ಎಲ್ಲರ ಚಿತ್ತ ಚಂದ್ರಯಾನದತ್ತ

ಬೆಂಗಳೂರು, ಆ.೧೬- ಚಂದ್ರಯಾನ-೩ಕ್ಕೆ ಸಂಬಂಧಿಸಿದಂತೆ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಚಂದ್ರನ ಅಂಗಳಕ್ಕೆ ಇಳಿಯಲು (ಸಾಫ್ಟ್ ಲ್ಯಾಂಡಿಂಗ್) ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿರುವಂತೆ ಇಂದು ಮುಂಜಾನೆ ಭಾರತೀಯ ಕಾಲಮಾನ ಸುಮಾರು ೮:೩೦ರ ವೇಳೆಗೆ ಇಸ್ರೋ ತನ್ನ ಕ್ರಾಫ್ಟ್‌ನ ಎಂಜಿನ್‌ನ ಅನ್ನು ರಿವರ್ಸ್ ಫೈರಿಂಗ್ ಮೂಲಕ ನಿಧಾನಗೊಳಿಸಿದ್ದು, ಸದ್ಯ ಚಂದ್ರನೆಡೆಗೆ ಮತ್ತಷ್ಟು ಸನಿಹಕ್ಕೆ ತೆರಳಿದೆ. ಅಲ್ಲದೆ ಗುರುವಾರ (ಆ.೧೭) ಚಂದ್ರಯಾನ-೩ ಸಂಯೋಜಿತ ಬಾಹ್ಯಾಕಾಶ ನೌಕೆಯು ಎರಡು ಭಾಗಗಳಾಗಿ ಪ್ರತ್ಯೇಕಗೊಳ್ಳುವ ನಿರೀಕ್ಷೆಯಿದ್ದು, ಸಹಜವಾಗಿಯೇ ಇಡೀ ದೇಶವೇ ಇದರತ್ತ ಕಣ್ಣು ಹಾಯಿಸುವಂತೆ ಮಾಡಿದೆ.
ಸದ್ಯ ಬೆಂಗಳೂರಿನಲ್ಲಿರುವ ಕಮಾಂಡ್ ಸೆಂಟರ್‌ನಿಂದ ಚಂದ್ರಯಾನ-೩ ಇಂಜಿನ್‌ನ ಫೈರಿಂಗ್ ಕ್ರಾಫ್ಟ್ ಚಂದ್ರನ ಸುತ್ತ ೧೫೦ ಕಿ.ಮೀ. ಎಕ್ಸ್ ೧೭೭ ಕಿ.ಮೀ. ಕಕ್ಷೆಯಿಂದ ಸಮೀಪ-ವೃತ್ತಾಕಾರದ ೧೫೩ ಕಿ.ಮೀ. ಎಕ್ಸ್ ೧೬೩ ಕಿ.ಮೀ. ಕಕ್ಷೆಗೆ ತಂದಿದೆ. ಹಾಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಕ್ರಾಫ್ಟ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಇನ್ನು ಹೊಸ ಮೈಲಿಗಲ್ಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೋ, ರಿವರ್ಸ್ ಫೈರಿಂಗ್ (ವೇಗ ನಿಧಾನಗೊಳಿಸುವಿಕೆ) ಮೂಲಕ ಚಂದ್ರನ ಬಗೆಗಿನ ದಿಕ್ಕು ಬದಲಾಯಿಸುವಿಕೆ ಪೂರ್ಣಗೊಂಡಿವೆ. ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ತಮ್ಮ ಪ್ರತ್ಯೇಕ ಪ್ರಯಾಣಕ್ಕಾಗಿ ಸಜ್ಜಾಗುತ್ತಿದ್ದು, ಹಾಗಾಗಿ ಸದ್ಯ ಇದು ಸಿದ್ಧತೆಗಳ ಸಮಯವಾಗಿದೆ. ಲ್ಯಾಂಡರ್ ಮಾಡ್ಯೂಲ್ ಅನ್ನು ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಿಸಲು ಆಗಸ್ಟ್ ೧೭ರಂದು ಯೋಜಿಸಲಾಗಿದೆ ಹೇಳಿಕೆಯಲ್ಲಿ ತಿಳಿಸಿದೆ. ಅದರಂತೆ ಆ.೧೭ರಂದು ಚಂದ್ರಯಾನ-೩ ಸಂಯೋಜಿತ ಬಾಹ್ಯಾಕಾಶ ನೌಕೆಯು ಲ್ಯಾಂಡರ್ ಮಾಡ್ಯೂಲ್ ಅನ್ನು ಪ್ರೊಪಲ್ಷನ್ ಮಾಡ್ಯೂಲ್ ಎಂಬ ಎರಡು ಭಾಗಗಳಾಗಿ ಪ್ರತ್ಯೇಕಗೊಳ್ಳುವ ನಿರೀಕ್ಷೆಯಿದೆ. ಈ ಪೈಕಿ ಪ್ರೊಪಲ್ಷನ್ ಮಾಡ್ಯೂಲ್ ಕ್ರಾಫ್ಟ್‌ನ ಪ್ರಮುಖ ಭಾಗವಾಗಿದ್ದು ಅದು ೩.೯ ಟನ್ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ತರುವಲ್ಲಿ ಪ್ರಮು ರೀತಿಯಲ್ಲಿ ನಡೆಸಿತ್ತು. ಇನ್ನು ಮುಂದೆ, ಪ್ರೊಪಲ್ಷನ್ ಮಾಡ್ಯೂಲ್ ತನ್ನ ಕಕ್ಷೆಯಲ್ಲಿ ಮುಂದುವರಿಯಲಿದ್ದು, ಆದರೆ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಸಾಫ್ಟ್ ಲ್ಯಾಂಡಿಂಗ್ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಲಿದೆ. ಈ ನಡುವೆ ಲ್ಯಾಂಡರ್ ಮಾಡ್ಯೂಲ್‌ನಲ್ಲಿರುವ ಸಂವೇದಕಗಳು ಮತ್ತು ಎಂಜಿನ್‌ಗಳನ್ನು ಪರೀಕ್ಷಿಸಬೇಕಾಗಿದೆ. ಈತನಕದ ಪ್ರಯಾಣದಲ್ಲಿ ಇಸ್ರೋ ಈ ವ್ಯವಸ್ಥೆಗಳನ್ನು ಬಾಹ್ಯಾಕಾಶದಲ್ಲಿ ಪರೀಕ್ಷಿಸಿಲ್ಲ ಮತ್ತು ಸದ್ಯ ಕ್ರಾಫ್ಟ್ ಚಂದ್ರನಿಗೆ ಹತ್ತಿರವಾಗಿರುವುದರಿಂದ, ಈ ವ್ಯವಸ್ಥೆಗಳನ್ನು ಅವುಗಳ ಆರೋಗ್ಯ ಮತ್ತು ಕಾರ್ಯಕ್ಷಮತೆಗಾಗಿ ಪರೀಕ್ಷಿಸುವ ಅಗತ್ಯವಿದೆ. ಇದರಲ್ಲಿ ನಾಲ್ಕು ೮೦೦ ನ್ಯೂಟನ್ ಥ್ರೊಟಲ್ ಮಾಡಬಹುದಾದ ಇಂಜಿನ್‌ಗಳು (ಕೌಶಲವನ್ನು ನಿಧಾನಗೊಳಿಸಲು ಮತ್ತು ಮೃದುವಾಗಿ ಇಳಿಸಲು ಸಹಾಯ ಮಾಡಲು ಉದ್ದೇಶಿಸಲಾಗಿದೆ) ಮತ್ತು ಕ್ರಾಫ್ಟ್‌ನ ವೇಗ, ಎತ್ತರ, ವರ್ತನೆ (ದೃಷ್ಟಿಕೋನ) ಮತ್ತು ಇತರ ತಾಂತ್ರಿಕ ನಿಯತಾಂಕಗಳ ಬಗ್ಗೆ ಡೇಟಾವನ್ನು ಒದಗಿಸಲು ಉದ್ದೇಶಿಸಿರುವ ವಿವಿಧ ಸಂವೇದಕಗಳನ್ನು ಒಳಗೊಂಡಿದೆ.

ಗುರುವಾರ ಮಹತ್ವಪೂರ್ಣ ದಿನ
ಆ.೧೭ರಂದು ಚಂದ್ರಯಾನ-೩ ಸಂಯೋಜಿತ ಬಾಹ್ಯಾಕಾಶ ನೌಕೆಯ ಲ್ಯಾಂಡರ್ ಮಾಡ್ಯೂಲ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಎಂಬ ಎರಡು ಭಾಗಗಳಾಗಿ ಪ್ರತ್ಯೇಕಗೊಳ್ಳುವ ನಿರೀಕ್ಷೆಯಿದೆ. ಈ ಪೈಕಿ ಪ್ರೊಪಲ್ಷನ್ ಮಾಡ್ಯೂಲ್ ಕ್ರಾಫ್ಟ್‌ನ ಪ್ರಮುಖ ಭಾಗವಾಗಿದ್ದು ಅದು ೩.೯ ಟನ್ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ತರುವಲ್ಲಿ ಪ್ರಮು ರೀತಿಯಲ್ಲಿ ನಡೆಸಿತ್ತು. ಇನ್ನು ಮುಂದೆ, ಪ್ರೊಪಲ್ಷನ್ ಮಾಡ್ಯೂಲ್ ತನ್ನ ಕಕ್ಷೆಯಲ್ಲಿ ಮುಂದುವರಿಯಲಿದ್ದು, ಆದರೆ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಸಾಫ್ಟ್ ಲ್ಯಾಂಡಿಂಗ್ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಲಿದೆ.