ಎಲ್ಲವು ಇದ್ದು ಆರೋಗ್ಯ ಸರಿ ಇಲ್ಲದಿದ್ದರೆ ಎಲ್ಲವು ಶೂನ್ಯ: ಗ್ರಾ. ಪಂ.ಅ. ಅಧಿಕಾರಿ ಭೀಮರಾಯ

ಗುರುಮಠಕಲ್:ಜೂ.3:ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ನರೇಗಾ ಕೂಲಿ ಕಾರ್ಮಿಕರಿಗಾಗಿ ಹಮ್ಮಿಕೊಂಡ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಪಂಚಾಯತಿಯ ನರೇಗಾ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕರು ರಾಮಚಂದ್ರ ಬಸುದೆ ಅವರು ಮಾತನಾಡಿ ಕೂಲಿ ಕಾರ್ಮಿಕರು ಅವರು ಕೆಲಸ ಮಾಡುವ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಆಗಬೇಕು ಕೂಲಿ ಕಾರ್ಮಿಕರಿಗೆ ಅವರ ಆರೋಗ್ಯದಲ್ಲಿ ಏರು ಪೇರು ಆಗಬಾರದು. ಯಾವುದೇ ಒಂದು ಯೋಜನೆ ಸಪಲವಾಗಬೇಕಾದರೆ ಕೂಲಿಕಾರ್ಮಿಕರೆ ಬೆನ್ನೆಲುಬು. ಕೂಲಿ ಕಾರ್ಮಿಕರ ಆರೋಗ್ಯ ಸುಧಾರಣೆ ಯಾದಲ್ಲಿ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದು ಹೇಳಿದರು. ಅವರು ಶುಕ್ರವಾರ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನದಡಿ ಗುರುಮಠಕಲ್ ತಾಲೂಕಿನ ಚಂಡರಿಕಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೂಲಿಕಾರ್ಮಿಕರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೆ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಅವರು ಮಾತನಾಡಿ ಆರೋಗ್ಯವೇ ಮಹಾ ಭಾಗ್ಯ ವೆಂಬಂತೆ ಎಲ್ಲವು ಇದ್ದು ಆರೋಗ್ಯ ಸರಿ ಇಲ್ಲದಿದ್ದರೆ ಎಲ್ಲವು ಶೂನ್ಯ ಅನ್ನುವ ಹಾಗೆ ಕೂಲಿಕಾರ್ಮಿಕರು ಯಾವುದೇ ತರಹದ ಅನಾರೋಗ್ಯದಿಂದ ಬಳಲ ಕೂಡದು ಕಾರ್ಯನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಸ್ವಾವಲಂಬನೆ ಜೊತೆಗೆ ಅವರ ಆರೋಗ್ಯವು ವೃದ್ಧಿಸ ಬೇಕು ಅನ್ನುವ ಹಿತದೃಷ್ಟಿಯಿಂದ ನಮ್ಮ ಘನವೆತ್ತ ಸರಕಾರ ಆರೋಗ್ಯ ಶಿಬಿರವನ್ನು ಮಾಡಬೇಕೆನ್ನುವ ಉದ್ದೇಶದಿಂದ ಇಂದು ನಾವು ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದಿವಿ. ಕಾರ್ಯಕ್ರಮದ ಮುಖ್ಯ ಉದ್ದೇಶ ರೋಗ ಬಂದ ಮೇಲೆ ನಾವು ಆಸ್ಪತ್ರೆಗೆ ಹೋಗುವುದಕ್ಕಿಂತ ರೋಗಬಾರದೆ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯವಾದದ್ದು ಎಂದು ಹೇಳಿದರು ಮತ್ತು ಚಂಡರಿಕಿ ಸಮುದಾಯ ಆರೋಗ್ಯ ಅಧಿಕಾರಿ ಮೌನೇಶ ಮಾತನಾಡಿ ಬಿಪಿ ಹಾಗೂ ಸಕ್ಕರೆ ಕಾಯಿಲೆ ಹಾಗೂ ರಕ್ತಪರೀಕ್ಷೆ ಇವು ಪ್ರತಿ ಯೋಬ್ಬರು ವರ್ಷಕ್ಕೆ ಎರಡು ಬಾರಿಯಾದರೂ ಆಸ್ಪತ್ರೆಗೆ ತೆರಳಿ ವೈದ್ಯಾಧಿಕಾರಿಗಳನ್ನು ಭೆಟ್ಟಿಯಾಗಿ ತಪ್ಪದೆ ಪರೀಕ್ಷೆ ಮಾಡಿಸಿ ಕೊಳ್ಳಬೇಕು ಪ್ರತಿಯೊಬ್ಬರೂ ಹೆಚ್ಚು ಹೆಚ್ಚಾಗಿ ನೀರು ಕುಡಿದು ಸಮಯಕ್ಕೆ ಸರಿಯಾಗಿ ಊಟ ಮಾಡಿದಾಗ ಬಂದ ಕಾಯಿಲೆಗಳು ಸ್ವಲ್ಪ ಸಮಯದಲ್ಲೇ ಗುಣಮುಖವಾಗುತ್ತದೆ ನಿವೆಲ್ಲಾರು ಕಷ್ಟ ಪಟ್ಟು ದುಡಿಯುತ್ತಿರುವ ಸಲುವಾಗಿ ಸರ್ಕಾರವು ನಿಮ್ಮ ಸಲುವಾಗಿ ಇಂತಹ ಒಳ್ಳೆಯ ಯೋಜನೆಗಳನ್ನು ತಂದಿದೆ ನಿವೆಲ್ಲಾರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕರವಸೂಲಿಗರಾದ ಖಾಜಾಹುಶೇನ. ಬೆರಳಚ್ಚುಗರಾದ ಶ್ರೀ ರಾಮ. ಆಶಾ ಕಾರ್ಯಕರ್ತೆಯರು ಕಮಲಾಕ್ಷಿ .ಜಯಮ್ಮ. ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸ್ವಯಂ ಸೇವಕಿಯರಾದ ಶ್ರೀ ಮತಿ ರಾಧ ಹಾಗೂ ಕೂಲಿಕಾರ್ಮಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.