ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಶಕ್ತಿ ಇಂದಿನ ಯುವಪೀಳಿಗೆಯಲ್ಲಿದೆ

ದಾವಣಗೆರೆ.ಜ.೧೬: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಂವಿಧಾನದ ಅಡಿಯಲ್ಲಿ ರಚಿತವಾದ ಸಂಸ್ಥೆಗಳು. ಇವು ಕೇವಲ ಭ್ರಷ್ಟಾಚಾರದ ಕೂಪಗಳಾಗಿ ಮಾರ್ಪಟ್ಟಿವೆ. ಇದಲ್ಲದೆ ಮಾಧ್ಯಮ ಕ್ಷೇತ್ರವು ಇಂದು ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾರಣ ಈ  ಎಲ್ಲಾ ಕ್ಷೇತ್ರಗಳನ್ನು ಬದಲಾವಣೆ ತರುವ ಶಕ್ತಿ ಇಂದಿನ ಯುವಪೀಳಿಗೆಯಲ್ಲಿದ್ದು ಕಾರಣ ಯುವಪೀಳಿಗೆ ಈ ನಾಲ್ಕು ಅಂಗಗಳನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಮುಂದೆ ಬರಬೇಕಾಗಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ  ತಿಳಿಸಿದರುನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಿದ್ದಗಂಗಾಶಾಲೆಯ 53ನೇ ವಾರ್ಷಿಕ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದುರಾಸೆಯಿಂದಾಗಿ ನಾವು ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ. ದುರಾಸೆಯಿಂದಾಗಿ  ನಮ್ಮಲ್ಲಿನ ಎಲ್ಲಾ ಸಾತ್ವಿಕ ಗುಣಗಳನ್ನು ಕಳೆದುಕೊಂಡು ರಾಕ್ಷಸಿ ಗುಣಗಳನ್ನು ಮೈಗೂಡಿಸಿ ಕೊಂಡಿದ್ದೇವೆ. ಕಾರಣ ಸಮಾಜದಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಹೇಳಿದರು.ಸಮಾಜದಲ್ಲಿ ನಾನೊಬ್ಬನೇ ಬದಲಾವಣೆ ತರುತ್ತೇನೆ ಎಂದರೆ ಸಾಧ್ಯವಿಲ್ಲ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಅದರಲ್ಲೂ ಇಂದಿನ ಯುವ ಪೀಳಿಗೆ ಇಂತಹ ಸಮಾಜದಲ್ಲಿ ಒಂದಾಗಲು ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.ಹದಗೆಟ್ಟಿರುವ ಕಲುಷಿತ ಸಮಾಜದಲ್ಲಿ ನಾವು ಈಗಲೇ ಬದಲಾವಣೆ ತರದಿದ್ದಲ್ಲಿ ಮುಂಬರುವ ದಿನಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ  ಬದುಕಲು ಸಾಧ್ಯವಿಲ್ಲ. ಒಂದು ವೇಳೆ ನಾವು ಕ್ರಾಂತಿಯಿಂದಲೂ ಏನಾದರೂ ಮಾಡಬೇಕೆನ್ನುವುದಾದರೆ ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ನಮ್ಮ ದೇಶ 25 ದೇಶಗಳಿಗಿಂತಲೂ ಹೆಚ್ಚು ದೇಶಗಳಾಗಿ ಹೊಡೆದು ಹೋಗುವುದರಲ್ಲಿ ಯಾವುದೇ ಸಂದೇಶವಿಲ್ಲ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಗಂಗಾ ಶಾಲೆಯ ಮುಖ್ಯಸದಥೆ ಜಸ್ಟಿನ್ ಡಿಸೋಜಾ ವಹಿಸಿದ್ದರು ವೇದಿಕೆಯಲ್ಲಿ ನಿರಂಜನ್, ಸುಬ್ರಮಣ್ಯ, ಗಣೇಶ ಭಟ್ ವಾಣಿಶ್ರೀ, ಗುರುಪ್ರಸಾದ್ ಇತರರು ಇದ್ದರು.