ಎಲ್ಲರೂ ನೋಡುವಂತಹ ಚಿತ್ರ, ಕಲ್ಯಾಣ ಕುವರ ಚಲನಚಿತ್ರ : ಭವ್ಯಾ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ:ಜ.18: ಮಕ್ಕಳಿಂದ ಹಿಡಿದು ಯುವಕರು, ಹಿರಿಯರು ಎಲ್ಲರೂ ನೋಡುವಂತಹ ಚಿತ್ರ ಕಲ್ಯಾಣ ಕುವರ ಚಲನಚಿತ್ರವಾಗಿದೆ ಎಂದು ಖ್ಯಾತ ಚಲನ ಚಿತ್ರ ನಟಿ ಭವ್ಯಾ ಅಭಿಪ್ರಾಯಪಟ್ಟರು.

ಪಟ್ಟಣದ ಸಂಗಮೇಶ್ವರ ಚಿತ್ರ ಮಂದಿರದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ಪ್ರಾಯೋಜಿಕತ್ವದಲ್ಲಿ, ಕಲ್ಯಾಣ ಕುವರ ಚಲನಚಿತ್ರದ 26ನೇ ದಿನದ ಯಶಸ್ವೀ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ದಿನಮಾನಗಳಲ್ಲಿ, ಇಂತಹ ಮಹಾ ಪುರುಷರ ಚಲನಚಿತ್ರ ತಯ್ಯಾರಿಸುವುದೇ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿಯವರೇ ಆದ ವಿಷ್ಣುಕಾಂತ.ಬಿ.ಜೆ ಯವರು ನಟಿಸಿ, ನಿರ್ದೇಶಿಸಿ ನಿರ್ಮಾಣ ಮಾಡಿದ ಈ ಭಾಗದ ನಡೆದಾಡುವ ದೇವರಾದ ಡಾ| ಚನ್ನಬಸವ ಪಟ್ಟದ್ದೇವರ ಜೀವನಾಧಾರಿತ ಚಲನ ಚಿತ್ರವು ಇಲ್ಲಿ ಯಶಸ್ವಿಯಾಗಿ ಪ್ರದರ್ಶನ ಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಮಹಾ ಪುರುಷರ ಚಲನಚಿತ್ರವು ನೋಡುವುದರಿಂದ ಅವರ ಆದರ್ಶಗಳು ನಮ್ಮಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಈ ಚಲನ ಚಿತ್ರವೂ ಈ ಭಾಗದಲ್ಲಿ 100 ದಿನಗಳ ಕಾಲ ಯಶಸ್ವಿಯಾಗಿ ನಡೆಯುವಂತೆ ಎಲ್ಲರೂ ಪ್ರೇರೇಪಿಸಬೇಕು ಎಂದು ಹೇಳಿದರು.

ನಟ ನಿರ್ದೇಶಕ ವಿಷ್ಣುಕಾಂತ.ಬಿ.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಕಲ್ಯಾಣ ಕುವಚ ಚಲನಚಿತ್ರದ ವೈಶಿಷ್ಟತೆಯ ಬಗ್ಗೆ ತಿಳಿಸಿದರು.

ಇದಕ್ಕೂ ಮೊದಲು ನಟಿ ಭವ್ಯಾ ಮತ್ತು ಚಿತ್ರರಂಗದ ಇತರೆ ಕಲಾವಿದರು, ಚನ್ನಬಸವಾಶ್ರಮದಲ್ಲಿ, ಡಾ| ಚನ್ನಬಸವ ಪಟ್ಟದ್ದೇವರ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಸಂಗಮೇಶ್ವರ ಚಿತ್ರಮಂದಿರಕ್ಕೆ ಆಗಮಿಸಿದರು.

ಭಾತಂಬ್ರಾದ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳು, ಹುಸಲೂರಿನ ಶ್ರೀ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಸಾಪ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ನಗರಘಟಕದ ಅಧ್ಯಕ್ಷ ಸಂತೋಷ ಬಿಜಿಪಾಟೀಲ, ರಮೇಶ ಚಿದ್ರಿ, ಶಿವಶಂಕರ ಟೋಕರೆ, ಕಿರಣಕುಮಾರ ಖಂಡ್ರೆ, ರಾಜೆಪ್ಪ ಪಾಟೀಲ, ಸೂರ್ಯಕಾಂತ ಸುಂಟೆ, ಕಲಾವಿದರಾದ ಓಂಪ್ರಕಾಶ ರೊಟ್ಟೆ ಮತ್ತಿತರರು ಇದ್ದರು.