಯಕ್ಷೆ ಸಿ.ಎಂ. ಆಶಾ, ಉಪಾಧ್ಯಕ್ಷೆಪಿ. ಸುಧಾ, ಸದಸ್ಯರಾದ ಹೆಚ್.ಎಸ್. ಮಮತ,ಸಿ.ಎಂ. ಮಂಜುನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಗುರುಲಿಂಗಯ್ಯ, ಸಮುದಾಯ ಮುಖಂಡರಾದ ಎಸ್.ಎಂ. ಮಲ್ಲಿಕಾರ್ಜುನ್, ಸುರೇಶ್, ಕದಳಿ ವೇದಿಕೆಯ ವಸಂತಮ್ಮ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮೊದಲುಶ್ರೀ ಜಗದ್ಗುರುರೇಣುಕಾಚಾರ್ಯರ ಭಾವಚಿತ್ರದ ಮೆರೆವಣಿಗೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿಗಳು, ಕಾಡಾ ಅಧ್ಯಕ್ಷರದ ಜಿ. ನಿಜಗುಣರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರು ಚಾಲನೆ ನೀಡಿದರು.