ಎಲ್ಲರ ಸಹಕಾರವೇ ನನ್ನ ವೃತ್ತಿ ಬೆಳವಣಿಗೆಗೆ ಕಾರಣ:ಘೋರ್ಪಡೆ

ತಾಳಿಕೋಟೆ:ಮಾ.29: ಕಳೆದ 44 ವರ್ಷಗಳಿಂದ ತಾಳಿಕೋಟೆ ಪಟ್ಟಣದಲ್ಲಿ ಪತ್ರಿಕೋಧ್ಯಮದಲ್ಲಿ ಸೇವೆ ಸಲ್ಲಿಸುತ್ತಾ ಸಾಗಿಬಂದ ನನ್ನನ್ನು ತಾಳಿಕೋಟೆ ನಾಗರಿಕರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಅಲ್ಲದೇ ಮಾತೆಯರ ಸಹಕಾರವೇ ಕಾರಣವಾಗಿದೆ ಎಂದು ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಹೇಳಿದರು.
ಗುರುವಾರರಂದು ಸ್ಥಳೀಯ ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಪುರಾಣ ಪ್ರವಚನದ ಸಾರವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಎಲ್ಲ ಭಕ್ತಸಮೂಹಕ್ಕೆ ಓದಲು ಅನುವು ಮಾಡಿಕೊಟ್ಟ ಹಿರಿಯ ಪತ್ರಕರ್ತರ ಜಿ.ಟಿ.ಘೋರ್ಪಡೆ ಅವರಿಗೆ 75ನೇ ವರ್ಷದ ವಯೋಮಿತಿ ಹೊಂದಿದ್ದ ಪ್ರಯುಕ್ತ ಶ್ರೀ ಶರಣರ ಮಠದ ವತಿಯಿಂದ ಏರ್ಪಡಿಸಲಾದ ವಜ್ರ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ತಾಳಿಕೋಟೆ ಹಾಗೂ ಸುತ್ತಮುತ್ತಲಿನ 60 ಗ್ರಾಮಗಳ ಜನತೆ ನೀಡಿದ ಸಹಕಾರ ನಾನೇಂದೂ ಮರೆಯಲಾರೆ ನನ್ನ ಬರವಣಿಗೆಗೆ ಬೆನ್ನೆಲುಬಾಗಿ ನಿಂತು ನನಗೆ ಸ್ಪೂರ್ತಿ ನೀಡಿದ ಕಾರಣದಿಂದಲೇ ಅನೇಕ ದಿಟ್ಟತನದ ವರದಿಗಳನ್ನು ಮಾಡಲು ಸಹಾಯಕಾರಿಯಾಗಿದೆ ಆ ಜನರ ಸಹಕಾರವನ್ನು ನಾನೇಂದೂ ಮರೆಯಲಾರೆ ಎಂದರು.
ಶ್ರೀ ಸಾಂಭಪ್ರಭು ಶರಣಮುತ್ಯಾರವರ ಶ್ರೀಮಠದ ವತಿಯಿಂದ ಇಂದು ನನ್ನ 75ನೇ ವಯೋಮಿತಿ ಕುರಿತು ವಜ್ರಮೋಹತ್ಸವ ಆಚರಣೆ ನಡೆಸಿರುವದು ನನ್ನ ಹಾಗೂ ನನ್ನ ಕುಟುಂಭದ ಸೌಭಾಗ್ಯವೇ ಸರಿ ಎಂದ ಅವರು ಸುಮಾರು 45 ವರ್ಷಗಳ ಕಾಲ ನಾನು ಸಲ್ಲಿಸಿದ ಸೇವೆಗೆ ಇಂದು ವಜ್ರಮಹೋತ್ಸವ ಎಂಬ ಕಾರ್ಯಕ್ರಮ ಏರ್ಪಡಿಸಿರುವದು ಅದರ ಪ್ರತಿಫಲವೇ ಇಂದು ದೊರೆತ ಸೌಭಾಗ್ಯವಾಗಿದೆ ಎಂದರು. ತಾಳಿಕೋಟೆ ಪಟ್ಟಣದಲ್ಲಿ ಈ ಹಿಂದೆ ಬಸ್ ಘಟಕ ನಿರ್ಮಾಣಕ್ಕಾಗಿ, ಪತ್ರಿಕೆಗಳಲ್ಲಿ ವರಧಿ ಮಾಡಿದೆ ಇದು ಅಲ್ಲದೇ ತಾಳಿಕೋಟೆ ತಾಲೂಕಾ ರಚನೆಗಾಗಿಯೂ ಅಲ್ಲದೇ ತಾಳಿಕೋಟೆ ಪಟ್ಟಣಕ್ಕೆ ಅಗ್ನಿ ಶಾಮಕ ಠಾಣೆ ಪ್ರಾರಂಬಿಸುವ ಕುರಿತು ಇಂತಹ ಅನೇಕ ಪ್ರಮುಖ ಸುದ್ದಿಗಳನ್ನು ವರಧಿಮಾಡಿದ ಪರಿಣಾಮ ಈಗಾಗಲೇ ಅವೇಲ್ಲವುಗಳನ್ನು ಕಾರ್ಯಗತ ಮಾಡಿಸಿಕೊಂಡ ಕೀರ್ತಿ ತಾಳಿಕೋಟೆ ಜನತೆಗೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಸಲ್ಲುತ್ತದೆ ಎಂದರು.
ನನ್ನಲ್ಲಿರುವ ಸತ್ಯ ಧರ್ಮ ಪ್ರೇಮ ಶಾಂತಿಯ ವಿಚಾರ ಇಂದು ಈ ಮಹಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮೇಲ್ಲರ ಆಶಿರ್ವಾದ ಪಡೆಯಲು ಅನುವುಮಾಡಿಕೊಟ್ಟಿದೆ ಎಲ್ಲರೂ ನೀಡಿದ ಪ್ರೀತಿ ವಿಸ್ವಾಸ ನಾನೇಂದೂ ಮರೆಯಲಾರೆ ಇಂದು ನನಗೆ ಮಾಡಿದ ಸನ್ಮಾನ ಇನ್ನೂ ನನಗೆ ನನ್ನ ವೃತ್ತಿಗೆ ರಕ್ಷಣೆಯಾಗಿ ಮಾರ್ಪಡಲಿ ಎಂದು ಆಶಿಸಿದರು.
ಇದೇ ಸಮಯದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಬಿ.ಕೆ.ಸುವರ್ಣಅಕ್ಕನವರು, ಭಂಟನೂರಿನ ಶರಣೆ ಕಾಶಿಬಾಯಿ ಅಮ್ಮನವರು, ಪುರಾಣಿಕರಾದ ಶ್ರೀ ಡಾ.ಶಿವಲಿಂಗಯ್ಯ ಶರಣರು, ಶರಣೆ ಕಾಶಿಬಾಯಿ ಶರಣರ ಅವರು ಪತ್ರಕರ್ತರಾದ ಜಿ.ಟಿ.ಘೋರ್ಪಡೆ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಬಿ.ಕೆ.ಕಾಶಿಬಾಯಿ ಅಜ್ಜಿ, ಶರಣೆ ಕಾಶಿಬಾಯಿ, ಕಾಶಿಬಾಯಿ ಶರಣರ, ಶ್ರೀಮತಿ ಪ್ರೇಮಾಬಾಯಿ ದೇಗಿನಾಳ, ಬಿ.ಕೆ.ಬಸವರಾಜ, ಬಿ.ಕೆ.ಪಾರ್ವತಿ, ಬಿ.ಕೆ.ರತ್ನಾ, ಸಿದ್ದನಗೌಡ ಪೊಲೀಸ್‍ಪಾಟೀಲ(ಕರಿಭಾವಿ), ಬಂಡೆಪ್ಪಗೌಡ ಬಿರಾದಾರ, ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.