ಎಲ್ಲರ ಸಹಕಾರದಿಂದ ಸಹಕಾರ ಸಂಘ ಬೆಳೆಯುತ್ತದೆ: ಶರಣಬಸಪ್ಪಗೌಡ ದರ್ಶನಾಪೂರ

ಜೇವರ್ಗಿ:ಜು.10: ಒಂದು ಸಹಕಾರಿ ಸಂಘ ಬೆಳೆಯಲು ಎಲ್ಲರ ಸಹಕಾರ ಬೇಕು. ಸರ್ವರ ಶ್ರಮದಿಂದ ಮಾತ್ರ ಸಹಕಾರಿ ಸಂಘ ಬೆಳೆಯುತ್ತದೆ ಎಂದು ಸಣ್ಣ ಕೈಗಾರಿಕ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಶರಣಬಸಪ್ಪಗೌಡ ದರ್ಶನಾಪೂರ ಅಭಿಮತಪಟ್ಟರು.
ಪಟ್ಟಣದ ಮೈಹಿಬೂಬ್ ಫಂಕ್ಷನ್ ಹಾಲ್ ನಲ್ಲಿ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಸಂಘ ನಿ. ಉದ್ಘಾಟನಾ ಸಮಾರಂಭ ಹಾಗೂ ನೂತನ ಸಚಿವರು ಮತ್ತು ಶಾಸಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು.
ಬಡವರ ಅನುಕುಲಕ್ಕಾಗಿ, ಅವರ ಉದ್ದಾರಕ್ಕಾಗಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಹಕಾರಿ ಸಂಘಗಳಿಂದಲೆ ಅನೇಕ ಮದ್ಯಮ್ಮ ವರ್ಗದ ಜನರು ತಮ್ಮ ಜೀವನಕ್ಕೆ ಅನುಕುಲ ಮಾಡಿಕೊಂಡಿದ್ದಾರೆ. ಎಲ್ಲರ ಸಹಕಾರದಿಂದ ಸಂಘ ಬೆಳೆಯುತ್ತದೆ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಹಕಾರಿ ಸಂಘ ಬೆಳೆಯುತ್ತದೆ ಎಂದರು.
ನಂತರ ಶಾಸಕ ಡಾ. ಅಜಯಸಿಂಗ್ ಮಾತನಾಡಿ ನಮ್ಮ ಅಣ್ಣನಂತಿರುವ ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪೂರ ರವರು ಮಂತ್ರಿಯಾಗಿದ್ದಾರೆ ಅವರು ಮಂತ್ರಿಯಾದರೆ ನಾನು ಮಂತ್ರಿಯಾದಂತೆ. ರೆಡ್ಡಿ ಸಮಾಜದ ಸೌಹಾರ್ದ ಸಹಕಾರಿ ಸಂಘ ತಾಲೂಕಿನ ಜನರ ಅನುಕಲಕ್ಕೆ ಒಂದು ಶಕ್ತಿಯಾಗಲಿ. ಬಡವರ ಬದುಕಿಗೆ ಆಸರೆಯಾಗಲಿ. ತಾಲೂಕಿನ ಬಡವರ ಬದುಕಿಗೆ ಒಂದು ಆಧಾರ ಸ್ಥಂಬವಾಗಲಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕೇದಾರಲಿಂಗಯ್ಯ ಹಿರೇಮಠ, ನಿಂಗಣ್ಣ ದೊಡ್ಡಮನಿ, ಸೂರ್ಯಕಾಂತ ರಾಕಲೇ, ಅಪ್ಪಣ್ಣಗೌಡ ಪಾಟೀಲ್ ಹರವಾಳ, ವಿಶಾಲಾಕ್ಷಿ ಕರೆಡ್ಡಿ, ವಿ. ಶಾಂತರೆಡ್ಡಿ, ತಾಲೂಕ ದಂಡಾಧೀಕಾರಿ ರಾಜೇಶ್ವರಿ ಎಸ್ ಪಿ, ಚನ್ನಾರೆಡ್ಡಿ ಪಾಟೀಲ್, ಸಿದ್ದಲಿಂಗರೆಡ್ಡಿ ಇಟಗಾ, ಎಂಬಿ ಪಾಟೀಲ್ ಹರವಾಳ, ಬಸಣ್ಣಗೌಡ ಮರಕಲ್, ಚನ್ನಾರೆಡ್ಡಿ ಪಾಟೀಲ್, ಶಾಂತಗೌಡ ಬಿರಾದಾರ, ಎಸ್. ಎಸ್. ಪಾಕಲ್, ಲಿಂಗಾರೆಡ್ಡಿ, ಚಂದ್ರಶೇಖರ ಹರನಾಳ, ಅಬ್ದುಲ್ ಸತ್ತರಸಾಬ್ ಗಿರಣಿ, ರಾಜಶೇಕರ ಸೀರಿ, ಶರಣು ಗುತ್ತೆದಾರ, ಸೇರಿದಂತೆ ಸಹಕಾರಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ರಾಮಣಗೌಡ ಲಖಣಾಪೂರ ಪ್ರಾಸ್ತಾವಿಕ ಮಾತನಾಡಿದರು, ಅರುಣಕುಮಾರ ಸ್ವಾಗತಿಸಿದರು, ಬಾಪೂಗೌಡ ಅಮರಖೇಡ ವಂದಿಸಿದರು, ಶರಣಮ್ಮ ಪಾಟೀಲ್ ನಿರೂಪಿಸಿದರು.