ಎಲ್ಲರೂ ಸಹೋದರರಂತೆ ಬದುಕೋಣ

ಹುಬ್ಬಳ್ಳಿ, ಏ 22: ರಂಜಾನ್ ಹಬ್ಬದ ನಿಮಿತ್ತ ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಧವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ಅಂಜುಮನ್-ಇ-ಇಸ್ಲಾಂ ಸಂಸ್ಥೆ ಹುಬ್ಬಳ್ಳಿ ಉಪಾಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರ ಮಾತನಾಡಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಸಿಖ್ ಎಲ್ಲರೂ ಸಹೋದರರಂತೆ ಬದುಕಬೇಕು. ದೇಶದಲ್ಲಿ ಶಾಂತಿ ಸೌಹಾರ್ದತೆಯಿಂದ ಬಾಳಬೇಕು ಎಂದರು.

ಮೌಲಾನಾ ಹಫೀಝ್ ಕಾರಿ ನಯೀಮುದ್ದೀನ್ ನೇತೃತ್ವದಲ್ಲಿ ಈದುಲ್ ಫಿತರ್ ನಮಾಜ್ ನಡೆಯಿತು.

ಜಂಟಿ ಕಾರ್ಯದರ್ಶಿ ಅಬ್ದುಲ್ ಮುನಾಫ್ ದೇವಗೇರಿ, ಕೋಶಾಧಿಕಾರಿ ದಾದಾಹಯತ್ ಖೈರಾತಿ, ಅಶ್ಪಾಕ್ ಬಿಜಾಪುರಿ, ಅರ್ಷದ್ ಮುಲ್ಲಾ, ಸಲೀಂ ಸುಂಡ್ಕೆ, ಇಮಾಮ್ ಹುಸೇನ್ ಮಡ್ಕಿ, ಎಂ.ಎ. ಪಠಾಣ್, ಶೋಯಬ್ ಮಿರ್ಜಾ, ಮೊಹಮ್ಮದ್ ಯೂಸುಫ್ ಬಂಗ್ಲೆವಾಲೆ, ರಿಯಾಜ್ ಖತೀಬ್, ಮುನ್ನಾ ಐನಾಪುರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.