ಎಲ್ಲರು ಸನ್ಮಾರ್ಗದಲ್ಲಿ ನಡೆಯಬೇಕು

ಮಸ್ಕಿ.ಅ.೩೧- ಪ್ರವಾದಿ, ಶರಣರು ಸಂತರು ಮಾನವ ಕುಲಕ್ಕೆ ಶಾಂತಿಯ ಮಂತ್ರ ಭೋಧಿಸಿದ್ದಾರೆ ಎಲ್ಲ ಸಮುದಾಯದ ಜನರು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಗಚ್ಚೀನಮಠದ ವರ ರುದ್ರಮುನಿ ಸ್ವಾಮೀಜಿ ಹೇಳಿದರು ಸ್ಥಳೀಯ ಜಮಾತೆ ಇಸ್ಲಾಮಿ ಹಿಂದ್ ಘಟಕ ಗಚ್ಚೀನ ಮಠ ಬಳಿ ಹಮ್ಮಿ ಕೊಂಡಿದ್ದ ಪ್ರವಾದಿ ಮುಹ್ಮದ್ (ಸ) ಮಾನವತೆಯ ಮಾರ್ಗದರ್ಶಕ ಕಿರು ಹೊತ್ತಿಗೆ ಬಿಡುಗಡೆ ಗೊಳಿಸಿ ಶನಿವಾರ ಮಾತನಾಡಿದರು. ಪ್ರವಾದಿ ಅವರು ಇಡೀ ಮಾನವ ಕುಲಕ್ಕೆ ಶಾಂತಿಯ ಪಾಠ ಹೇಳಿದ್ದಾರೆ ಎಲ್ಲ ಸಮುದಾಯದ ಜನರು ಸನ್ಮಾರ್ಗದಲ್ಲಿ ನಡೆಯ ಬೇಕು ಶಾಂತಿ, ಸೌರ್ಹಾದತೆಯ ಸಮಾಜ ನಿರ್ಮಾಣ ಮಾಡಬೇಕು ಎಂದು ಸ್ವಾಮೀಜಿ ನುಡಿದರು ಜಿಲಾನಿ ಖಾಜಿ ಮಾತನಾಡಿದರು ಜಮಾತೆ ಇಸ್ಲಾಮಿ ಹಿಂದ್ ಘಟಕದ ಬಾಹರ ಅಲಿ, ಅಬ್ದುಲ್ ಗನಿ ಬಳ್ಳಾರಿ, ಹುಸೇನ್ ಸಾಬ್ ಇಲಕಲ್, ರಜಾಕ್ ಕರೋರಡಗಿರಿ ಸೇರಿದಂತೆ ಅನೇಕರು ಇದ್ದರು.