ಎಲ್ಲದಕ್ಕೂ ಹಣವೇ ಪರಿಹಾರವಲ್ಲ: ಸಲಗಾರ

ಬಸವಕಲ್ಯಾಣ:ಮೇ.15: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಪುತ್ರ ವಿಜಯಸಿಂಗ್ ಅವರು ನೂರಾರು ಕೋಟಿ ಹಣ ಸುರಿದರೂ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ.
ನನಗೆ ಮತ ನೀಡಲು ಮುಂಬೈ, ಪುಣೆ, ಹೈದರಾಬಾದ್‍ನಿಂದಲೂ ಜನರು ಬಂದಿದ್ದರು. 92 ಸಾವಿರಕ್ಕೂ ಹೆಚ್ಚಿನ ಮತ ನೀಡಿ ಸಾವಿರಾರು ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಲಾಗಿದೆ ಎಂದು ಬಸವಕಲ್ಯಾಣ ಶಾಸಕ ಶರಣು ಸರಕಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.