ಎಲ್ಲರೂ ಒಂದೇ ಎಂಬ ಸಂದೇಶ ಕನಕದಾಸರದ್ದಾಗಿತ್ತು:ಶಾಸಕ ರಾಜುಗೌಡ

ತಾಳಿಕೋಟೆ :ಜ.1: ಮಹಾನ್ ಸಂತರಾಗಿ ಸಮಾಜದ ಸಂಬಂದ ಬಧುಕಲಾರದೇ ಎಲ್ಲ ಸಮಾಜದವರು ಒಂದೇ ಎಂಬ ಭಾವನೆಯೊಂದಿಗೆ ನಡೆದುಕೊಂಡಿದ್ದಲ್ಲದೇ ದೇವರು ಒಬ್ಬನೇ ಆಗಿದ್ದಾನೆ ಆತ ಸರ್ವ ವ್ಯಾಪಿಯಾಗಿದ್ದಾನೆಂಬುದು ಅರೀತು ದೇವನ ಒಲುಮೆಯನ್ನು ಪಡೆದುಕೊಂಡಿದ್ದರೆಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ಹೇಳಿದರು.
ರವಿವಾರರಂದು ತಾಲೂಕಾ ಕುರುಬರ ಸಂಘ ತಾಳಿಕೋಟೆ, ಹಾಲುಮತ ನೌಕರರ ಸಂಘ ಹಾಗೂ ಕ್ರಾಂತಿ ವೀರ ಸಂಗೋಳಿ ರಾಯಣ್ಣ ಯುವ ಸಂಘಟನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂಗೋಳಿ ರಾಯಣ್ಣ ವೃತ್ತದಲ್ಲಿ ಏರ್ಪಡಿಸಲಾದ ಭಕ್ತ ಕನಕದಾಸರ 536ನೇ ಜಯಂತ್ಯೋತ್ಸವವನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕುಲ ಕುಲವೆಂದು ಬಡೆದಾಡದಿರಿ ಎಲ್ಲರನ್ನು ಒಂದೇ ಎಂಬ ಭಾವನೆಯಿಂದ ಅರೀತುಕೊಂಡು ನಡೆಯಬೇಕೆಂದು ಸಾರಿದ ಭಕ್ತ ಕನಕದಾಸರು ರಾಜನಾಗಿ ಮೇರೆದ ಇವರು ಸಂತರಾಗಿ ಪರಿವರ್ತನೆಗೊಂಡಿರುವದು ಇತಿಹಾಸ ಪುಟಗಳಲ್ಲಿ ಅಜರಾಮರವಾಗಿ ಉಳಿದಿವೆ ಎಂದರು. ಹಾಲುಮತ ಸಮಾಜದವರು ಹಾಲಿನಂತೆ ಎಲ್ಲರೊಂದಿಗೆ ಬೆರೆತು ಪ್ರೀತಿ ಪ್ರೇಮ ಬೆಳೆಸಿಕೊಂಡವರಾಗಿದ್ದಾರೆ ಅವರು ಪ್ರಾಮಾಣಿಕರಾಗಿ ಮುನ್ನಡೆದಿದ್ದಾರೆ ಅವರು ಇತ್ತೀಚಗೆ ನಡೆದ ನಮ್ಮ ಚುನಾವಣೆಯಲ್ಲಿ ನನ್ನನ್ನು ಲಕ್ಷೀಸಿ ಪಾರ್ಟಿ ಪಕ್ಷ ಅರ್ಥೈಸಿಕೊಳ್ಳದೇ ನನ್ನನ್ನು ಸೇವಾ ಕಾರ್ಯಕ್ಕೆ ಮುಂದು ಮಾಡಿರುವದು ಅವರ ಕಾರ್ಯ ಪ್ರಶಂಶನೀಯವಾಗಿದೆ ಎಂದರು. ಅವರ ಅಪೇಕ್ಷೆಯಂತೆ ಮುಂಬರುವ ದಿನಮಾನಗಳಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ನಾನು ಹಾಗೂ ಶಾಸಕ ನಾಡಗೌಡ ಅವರು ಕೂಡಾ ಒಳಗೊಂಡು ಸೀಘ್ರದಲ್ಲಿಯೇ ಜಾಗೆಯನ್ನು ಗುರುತಿಸಿ ಕನಕ ಭವನ ನಿರ್ಮಾಣ ಮಾಡಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಹೇಳಿದ ಶಾಸಕ ರಾಜುಗೌಡ ಅವರು ಶಿಕ್ಷಣವಂತರನ್ನಾಗಿ ಮಕ್ಕಳನ್ನು ಬೆಳೆಸಿರಿ ಶಾಂತಮಯ ಶ್ರೀಗಳು ತಿಳಿಸಿದಂತೆ ಕನಕದಾಸರ ನಡೆ ನುಡಿಯನ್ನು ಅರೀತುಕೊಂಡು ನಡೆದು ಸಮಾಜದ ಶ್ರೇಯೋಭಿವೃದ್ದಿಗೆ ಮುಂದಾಗಬೇಕೆಂದರು.
ಇನ್ನೋರ್ವ ಅಧ್ಯಕ್ಷತೆ ವಹಿಸಿದ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅವರು ಮಾತನಾಡಿ ಇಂದಿನ ದಿನಮಾನದಲ್ಲಿ ಸ್ಥಿತಿಗತಿಯನ್ನು ನೋಡಿದರೆ ಸಾಮಾಜಿಕ ಬದಲಾವಣೆ ಮಾಡುವದು ದೊಡ್ಡ ಸವಾಲಾಗಿ ಪರಿಣಮಿಸಿದೆ ಇದನ್ನು ತಿಳಿದುಕೊಳ್ಳಬೇಕೆಂದರು. ಹಿಂದಿನ ಇತಿಹಾಸವನ್ನು ನೋಡಿದಾಗ ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಜನತೆ ಶೋಷಣೆ ತಪ್ಪಿಸಲು ಏಸು ಕ್ರೀಸ್ತನಂತ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ ಅವರಂತಹ, ಕನಕದಾಸರಂತವರು ಶ್ರಮಿಸಿ ಹೋಗಿದ್ದಾರೆ ಇಂತಹ ಸವಾಲ್‍ನ್ನು ಹ್ಯಾಗೆ ಸ್ವಿಕರಿಸಲು ಸಾದ್ಯವೆಂಬುದು ಇಂದಿನ ದಿನಮಾನದಲ್ಲಿ ನಡೆದ ಸ್ಥಿತಿಗತಿಯಿಂದ ಗೊತ್ತಾಗುತ್ತದೆ ಎಂದರು. ಯಾವುದಾದರೂ ಮೊದಲೇ ಗುರುತಿಸಿಕೊಳ್ಳುವಂತಹ ಕಾರ್ಯವಾಗಬೇಕಾದರೆ ಇಲ್ಲಿ ಕೂಡಿದಂತಹ ಸಂಘಟಿಕರಂತೆ ಸೇರಬೇಕೆನ್ನುವ ಆಸೆ ಎಲ್ಲರಲ್ಲಿ ಬರಬೇಕು ಕನಕದಾಸರು ಏಸು ಕ್ರೀಸ್ತರಾಗಲಿ ಮಹಾನ್ ದಾರ್ಶನಕರ ಸಾಲಿನಲ್ಲಿ ಸೇರಿದಾಗ ಜಗತ್ತೇನ್ನುವಂತಹದ್ದು ಸುಂದರವಾಗಿ ಕಾಣುತ್ತದೆ ಎಂದರು. ಏನಾದರೂ ಆಗು ಮೊದಲು ಮಾನವನಾಗು ಎನ್ನುವಂತಹದ್ದಾಗಿದೆ ಹಿಂದಿನ ಕಾಲದಲ್ಲಿ ಕಂಬಳಿ ಬೀಸಿದರೆ ಮಳೆ ಬರುತ್ತಿತ್ತು ಎಂಬ ಗಾಧೆ ಇದೆ ಹಾಲುಮತ ಅಂದರೆ ಹಾಲನ್ನು ಎದರಲ್ಲಿ ಹಾಕಿದರೂ ಅದು ಅಮೃತ ಕೊಡತಕ್ಕಂತಹ ಸಮಾಜ ಅನ್ನುವದನ್ನು ಒಂದಾಗಿ ಮೇಲಕ್ಕೇತ್ತುವ ಕಾರ್ಯ ಆಗಬೇಕಾಗಿದೆ ಎಂದರು. ಪುರಾಣದಲ್ಲಿ ಕೇಳಿದಂತೆ ಅರ್ಜುನ ಬಾಣ ಹೊಡೆದಲ್ಲಿ ನೀರು ಬರುತ್ತಿತ್ತು ಎಂಬ ಕಥೆ ಕೇಳಿದ್ದೇವೆ ಅಲ್ಲಿ ಭಾವ ಸ್ವಚ್ಚವಿತ್ತು ಅದು ಪ್ರಾಮಾಣಿಕವಾಗಿತ್ತು ಇದು ಮಾತುಗಳಿಂದ ಬರಲು ಸಾಧ್ಯವಿಲ್ಲಾ ಅದು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದ ಶಾಸಕ ನಾಡಗೌಡ ಅವರು ಸಜ್ಜಲಗುಡ್ಡ ಶರಣಮ್ಮನವರ ಆಶಿರ್ವಾದದಿಂದ ತಾವು ಬಧುಕಿದ್ದೇವೆಂಬುದರ ಕುರಿತು ಅವರಲ್ಲಿದ್ದ ಕಾಲ ಜ್ಞಾನ ದೂರ ದೃಷ್ಠಿ ತಪ್ಪಸ್ಸು ಶಕ್ತಿ ಎಷ್ಟಿತ್ತೆಂಬುದನ್ನು ನೇರೆದ ಭಕ್ತ ಸಮೂಹಕ್ಕೆ ವಿವರಿಸಿದ ಅವರು ಶರಣರ ಮೂಲ ಹುಡಕಬಾರದು ಮೂಲತವಾಗಿ ಪಶುಗಳ ಜೊತೆಗೆ ಜೀವನ ಪ್ರಾರಂಬಿಸಿದ ಮನುಷ್ಯರಿಗೆ ಯಾರಿಂದ ಸಂಸ್ಕಾರ ದೊರೆಯುತ್ತಿದೆ ಎಂಬುದರ ಬಗ್ಗೆ ಗೊತ್ತಿರಬೇಕು ಅವರ ನಡೆ ನುಡಿಗಳನ್ನು ಅರೀತುಕೊಂಡು ನಡೆಯಬೇಕೆಂದು ಭಕ್ತ ಕನಕ ದಾಸರು ದೇವರ ಮೇಲಿಟ್ಟ ಪ್ರೀತಿ ಪ್ರೇಮ ಕುರಿತು ವಿವರಿಸಿದರು.
ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಮೋಹನ್ ಮೇಟಿ ಅವರು ಮಾತನಾಡಿ ಸಂತ ಕನಕದಾಸರು ಮಾಡಿದ್ದು ಸಾಕಷ್ಟು ಇದೆ ಬೆಳೆದ ಭೂಮಿಯಲ್ಲಿ ಕಳೆ ಕಿತ್ತದಿದ್ದರೆ ಬೆಳೆ ಎಂಬುದು ಬರುವದಿಲ್ಲಾ ಕಾರಣ ನಮ್ಮನ್ನು ನಾವು ತಿಳಿದುಕೊಳ್ಳಬೇಕು ನಿಮ್ಮನ್ನು ನೀವು ತಿಳಿದುಕೊಳ್ಳದಿದ್ದರೆ ಹುಗ್ಗಿ ಮಾಡುವ ಹುಟ್ಟಿನಂತೆ ಆಗಬೇಕಾದೀತೆಂದು ಏಚ್ಚರಿಸಿದ ಮೇಟಿ ಅವರು ಕತ್ತಲು ಬೆಳಗಬೇಕಾದರೆ ದೀಪದ ಬೆಳಕು ಬೇಕು ದೀಪದ ಚಿತ್ರದಿಂದ ಕತ್ತಲು ಬೆಳಗಲಾರದೆಂದರು. ರಾಜಪ್ರಭುತ್ವಕ್ಕೆ, ಪ್ರಜಾಪ್ರಭುತ್ವಕ್ಕೆ ವ್ಯತ್ಯಾಸವಾಗಿಲ್ಲಾ ಪ್ರಜಾಪ್ರಭುತ್ವವನ್ನು ಬೆಳಗಿಸಬೇಕು ಅದು ದೀಪ ಹಚ್ಚಲು ಸಾಧ್ಯವೆಂದರು. ಎಲ್ಲ ಸಮೂದಾಯಗಳಿಗೆ ರಾಜಕೀಯ ಪ್ರಭುತ್ವ ದೊರೆಯಬೇಕೆಂಬುದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಆಸೆಯಾಗಿತ್ತು ಶಿಕ್ಷಣವೆಂಬುದು ಹುಲಿಯ ಹಾಲಿನಂತೆ ಇದನ್ನು ಕಲಿತವರು ಹುಲಿಯಂತೆ ಘರ್ಜನೆ ಮಾಡಲೇಬೇಕಾಗುತ್ತದೆ ಭೂಮಿಯಲ್ಲಿ ಜನ್ಮತಾಳಿದಾಗಿನಿಂದಲೂ ಕನಕದಾಸರ ಸಂದೇಶ ಎಲ್ಲರೂ ಒಂದೇ ಎಂಬ ಭಾವನೆಯಿಂದ ನಡೆಯಬೇಕೆಂಬುದಾಗಿದೆ ದೇವರು ಒಬ್ಬನೇಯಾಗಿದ್ದಾನೆ ಆತನು ಎಲ್ಲಡೆಯಲ್ಲಿಯೂ ವ್ಯಾಪಿಸಿದ್ದಾನೆಂಬುದು ಅವರು ಗುರುಗಳಿಗೆ ಗುರುತಿಸಿದ್ದಲ್ಲದೇ ಶ್ರೀ ಕೃಷ್ಣ ಪರಮಾತ್ಮನನ್ನು ಒಲಿಸಿಕೊಂಡ ಮಹಾನ್ ಸಂತರಾಗಿದ್ದರೆಂದು ಅನೇಕ ಅವರ ನಡೆನುಡಿಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಸಾನದ್ಯ ವಹಿಸಿದ ಸರೂರ ಅಗತೀರ್ಥ ಹಾಲುಮತ ಗುರುಪೀಠದ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾ ಸ್ವಾಮಿಗಳು ಮಾತನಾಡಿ ಇಂದಿನ ಭಗವಂತನ ಸ್ಮರಿಸುವ ದಿನವನ್ನು ನೋಡಿದರೆ ತಾಳಿಕೋಟೆ ತಾಲೂಕಿನ ಹಾಲುಮತ ಜನತೆಯ ಆದರ್ಶ ಪ್ರೀಯರಾಗಿರುವದು ಎದ್ದು ಕಾಣುತ್ತಲಿದೆ ಕೈಯಲ್ಲಿ ಖಡ್ಗಹಿಡಿದ ಕನಕದಾಸರು ಅವರ ಕೈಯಲ್ಲಿ ತಂಬೂರಿಯಾಯಿತು ಮುಂದೆ ಮೈ ಮೇಲೆ ಕಂಬಳಿ ಬಂತು ಕೊನೆಯ ಕಾಲದಲ್ಲಿ ಕಂಬಳಿಯು ಭಕ್ತ ಕನಕದಾಸರನ್ನು ಉನ್ನತ ಸ್ಥಾನದಲ್ಲಿ ಕೊಂಡೊಯಿತು ಎಂದು ಹರಿ ಭಕ್ತಸಾರದಲ್ಲಿ ಭಕ್ತರನ್ನು ತನ್ನನ್ನು ಉದ್ದೇಶಿಸಿ ಬರೆದಂತಹ ಕನಕದಾಸರ ಉದ್ದೇಶ ಕುರಿತು ತಿಳಿ ಹೇಳಿದ ಶ್ರೀಗಳು ಅವರಲ್ಲಿದ್ದ ಆದ್ಯಾತ್ಮ ಶಕ್ತಿ ಕುರಿತು ವಿವರಿಸಿದರು.
ಕಾರ್ಯಕ್ರಮಕ್ಕೂ ಮೋದಲು ಭಕ್ತ ಕನಕ ದಾಸರ ಭಾವಚಿತ್ರದ ಮೇರವಣಿಗೆಯು ಸಂಗೋಳಿ ರಾಯಣ್ಣ ವೃತ್ತದಿಂದ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಜರುಗಿ ನಂತರ ಸಭೆಯಾಗಿ ಮಾರ್ಪಟ್ಟಿತು.
ಈ ಸಮಯದಲ್ಲಿ ಬಂಡೆಪ್ಪನಹಳ್ಳಿಯ ಸಣ್ಣೆಕ್ಕೆಪ್ಪ ಪೂಜಾರಿ, ಕೆಂಚೆಪ್ಪ ಪೂಜಾರಿ, ಸರೂರ ಹುಚ್ಚಯ್ಯ ಶ್ರೀಗಳು, ಮುದ್ದೇಬಿಹಾಳ ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ತಾಳಿಕೋಟೆ ಅಧ್ಯಕ್ಷ ಸಾಯಬಣ್ಣ ಆಲ್ಯಾಳ, ನೌಕರರ ಸಂಘದ ಅಧ್ಯಕ್ಷ ಡಾ.ಆಯ್.ಬಿ.ತಳ್ಳೋಳ್ಳಿ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ನಿವೃತ್ತ ಎಸ್.ಪಿ. ಎಸ್.ಬಿ.ಕಟ್ಟಿಮನಿ, ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ, ಅಸ್ಕಿ ಪೌಂಡೇಶನ್‍ದ ಸಿ.ಬಿ.ಅಸ್ಕಿ, ನಿಂಗಪ್ಪಗೌಡ ಬಪ್ಪರಗಿ, ರಾಜು ಕೇಂಭಾವಿ, ಎಂ.ಎಸ್.ಅಮಲ್ಯಾಳ, ಮಲ್ಲಣ್ಣ ಹಿರೇಕುರುಬರ, ಸದಾಶಿವ ಪೂಜಾರಿ, ಮಡಿವಾಳಪ್ಪ ಬ್ಯಾಲ್ಯಾಳ, ಸಿದ್ದು ಬುಳ್ಳಾ, ಹಾಲುಮತ ಸಮಾಜದ ಜಿಲ್ಲಾ ಅಧ್ಯಕ್ಷ ರಾಜು ಕಂಚಾಗೆ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಜೈಭೀಮ ಮುತ್ತಗಿ, ಎಸ್.ಕೆ.ಹರನಾಳ, ಎಸ್.ಎಸ್.ಹೂಲ್ಲೂರ, ಗೌರಮ್ಮ ಮುತ್ತತ್ತಿ, ಗುರು ತಾರನಾಳ, ಮಡಿವಾಳಪ್ಪ ಬ್ಯಾಲ್ಯಾಳ, ವಿರೇಶಗೌಡ ಬಾಗೇವಾಡಿ, ಬಿ.ವಾಯ್.ಮೇಟಿ, ಕೆ.ಎಚ್.ಪಾಟೀಲ, ಮಡುಸಾಹುಕಾರ ಬಿರಾದಾರ, ಮಡಿವಾಳಪ್ಪ ಅಂಬಳನೂರ, ಶಿವರಾಜ ಪೂಜಾರಿ, ಮೊದಲಾದವರು ಇದ್ದರು.
ಡಿ.ಜೆ.ಬಾಗೇವಾಡಿ ಪ್ರಾಸ್ಥಾವಿಕ ಮಾತನಾಡಿದರು. ಸುರೇಶ ವಾಲಿಕಾರ ನಿರೂಪಿಸಿದರು.