ಎಲ್ಲರಿಗೂ ಶಿಕ್ಷಣ ದೊರೆಯಬೇಕು: ಸಿದ್ದಲಿಂಗಶ್ರೀ

ಸಿರಾ, ನ. ೨೪- ಎಲ್ಲರಿಗೂ ಶಿಕ್ಷಣ ದೊರೆಯಬೇಕು, ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಳಕಳಿಯಿಂದ ಶಿವಕುಮಾರ ಸ್ವಾಮೀಜಿ ಅವರು ವ್ರತದಂತೆ ಪಾಲಿಸಿ ನಮ್ಮ ಮುಂದೆ ಬಹುದೊಡ್ಡ ಜವಾಬ್ದಾರಿ ಇರಿಸಿದ್ದಾರೆ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸಿರಾ ತಾಲ್ಲೂಕಿನ ತರೂರು ಗ್ರಾಮದ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಕೆ.ಆರ್. ರುದ್ರೇಶ್ ನಿರ್ಮಿಸಿರುವ ಡಾ. ಶಿವಕುಮಾರ ಸ್ವಾಮೀಜಿ ಅವರ ವಿಗ್ರಹ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅನ್ನ, ಅಕ್ಷರ, ಅಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ಇಡೀ ಜಗತ್ತಿಗೆ ಜ್ಞಾನಪೀಠ ಜ್ಯೋತಿಯನ್ನು ಹೊತ್ತಿಸಿ ಅದು ಸೂಸುವ ಕಿರಣದ ಮೂಲಕ ಸ್ವಾಮೀಜಿ ನಮ್ಮೊಟ್ಟಿಗೆ ಇದ್ದು ಅರ್ಶೀವದಿಸುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಶಿಕ್ಷಣ ದೊರೆಯುವ ಮುನ್ನ ಮಾನವ ಶಿಲೆ ಆಗಿರುತ್ತಾನೆ. ನಂತರ ಶಿಲ್ಪಕಲೆಯಾಗಿ ಮಾರ್ಪಡುತ್ತಾನೆ. ಇದೇ ಶಿಕ್ಷಣಕ್ಕಿರುವ ಶಕ್ತಿ ಎಂದರು.
ಸಿದ್ದರಬೆಟ್ಟದ ಬಾಳೆಹೊನ್ನೂರು ಪೀಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಕುಮಾರ ಸ್ವಾಮೀಜಿ ಬದುಕಿದ ಕಾಲಘಟ್ಟದಲ್ಲಿ ನಾವು ಅವರು ತೋರಿದ ಹಾದಿಯಲ್ಲಿ ಬಾಳುತ್ತಿರುವುದು ಸುಕೃತ ಎಂದರು.
ಕಾರದ ಮಠದ ಶಿವಯೋಗಿ ಸ್ವಾಮೀಜಿ, ತುಮುಲ್ ನಿರ್ದೇಶಕ ಎಸ್.ಅರ್.ಗೌಡ ಮಾತನಾಡಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ಹಾಗೂ ಬಡ ವಿದ್ಯಾರ್ಥಿಗಳಿಗೆ ಕೆ.ಆರ್.ರುದ್ರೇಶ್ ಅವರು ವಿದ್ಯಾರ್ಥಿ ವೇತನ ನೀಡಿದರು.
ಈ ಸಂದರ್ಭದಲ್ಲಿ ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕಾರದ ಶಿವಯೋಗಿ ಸ್ವಾಮೀಜಿ, ಪುತ್ಥಳಿ ಮತ್ತು ಮಂಟಪದ ದಾನಿ ಕಲ್ಲಶೆಟ್ಟಿಹಳ್ಳಿ ರುದ್ರೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ರೇಷ್ಮೆ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಮುದಿಮಡು ರಂಗಸ್ವಾಮಿ, ಮುದಿಮಡು ಮಂಜುನಾಥ್, ಉದಯಶಂಕರ್, ಮಾಜಿ ಜಿ.ಪಂ. ಸದಸ್ಯ ಪರ್ವತಪ್ಪ, ತರೂರು ಗ್ರಾ.ಪಂ.ಅಧ್ಯಕ್ಷೆ ಲತಾದೇವಿ, ಮಾಜಿ ಜಿ.ಪಂ. ಸದಸ್ಯ ಬೊಮ್ಮಣ್ಣ, ತಾ.ಪಂ. ಇಓ ಅನಂತರಾಜ್, ಬಿಇಓ ಶಂಕರಪ್ಪ, ಗ್ರಾ.ಪಂ. ಸದಸ್ಯರಾದ ಮಮತ, ನಾಗಮ್ಮ, ಪುಷ್ಪಲಕ್ಷ್ಮೀ, ತಿಪ್ಪೇಶ್, ಗಂಗಣ್ಣ, ನಾಗರಾಜ್, ಸತೀಶ್, ಗೀತಾ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ್, ಸುರೇಶ್‌ಬಾಬು, ತರೂರು ಬಸವರಾಜ್, ಪ್ರವೀಣ್ ಬಾಬು, ಮಹೇಶ್, ರಂಗನಾಥ್ ಯಾದವ್, ಪ್ರಮೀಳಾ ರಾಜಶೇಖರ್, ನಾಗರತ್ನಮ್ಮ, ಗಂಜಲಗುಂಟೆ ರಾಮಚಂದ್ರಪ್ಪ, ಸದಾನಂದಗೌಡ, ರಂಗಶಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಮನೋಜ್ ಮತ್ತಿತರರು ಉಪಸ್ಥಿತರಿದ್ದರು.