ಎಲ್ಲರನ್ನು ನಮ್ಮವರು ಎಂದ ಸಿದ್ದಗಂಗಾ ಶ್ರೀಗಳು: ಸೋಮಶೇಖರ ಮಣ್ಣೂರು

ಯಾದಗಿರಿ:ಎ.2: ಇವನಮ್ಮವ ಇವನಮ್ಮವ” ಎಂಬ ಭಾವನೆಯೇ ಮೈವೆತ್ತಂತೆ ಬದುಕಿದವರು ಸಿದ್ದಗಂಗಾ ಶ್ರೀಗಳು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ್ ಅಬಿಪ್ರಾಯಪಟ್ಟರು.
ನಗರದ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ವೀರಶೈವ ಸಮೂಹ ಸಂಘಟನೆಗಳಾದ ವೀರಶೈವ ಸಮಾಜ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶರಣ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ನಡೆದಾಡುವ ದೇವರು ಸಿದ್ಧಗಂಗೆಯ ಪರಮಪೂಜ್ಯ ಡಾ. ಶಿವಕುಮಾರಸ್ವಾಮಿಗಳವರ 114ನೇ ಜಯಂತೋತ್ಸವವ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವೀರಶೈವ ಸಮಾಜದ ನಗರಾಧ್ಯಕ್ಷ ಅಯ್ಯಣ್ಣ ಹುಂಡೇಕಾರ್, ಶ್ರೀಗಳ ಜೀವನ ಪವಿತ್ರವಾದದ್ದು ಅವರು ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ, ದೊಡ್ಡ ದೊಡ್ಡ ಹುದ್ದೆ ಅಲಂಕರಿಸುವಂತೆ ಆಶೀರ್ವದಿಸಿದ್ದಾರೆ. ಅವರಲ್ಲಿ ಯಾವುದೇ ಭೇದಭಾವ ಇರಲಿಲ್ಲ. “ಇವನಾರವ ಇವನಾರವ ಎಂಬ ಭಾವನೆಯೇ ಇಲ್ಲದ ಎಲ್ಲರೂ ಇವ ನಮ್ಮವ ಎಂಬ ಭಾವನೆಯಲ್ಲಿಯೇ ಜೀವನ ನಡೆಸಿದ ಶ್ರೀಗಳ ಜೀವನ ಪವಿತ್ರವಾದದ್ದು ಆಗಿತ್ತು ಎಂದರು.
ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ ಮಾತನಾಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ, ದೊಡ್ಡ ದೊಡ್ಡ ಹುದ್ದೆ ಅಲಂಕರಿಸುವಂತೆ ಆಶೀರ್ವದಿಸಿದ್ದಾರೆ. ಅವರಲ್ಲಿ ಯಾವುದೇ ಭೇದಭಾವ ಇರಲಿಲ್ಲ. ವಿಶ್ವ ರತ್ನವಾದ ಶ್ರೀಗಳು ಬಡತನದಿಂದ ಬಂದ ಭಗವಂತ ಎನಿಸಿಕೊಂಡರು. ತ್ರಿವೇದಿ ದಾಸೋಹಗಳು. ನಡೆದಾಡುವ ದೇವರು ಎಂದು ಪ್ರಸಿದ್ಧರಾದರು ಎಂದು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಮಹಾಸಭಾದ ತಾಲೂಕ ಅಧ್ಯಕ್ಷರಾದ ಆರ್.ಮಹಾದೇವಪ್ಪ, ಡಾ. ಸಿದ್ದಪ್ಪ ಹೊಟ್ಟಿ, ಯುವ ಘಟಕದ ಅಧ್ಯಕ್ಷ ಅವಿನಾಶ್ ಜಗನ್ನಾಥ, ಶಿವರಾಜ್ ಶಾಸ್ತ್ರಿ, ಶರಣು ಇಡ್ಲೂರು, ನಾಗೇಂದ್ರ ಜಾಜಿ, ನೂರಂದಪ್ಪ ಲೇವಡಿ, ಚನ್ನಪ್ಪ ಸಾಹು ಠಾಣಗುಂದಿ, ಶೇಖರ ಅರಳಿ, ಸುಭಾಷ್ ಆಯಾರಕರ, ಸಿದ್ದು ಪಾಟೀಲ್, ನಾಗನಗೌಡ ಬೆಳಗೇರಿ, ಬಸವರಾಜ ಸಾವೂರ, ಶರಣು ಆಶನಾಳ, ದೇವಿಂದ್ರ ರೆಡ್ಡಿ, ಬಂದಯ್ಯಸ್ವಾಮಿ ಗವಿಮಠ, ನೀಲಕಂಠ ಶೀಲವಂತ್ ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಮಹಾಸಭಾ ಉಪಾಧ್ಯಕ್ಷೆ ಶ್ರೀಮತಿ ಅನ್ನಪೂರ್ಣಮ್ಮ ಜವಳಿ ಪ್ರಾರ್ಥಿಸಿದರು. ಬಸವರಾಜ್ ಮೋಟ್ನಳ್ಳಿ ಸ್ವಾಗತಿಸಿದರು. ಪ್ರಭುಸ್ವಾಮಿ ವಂದಿಸಿದರು.