ಎಲ್ಲಾರೊಂದಿಗೂ ಸೌಹಾರ್ಧತೆ- ರಾಜಾ ವೆಂಕಟಪ್ಪ ನಾಯಕ

ಗಣೇಶ ಮೂರ್ತಿ ದರ್ಶನ ಪಡೆದ ಆರ್.ವಿ.ಎನ್
ಸಿರವಾರ.ಸೆ.೧೦- ಪಟ್ಟಣದ ವಿವಿಧ ವಾರ್ಡಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಗಳ ದರ್ಶನವನ್ನು ಪಡೆದ ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಗಣೇಶ ವಿಸರ್ಜನೆಗಾಗಿ ಮಾಡಲಾಗುತ್ತಿದ ಮೆರವಣಿಗೆಯಲ್ಲಿ ಡಿಜೆ ಸೌಂಡನಲ್ಲಿ ಯುವಕರೊಂದಿಗೆ ಕುಣಿದು ಅವರ ಉತ್ಸಾಹ ಹಿಮ್ಮಡಿಗೊಳಿಸಿದರು.
ಪಟ್ಟಣದ ವಾರ್ಡ್ ನಂ.೧೧ ರ ಬಿ.ಬಿ.ಪಾಟೀಲ್ ಕಾಲೋನಿ, ವಿಶ್ವಹಿಂದು ಪರಿಷತ್, ಬಸ್ ನಿಲ್ದಾಣದ ಎದರು ಗಡೆ ಗಣೇಶ ಮೂರ್ತಿ ಮುಂದೆ ದೀಪೋತ್ಸವ ಉದ್ಘಾಟಿಸಿ, ವಾರ್ಡ್ ನಂ.೧ ನೀಲಮ್ಮ ಕಾಲೋನಿಯ ಗಣೇಶ ಮೂರ್ತಿ ದರ್ಶನ ಪಡೆದರು. ಇದಕ್ಕೂ ಪೂರ್ವದಲ್ಲಿ ಬಯಲು ಆಂಜನೇಯ್ಯ ದೇವಸ್ಥಾನದ ಹತ್ತಿರ ಸಿದ್ದಿ ವಿನಾಯಕ ಗೆಳೆಯರ ಬಳಗ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಸುಮಾರು ೩೦ ನಿಮಿಷಗಳ ಕಾಲ ಕುಣಿಯುವ ಮೂಲಕ ಯುವಕರಿಗೆ ಉತ್ಸಾಹ ತುಂಬಿದರು.
ನಂತರ ಮಾತನಾಡಿದ ಅವರು ಎರಡು ವರ್ಷಗಳ ಕಾಲ ಕೋವಿಡ್ ಕಾರಣದಿಂದ ಎಲ್ಲಾ ಹಬ್ಬಗಳು ಸರಳ ರೀತಿಯಲ್ಲಿ ಆಚರಣೆ ಮಾಡಲಾಗಿತು. ಅದರಲೂ ಗಣೇಶ ಹಬ್ಬ ಎಲ್ಲಾ ಯುವಕರು ಕೂಡಿ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಈ ರೀತಿಯ ಆಚರಣೆ ಮಾಡಿ ಎರಡು ವರ್ಷಗಳಾಗಿವೆ, ಎಲ್ಲಾರೊಂದಿಗೆ ಹಬ್ಬವನ್ನು ಆಚರಣೆ ಮಾಡುವುದೇ ಒಂದು ರೀತಿಯ ಸಂತೋಷವಾಗುತ್ತದೆ. ಎಲ್ಲಾ ಹಬ್ಬಗಳಲ್ಲಿ ಪಾಲ್ಗೊಂಡು ಶುಭಾಷಯಗಳು ಹೇಳಲಾಗುವುದು. ಎಲ್ಲಾರೊಂದಿಗೆ ನಾನು ನಿಮ್ಮ ಎಲ್ಲಾ ಸಲಹೆ ಸೂಚನೆಗಳನ್ನು ಪಾಲಿಸುವೆ ಎಂದರು.
ಈ ಸಂದರ್ಭದಲ್ಲಿ ಲೋಕರೆಡ್ಡಿ, ಆದರ್ಶನಾಯಕ, ನಾಗರಾಜಗೌಡ, ದಾಸಪ್ಪ, ಚಂದ್ರಶೇಖರ, ಯಲ್ಲಪ್ಪ ದೊರೆ, ರವಿಗೌಡ, ದೇವೆಂದ್ರಸ್ವಾಮಿ, ಶಾಂತಪ್ಪ ಪಿತಗಲ್ ಸೇರಿದಂತೆ ಇನ್ನಿತರರು ಇದರು.