
ಭಾಲ್ಕಿ:ಮಾ.6: ಜಾತಿ, ಮತಗಳಿಂದ ಧರ್ಮ ಹುಟ್ಟಿಲ್ಲ, ಮಾನವೀಯತೆಯಿಂದ ಧರ್ಮ ಹುಟ್ಟಿದೆ, ಎಲ್ಲಾ ಧರ್ಮಗಳಲ್ಲಿಯೂ ಮಾನವ ಧರ್ಮವೇ ಶ್ರೇಷ್ಠವಾಗಿದೆ ಎಂದು ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ರವಿವಾರ ನಡೆದ ಮಹಾ ಮಾನವತಾವಾದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಗದ್ಗುರು ರೇಣುಕಾಚಾರ್ಯರು ಜಾತಿ, ಮತ, ಧರ್ಮಗಳನ್ನು ಮೀರಿ ನಿಂತವರಾಗಿದ್ದರು. ಅವರು ಮಾನವ ಧರ್ಮಕ್ಕೆ ಜಯವಾಗಿಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶ ನೀಡಿ, ಮಾನವರು ಸದಾಚಾರಿಗಳಾಗಿ ಬದುಕಲು ಕಲಿಸಿದ್ದರು. ಅಂತಹ ಮಹನೀಯರ ನೆನೆಸಿಕೊಳ್ಳುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಶಿಕ್ಷಕಿ ಶೋಭಾ ಮಾಸಿಮಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ದೀಪಕ ಗಾಯಕವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಿರಣಕುಮಾರ ಭಾಟಸಿಂಗೆ, ಶಿವಕುಮಾರ ವಾಡಿಕರ, ಶಿವಶರಣಪ್ಪ ಸೊನಾಳೆ ಉಪಸ್ಥಿತರಿದ್ದರು.
ಪ್ರದೀಪ ಜೋಳದಪಕೆ ಸ್ವಾಗತಿಸಿದರು. ನಾಗರಾಜ ಕೋಟೆ ನಿರೂಪಿಸಿದರು. ಓಂ ಝೆಡ್ ಬಿರಾದಾರ ವಂದಿಸಿದರು.