ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವುದೇ ಸಂಗೀತ

ಕಲಬುರಗಿ :ಎ.7: ಪ್ರತಿಯೊಬ್ಬರು ಸಂಗೀತ ಕೇಳುವುದರಿಂದ ಮತ್ತೆ ಮತ್ತೆ ಕೇಳಬೇಕೆಂಬ ಹಸಿವು ಸಂಗೀತಕ್ಕೆ ಇದೆ ಅದು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುವ ಕೆಲಸ ಮಾಡುತ್ತದೆ ಎಂದು ಶ್ರೀ ದೇವಿ ಎಲ್ಲಮ್ಮ ದೇವಸ್ಥಾನದ ಮಾತೋಶ್ರೀ ವಸಂತಮ್ಮ ತಾಯಿ ಅವರು ಅಭಿಪ್ರಾಯಪಟ್ಟರು.

ಆಳಂದ ರಸ್ತೆಯಲ್ಲಿರುವ ಶ್ರೀ ದೇವಿ ಎಲ್ಲಮ್ಮ ದೇವಸ್ಥಾನದಲ್ಲಿ ಇತ್ತೀಚಿಗೆ ಗಡಿನಾಡ ಸಂಗೀತ ಮತ್ತು ವಿವಿದೋದ್ದೇಶ ಸೇವಾ ಸಂಸ್ಥೆಯ ವತಿಯಿಂದ ವಚನ ಸಂಗೀತೋತ್ಸವ ಸಾಂಸ್ಕøತಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಪಂಚದಲ್ಲಿರುವ ಎಲ್ಲಾ ಸಂಗೀತಗಳಿಂದ ಭಾರತೀಯ ಸಂಗೀತ ಪರಂಪರೆ ವಿಭಿನ್ನವಾಗಿದೆ. ಭಾರತೀಯ ಸಂಗೀತ ಪರಂಪರೆ ಪೂಜನೀಯ ಸ್ಥಾನ ನೀಡಲಾಗಿದ್ದು, ಭಾರತೀಯ ಸಂಗೀತದಲ್ಲಿ ಭಕ್ತಿ ಮತ್ತು ಅಧ್ಯಾತ್ಮಕ್ಕೆ ವಿಶೇಷ ಸ್ಥಾನ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ವಿದ್ಯಾಧರ ಮಾಲಿಪಾಟೀಲ, ಪ್ರವೀಣಕುಮಾರ ಶ್ರೀನಿವಾಸ ಸರಡಗಿ, ನಾಗಯ್ಯ ಸ್ವಾಮಿ ಉಪಸ್ಥಿತರಿದ್ದರು. ಸಂಗೀತ ಕಲಾವಿದರಾದ ರೇಣುಕಾ ಖೂನಿ, ಚೆನ್ನವೀರಯ್ಯ ವಾಗ್ಧರಗಿ, ಶಿವರಾಜ ಹಿರೇಮಠ, ಚನ್ನಯ್ಯ ಸ್ವಾಮಿ, ಗಂಗಾಂಬಿಕಾ ಮಠಪತಿಯವರಿದಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು ಎಂದು ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ತಿಳಿಸಿದ್ದಾರೆ.