ಎಲ್ಲವೂ ನನ್ನದೆಂಬ ಭಾವಬೇಡ, ನಿನ್ನದೆಂಬುದಿರಲಿ : ಶಹಾಪೂರಶ್ರೀ

ತಾಳಿಕೋಟೆ:ಜೂ.26: ಗ್ರಾಮದೇವತೆಯೆಂಬವಳಿಗೆ ಭಾಷೆ ಇದೆ ಆ ಗ್ರಾಮದೇವತೆಗೆ ಅರ್ಥವಾಗುವ ಭಾಷೆ ಭಕ್ತಿಯೆಂಬುದಾಗಿದೆ ಭಕ್ತಿಯೆಂಬುದರಲ್ಲಿ ಮಹಾಶಕ್ತಿಯೊಂದು ಅಡಗಿದೆ ಎಂದು ಶಹಾಪೂರದ ವಿಶ್ವಕರ್ಮ ಏಕದಂಡಿಮಠದ ಪೂಜ್ಯಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ನುಡಿದರು.

  ಶನಿವಾರರಂದು ಸ್ಥಳೀಯ ರಾಜವಾಡೆಯಲ್ಲಿ ಗ್ರಾಮದೇವತಾ ಜಾತ್ರೋತ್ಸವ ಕುರಿತು ಏರ್ಪಡಿಸಲಾದ ಆಧ್ಯಾತ್ಮಿಕ ಪ್ರವಚನದಲ್ಲಿ ಗ್ರಾಮದೇವತೆಯ ಶಕ್ತಿ ಎಂತದ್ದರ ಕುರಿತು ಭಕ್ತ ಸಮೂಹಕ್ಕೆ ವಿವರಿಸಿದ ಅವರು ಗ್ರಾಮದೇವತೆಯ ಸ್ಥಾನಮಾನ ಗಿಟ್ಟಿಸಿಕೊಂಡ ಗ್ರಾಮದೇವತೆಯ ವಿಷಯ ಪ್ರಸ್ತಾಪಿಸಿದ ಶ್ರೀಗಳು ಪರ್ವತರಾಜನೆಂಬ ಮಹಾರಾಜ ತನ್ನ ಮಗಳ ಅಪೇಕ್ಷೆಯಂತೆ ಮಗಳನ್ನು ಪರಮಾತ್ಮನಿಗೆ ಕೊಟ್ಟು ಮದುವೆ ಮಾಡಬೇಕೆಂದು ಇಚ್ಚಿಸುತ್ತಾನೆ ಮಗಳು ತಂದೆಗೆ ಪರಮಾತ್ಮನ ವಿವಾಹವಾಗಲು ಏನು ಮಾಡಬೇಕೆಂದು ಕೇಳಿದಾಗ ತಪಸ್ಯಗೈದು ಆತನ ಒಲುಮೆ ಪಡೆಯಬೇಕೆಂದನಂತೆ ಅದನ್ನು ಅರ್ಥೈಯಿಸಿಕೊಂಡ ಪುತ್ರಿ 50 ವರ್ಷಗಳ ವರೆಗೆ ತಪ್ಪಸ್ಸಿಗೆ ಕುಳಿತಾಗ ಪರಮಾತ್ಮ ಪ್ರತ್ಯಕ್ಷನಾಗಿ ಎನು ಬೇಕೆಂದು ಕೇಳಿದಾಗ ನಿನ್ನ ಜೊತೆ ಮದುವೆ ಮಾಡಿಕೊಳ್ಳಬೆಕೆಂಬ ಆಸೆ ನನ್ನದಾಗಿದೆ ಪರಮಾತ್ಮ ಮದುವೆ ಮಾಡಿಕೊಳ್ಳುತ್ತೆನೆ ಆದರೆ ಗಂಡ ಹೆಂಡತಿಯಾದರೆ ಜಗತ್ತಿನಲ್ಲಿ ಇರುವ ಕೆಲಸ ಕಾರ್ಯಗಳನ್ನು ಮಾಡುವವರ್ಯಾರು ಗಾಳಿ ಉಸಿರು ಪಶು ಪಕ್ಷಿ ರೈತರಿಗೆ ಸೈನಿಕರಿಗೆ ಆಹಾರ ಹಾಕಿ ಶಕ್ತಿಕೊಡುವವರ್ಯಾರು ಅಂದಾಗ ಮದುವೆಯಾಗುವದು ಬೇಡ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮದೇವತೆಯಾಗಿ ನೀನು ಗ್ರಾಮಗಳ ರಕ್ಷಣೆ ಮಾಡು ಎಂದು ಪರಮಾತ್ಮ ಹೇಳಿದಂತೆ ಪರ್ವತರಾಜನ ಪುತ್ರಿಗೆ ಪಾರ್ವತಿ ಎಂಬ ಸ್ಥಾನಮಾನ ದೊರೆಯಿತಲ್ಲದೇ ಪ್ರತಿಯೊಂದು ಗ್ರಾಮದಲ್ಲಿ ಗ್ರಾಮದೇವತೆಯಾಗಿ ಭಕ್ತರನ್ನು ರಕ್ಷಿಸಲು ಪ್ರಾರಂಭಿಸದಳೆಂಬುದರ ಕುರಿತು ಕಥೆಯೊಂದನ್ನು ಹೇಳಿದ ಶ್ರೀಗಳು ಗ್ರಾಮದೇವತೆಗಿದ್ದ ಸ್ಥಾನ ಮಾನ ಅದು ಕೈಲಾಸವಾಗುತ್ತದೆ ಗ್ರಾಮದೇವತೆ ಆಕೆಯ ಸಾಕ್ಷಾತ್ ಪಾರ್ವತಿ ನೆಲೆಸಿದಂತೆ ಎಂದು ಪರಮಾತ್ಮ ಪಾರ್ವತಿಯರ ವಿಷಯ ಕುರಿತು ತಿಳಿಸಿದರಲ್ಲದೇ ದಾನ ಧರ್ಮ ಮಾಡಿದರೆ ನಾನು ಮಾಡಿನಿ ನಾನು ಕೊಟ್ಟಿನಿ ಎಂಬುದು ಭಾವಬೇಡ ನಾನು ಏನೂ ಮಾಡಿಲ್ಲವೆಂಬುದು ಮನಸ್ಸಿನಲ್ಲಿದ್ದರೆ ಸಾಕು ಗ್ರಾಮದೇವತೆ ಅಂತವರ ಮನೆಯಲ್ಲಿ ಸದಾ ವಾಸಿಸುತ್ತಾಳೆಂದು ಶ್ರೀಗಳು ಹೇಳಿದರಲ್ಲದೇ ಲಚ್ಚ್ಯಾಣ ಗ್ರಾಮದಲ್ಲಿ ನಡೆದ ಘಟನೆ ಕುರಿತು ಗುರುಶಿಷ್ಯರ ಸಂಭಂದ ಹೆಗಿತ್ತೆಂಬುದರ ಕುರಿತು ಚಿಕ್ಕ ಕಥೆಯೊಂದನ್ನು ಹೇಳಿ ಗುರು ಸಿದ್ದಪ್ಪ ಮಹರಾಜರು ಶಿಷ್ಯ ಕನ್ನೊಳ್ಳಿ ದೊಡ್ಡಪ್ಪಗೌಡರು ತುಳಜಾಪೂರಕ್ಕೆ ತೆರಳಿದಾಗ ಭಕ್ತಿಹೊಂದಿದ ಇವರು ನಡುದಾರಿಯಲ್ಲದೇ ಶಿಷ್ಯ ಗುರುಗಳಿಗೆ ಕೇಳಿ ನನಗೆ ಕರಿಗಡುಬು ಬೇಕೆಂದನಂತೆ ರಸ್ತೆಯಲ್ಲಿ ಕರಿಗಡುಬು ಎಲ್ಲಿಂದ ಬರಬೇಕು ಎಂದು ಸಿದ್ದಪ್ಪ ಮಹಾರಾಜರು ಭಕ್ತ ದೊಡ್ಡಪ್ಪಗೌಡರಿಗೆ ಹೇಳಿದಾಗ ಗುರುಶಿಷ್ಯರ ಭಕ್ತಿಗೆ ಮೆಚ್ಚಿದ ತುಳಜಾಭವಾನಿ ಮಹಿಳೆಯೋರ್ವಳ ವೇಷ ಹಾಕಿಕೊಂಡು ಪುಟ್ಟಿಯಲ್ಲಿ ಕರಿಗಡುಬು ತುಂಬಿಕೊಂಡು ಇವರ ಹತ್ತಿರ ಬಂದು ನಿಮಗೆ ಎನು ಬೇಕಾಗಿದೆ ನಮಗ ಕರಿಗಡುಬು ಬೇಕಾಗಿದೆ ಎಂದಾಗ ಪುಟ್ಟಿತುಂಬ ಕರಿಗಡಬು ತುಂಬಿದ್ದುವಂತೆ ಇದರ ಅರ್ಥ ಭಕ್ತಿಯೊಂದಿದ್ದರೆ ನಿಮ್ಮ ಬೇಕು ಬೇಡಿಕೆಗಳು ನಿಮ್ಮ ಇದ್ದ ಸ್ಥಾನದಲ್ಲಿಯೇ ಬರಲಿದೆ ಎಂದು ಹೇಳಿದ ಶ್ರೀಗಳು ಶಿವ ಮತ್ತು ಶಕ್ತಿ ಸಾಮಾನ್ಯವಲ್ಲಾ ಭಕ್ತಿಯನ್ನು ಹುಟ್ಟಿಸಿಕೊಂಡರೆ ಮುಕ್ತಿಯೆಂಬುದು ದೊರೆಯಲಿದೆ ಕಾರಣ ಗ್ರಾಮದೇವತೆಗ ಸದಾ ನಂದಾ ದೀಪ ಬೆಳಗಲಿ ಇದರಿಂದ ಗ್ರಾಮ ಪಟ್ಟಣ ಬೆಳಗಲಿ ಎಂದು ಹೇಳಿದ ಶ್ರೀಗಳು ಕೊನೆಗೆ ದೇವರನ್ನು ಹುಡುಕಲು ಹೋದ ಬಾಲಕನೋರ್ವ ಕೊನೆಗೆ ದೇವರು ಸಿಗಲಾರದೇ ನಿರಾಶನಾಗಿ ಮನೆಗೆ ಬಂದಾಗ ತಾಯಿ ದೇವರು ಸಿಕ್ಕನೇನಪ್ಪ ಎಂದು ಕೇಳಿದಾಗ ಇಲ್ಲ ಎಂದು ಕೊನೆಗೆ ತಾಯಿಯೇ ದೇವರೆಂದು ಆಕೆಯ ಪಾದಕ್ಕೆ ಎರಗಿ ಭಕ್ತಿಭಾವದಿಂದ ನಡೆದು ಮೋಕ್ಷದ ಮಾರ್ಗವನ್ನು ಹಿಡಿದನೆಂಬುದರ ಕುರಿತು ಶ್ರೀಗಳು ಬಹು ಮಾರ್ಮಿಕವಾಗಿ ವಿವರಿಸಿದರು.
ಇದೇ ಸಮಯದಲ್ಲಿ ಜಾತ್ರಾ ಸಮೀತಿಯ ವತಿಯಿಂದ ಶ್ರೀಗಳಿಗೆ ಸನ್ಮಾನಿಸಿ ಗೌರವಿಸಲಾಯಿತಲ್ಲದೇ ಜಾತ್ರಾಉತ್ಸವಕ್ಕೆ ಕಾಣಿಕೆಗಳನ್ನು ನೀಡಿದಂತ ಮಹನೀಯರಿಗೆ ಸನ್ಮಾನಿಸಿ ಗೌರವಿಸಲಾಯಿತು.