ಎಲ್ಲಾ ಗ್ಯಾರಂಟಿಗಳನ್ನು ಗ್ಯಾರಂಟಿಯಾಗಿ ಕಾಂಗ್ರೇಸ್ ಸರ್ಕಾರ ಮಾಡಲಿದೆ -ಡಾ ಶ್ರೀನಿವಾಸ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 11 :- ಚುನಾವಣಾ ಸಂದರ್ಭದಲ್ಲಿ ಕಾಂಗ್ರೇಸ್ ನೀಡಿದ ಗ್ಯಾರಂಟಿಗಳನ್ನು ಸರ್ಕಾರ ರಚನೆಯಾದ ದಿನದಂದೇ ಎಲ್ಲಾ ಗ್ಯಾರಂಟಿಗಳನ್ನು ಘೋಷಿಸಿದ್ದು ಹಂತಹಂತವಾಗಿ ಇದು ಜನರಿಗೆ ಮುಟ್ಟುವಲ್ಲಿ ಗ್ಯಾರಂಟಿಯಾಗಲಿದೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಅವರು ಇಂದು ಮಧ್ಯಾಹ್ನ ಪಟ್ಟಣದ ಬಸ್ ನಿಲ್ದಾಣದಲ್ಲಿ ಶಕ್ತಿಯೋಜನೆಗೆ ಚಾಲನೆ ನೀಡಿ ಮಾತನಾಡುತ್ತ ಕೂಡ್ಲಿಗಿ ಬಸ್ಸಿನ ನಿಲ್ದಾಣ ನಾನು ಮೂರನೇ ತರಗತಿ ಓದುತ್ತಿರುವಾಗಲೇ ಕಂಡ ಸ್ಥಳವಾಗಿದೆ ಕೂಡ್ಲಿಗಿ ಘಟಕ ಹಳೇ ಘಟಕವಾಗಿದ್ದು ಇದರ ಅಭಿವೃದ್ಧಿಗೆ ಮುಂದಾಗುವೆ ಎಂದರು.
ಕಾರ್ಮಿಕ ಕೂಟದ ಕೂಡ್ಲಿಗಿ ಘಟಕದ ಅಧ್ಯಕ್ಷರಾದ ಚಂದ್ರಮೌಳಿ, ಮಹಾಂತೇಶ ಮಾಬು ದುರುಗಪ್ಪ ಹಾಗೂ ಇತರರು ವಸತಿ ಗೃಹಗಳ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಕಾರ್ತಿಕ್, ಇಓ ವೈ ರವಿಕುಮಾರ,ಕೂಡ್ಲಿಗಿ ಘಟಕದ ವ್ಯವಸ್ಥಾಪಕ ಮರಿಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಕೆಪಿಸಿಸಿ ಸದಸ್ಯೆ ಜಿಂಕಲ್ ನಾಗಮಣಿ,ಪ ಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೋಗಳಿ ಮಂಜುನಾಥ, ಜಿ ಪಂ ಮಾಜಿ ಸದಸ್ಯ ಶಶಿಧರ,ಜಿ ಪಂ ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ,ಕಾಂಗ್ರೆಸ್ ಮುಖಂಡರಾದ ಓಬಣ್ಣ, ಟಿ ಜಿ ಮಲ್ಲಿಕಾರ್ಜುನಗೌಡ, ತಾ ಪಂ ಮಾಜಿ ಸದಸ್ಯ ಬಡೇಲಡಕು ಕೊಟ್ರೇಶ,ಮಾದಿಹಳ್ಳಿ ನಜೀರ್,ಒಂಕಾರನಾಯ್ಕ್, ಗ್ರಾಮಪಂಚಾಯಿತಿ ಸದಸ್ಯ ಜಿ ಎಂ ಸಿದ್ದೇಶ,ಜಯರಾಮ ನಾಯಕ, ಕಾಂಗ್ರೇಸ್ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ದುರುಗೇಶ, ವೀರಭದ್ರಪ್ಪ, ಸೇರಿದಂತೆ ಇತರರಿದ್ದರು.
ನಿವೃತ್ತ ಶಿಕ್ಷಕ ತಳವಾರ ಶರಣಪ್ಪ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

One attachment • Scanned by Gmail