ಎಲ್ಲಾ ಜ್ಞಾನಗಳ ಬೇರು ಜನಪದ ಸಾಹಿತ್ಯ-ಡಿ,ಬಿ ನಾಯಕ

ಲಿಂಗಸಗೂರು:ಎ.4:ಜನಪದ ಸಾಹಿತ್ಯ ಮೌಖಿಕವಾದ ಅನುಭವ ಸಾಹಿತ್ಯವಾಗಿದ್ದು ಅದು ಎಲ್ಲಾ ಜ್ಞಾನಗಳ ತಾಯಿಬೇರು ಆಗಿದೆ ಎಂದು ಜನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಡಿ,ಬಿ ನಾಯಕ ಹೇಳಿದರು.
ಅವರು ಪಟ್ಟಣದ ಸರಕಾರಿ ಪಿಯು ಕಾಲೇಜು ಆವರಣದಲ್ಲಿ ನಡೆದ ರಾಯಚೂರು ಜಿಲ್ಲಾ ಪ್ರಥಮ ಜನಪದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ರಾಯಚೂರು ಎರಡು ನದಿಗಳ ನಡುವೆ ಇರುವ ಸಂಪದ್ಭರಿತ ನೆಲವಾಗಿದ್ದು ಐತಿಹಾಸಿಕವಾಗಿ ಹಾಗೂ ಆರ್ಥಿಕವಾಗಿ ತನ್ನದೆ ಆದ ಕೊಡುಗೆಯನ್ನು ನಿಡುತ್ತಾ ಬಂದಿರುವ ಈ ನೆಲದಲ್ಲಿ ಸಾಂಸ್ಕೃತಿಕವಾಗಿಯು ಜನಪದಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದ ನೆಲವಾಗಿದೆ ಜನಪದ ಸಾಹಿತ್ಯವೆನ್ನುವುದು ಅದೊಂದು ಪರಂಪರಾಗತವಾಗಿ ಬಂದಿರುವ ಅನುಭವದ ಜ್ಞಾನವಾಗಿದೆ ಇದು ನಮ್ಮ ನೆಲದಲ್ಲಿ ಹುಟ್ಟಿಬೆಳೆದಿರುವುದರಿಂದಲೇ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದೇಶ ಜನಪದ ಸಾಹಿತ್ಯದ ತೊಟ್ಟಿಲು ಎಂದು ಅಭಿಪ್ರಾಯಪಟ್ಟರು.
ಜನತೆಯ ಬದುಕಿನ ಭಾಗವಾದ ಜನಪದ ಸಾಹಿತ್ಯವು ಬಹುತ್ವದ ಸಂಸ್ಕೃತಿಯನ್ನು ಏಕತೆಯಲ್ಲಿ ನೋಡುವಂತೆ ಮಾಡುತ್ತದೆ ನಮ್ಮ ಮಕ್ಕಳ ಕೈಗೆ ಮೊಬೈಲ್ ಬಂದು ಸಾಹಿತ್ಯ ಸಾಂಸ್ಕೃತಿಗಳ ಕಡೆಗೆ ವಾಲದೆ ಯುವಜನತೆ ಮೊಬೈಲ್ ನಲ್ಲಿ ಕಳೆದು ಹೋಗುತ್ತಿರುವುದು ದುರಂತವೆಂದರು ಅಲ್ಲದೆ ಯಾವುದೋ ಸಾಹಿತ್ಯ ಮಾಧ್ಯಮದಲ್ಲಿ ಬರುತ್ತದೆ ಅತ್ತ ವಾಲುವುದಕಿಂತ ಮಾಧ್ಯಮಕ್ಕೆ ಸವಾಲಾಗಿ ಜನಪದವನ್ನು ತೆಗೆದುಕೊಂಡು ಹೋಗುವ ಬಹುದೊಡ್ಡ ಕೆಲಸವಾಗಬೇಕಾಗಿದೆ ಎಂದರು ಆಧುನಿಕತೆಯಲ್ಲಿ ಆತ್ಮೀಯತೆ ಮರೆತುಹೋಗುತ್ತಿದೆ ಇದಕ್ಕೆ ಮುಖ್ಯ ಕಾರಣ ನಮ್ಮ ಕಲಿಕಾ ಪದ್ದತಿ ಜನಪದ ಸಾಹಿತ್ಯವನ್ನು ಸರಕಾರ ಪಿಯು ಪಠ್ಯದಲ್ಲಿ ಅಳವಡಿಸುವುದು ಸೂಕ್ತವಾಗಿದೆ ಅಂದಾಗ ವಿದ್ಯಾರ್ಥಿಗೆ ಜನಪದ ಸಾಹಿತ್ಯದ ಕಡೆಗೆ ಒಲವು ಹೆಚ್ಚಿ ಏನಾದರು ಪರಿವರ್ತನೆ ಕಾಣಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ ಮಾನಪ್ಪ ವಜ್ಜಲ್, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಶಾಸಕ ಡಿ,ಎಸ್ ಹೂಲಿಗೇರಿ ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಾನಪ್ಪ ವಜ್ಜಲರು ಧ್ವಜಾರೋಹಣ ಮಾಡಿದರು, ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನವು ನಡೆಯಿತು ಪುಸ್ತಕ ಬಿಡುಗಡೆ, ತಾಲೂಕಾ ಮಹಿಳಾ ಘಟಕದ ಪದಗ್ರಹಣ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಡಾ ಲಿಂಗಣ್ಣ ಗಾಣದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಜಿ,ಪಂ ಮಾಜಿ ಅಧ್ಯಕ್ಷ ಗುಂಡಪ್ಪನಾಯಕ, ಶಶಿಕಲಾ ಭೋವಿ, ಶಿವಮ್ಮ ಪಟ್ಟದಕಲ್ ಲಕ್ಷ್ಮೀದೇವಿ ನಡುವಿನಮನಿ ಶರಣಪ್ಪ ಆನೆಹೊಸುರು ಸೇರಿದಂತೆ ಇದ್ದರು.