ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಿಂದಅ. 31 ರೊಳಗಾಗಿ ನೋಂದಣಿ ಮಾಡಿಕೊಳ್ಳಲು ಸೂಚನೆ

ಕಲಬುರಗಿ,ಅ.17:ಕೆ.ಪಿ.ಎಮ್.ಇ. (ಏPಒಇ) ಕಾಯ್ದೆ -2007ರ ಅನ್ವಯ ಕಲಬುರಗಿ ಜಿಲ್ಲೆಯ ವ್ಯಾಪ್ತಿಗೊಳಪಡುವ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್‍ಗಳು, ಲ್ಯಾಬೋರೇಟರಿಗಳು, ಡೈಗ್ನೋಸ್ಟೀಕ್ಸೆಂಟರ್, ದಂತ ಕ್ಲೀನಿಕ್ ಹಾಗೂ ದಂತ ಲ್ಯಾಬ್, ರಕ್ತ ನಿಧಿ ಕೇಂದ್ರ, ಆಯುಷ್ ಥೆರಫಿ ಸೆಂಟರ್‍ಗಳು ಹಾಗೂ ಇತ್ಯಾದಿಗಳು ಕಡ್ಡಾಯವಾಗಿ ಕೆ.ಪಿ.ಎಮ್.ಇ. ಕಾಯ್ದೆಯಡಿ ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ 2023ರ ಅಕ್ಟೋಬರ್ 31 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ತಾವು ಪಡೆದ ಪರವಾನಿಗೆಯ ಆದೇಶದಂತೆ ಸಂಬಂಧಪಟ್ಟ ವೈದ್ಯಕೀಯ ಔಷಧ ಪದ್ಧತಿ ಅನುಗುಣವಾಗಿ ಚೌಕಟ್ಟಿನಲ್ಲಿ ಅಗತ್ಯ ಚಿಕಿತ್ಸೆಯನ್ನು ನೀಡಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದ್ದಲ್ಲಿ ಕೆ.ಪಿ.ಎಮ್.ಇ . ಕಾಯ್ದೆ-2007 ರ ಪ್ರಕಾರ ಸಂಬಂಧಪಟ್ಟ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.