ಎಲ್ರ  ಕಾಲೆಳಿಯತ್ತೆ ಕಾಲ ಹಾಡು ಬಿಡುಗಡೆ….

ಎಂಬತ್ತು ತೊಬ್ಬಂತ್ತರ ದಶಕದ ಕಾಲ ಘಟ್ಟದ ಕತೆ ಮುಂದಿಟ್ಟುಕೊಂಡು ನಿರ್ದೇಶಕ ಸುಜಯ್ ಶಾಸ್ತ್ರಿ ” ಎಲ್ರ ಕಾಲೆಳಿಯುತ್ತೆ ಕಾಲ” ಚಿತ್ರ ತೆರೆ ಮೇಲೆ ತರಲು ಮುಂದಾಗಿದ್ದಾರೆ

ರಾಜ್ ಗುರು ಕಥೆ ಬರೆದಿರುವ  ಚಿತ್ರದ ಮೂಲಕ ರಾಪರ್ ಚಂದನ್ ಶೆಟ್ಟಿ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು ನಟಿ ರಾಗಿಣಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಚಿತ್ರದ ಕುರಿತು ಮಾಹಿತಿ ನೀಡಿದ  ಸಜಯ್ ಶಾಸ್ತ್ರಿ 80-90ದಶಕದ ಸಿನಿಮಾ,  ಪ್ರಮೋಷನಲ್ ಸಾಂಗ್  ಬಿಡುಗಡೆ ಮಾಡಲಾಗಿದೆ. ಆಸೆ ಪಟ್ಟು‌ಮಾಡಿದ ಸಿನಿಮಾ ಇದೆ , ಶೀಘ್ರದಲ್ಲಿ ತೆರೆಗೆ ತರುವ ಉದ್ದೇಶವಿದೆ. ಎಲ್ಲರ ಸಹಕಾರವಿರಲಿ ಎಂದರು

ನಾಯಕ ಚಂದನ್ ಶೆಟ್ಟಿ ಮಾತನಾಡಿ,ನಟಿ ರಾಗಿಣಿ ಮೇಲೆ ಕೆಂಪೇಗೌಡದ ಸಮಯದಲ್ಲಿ ಕ್ರಷ್ ಆಗಿತ್ತು. ಮನೆಯಲ್ಲಿ ಹೆಂಡ್ತಿ ನೋಡ್ತಾ ಇರ್ತಾಳೆ.‌ಮನೆಗೆ ಹೋಗಿ ಕನ್ ವಿಸ್ ಮಾಡುತ್ತೇನೆ .ಟುಣ್ ಟುಣ್ ಹಾಡನ್ನು ಮಂಗ್ಲಿ ಜೊತೆಗೂಡಿ ಹಾಡಿದ್ದೇನೆ ಎಂದರು.

ನಟಿ ಅರ್ಚನಾ ಕೊಟ್ಟಿಗೆ ಮತ್ತು ನಟಿ ರಾಗಿಣಿ ದ್ವಿವೇದಿ ತಮ್ಮ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ ಒಳ್ಳೆಯ ಚಿತ್ರದಲ್ಲಿ ಭಾಗಿಯಾಗಿದ್ದಕ್ಕೆ ಖುಷಿ ಇದೆ ಎಂದರು.

ನಿರ್ಮಾಪಕರಾದ  ಉಷಾ  ಮತ್ತು ಗೋವಿಂದರಾಜು ಮಾತನಾಡಿ, ಮೂರನೆ  ಸಿನಿಮಾ, 1980 ಸಿನಿಮಾ ನೆನಪು ಮಾಡುವ ಚಿತ್ರ, ನಿರ್ದೇಶಕರು ಅಂದುಕೊಂಡದಕ್ಕಿಂತ ಚೆನ್ನಾಗಿ ಮಾಡಿದ್ದಾರೆ.  ಚಂದನ್ ಗೆ ನಾಯಕನಾಗಿ ಮೊದಲ ಸಿನಿಮಾ, ಚಂದನ್ ಸಿನಿಮಾ‌ ಮಾಡಬೇಕು ಅಂದುಕೊಂಡಿದ್ದೆ ಈಗ ಕಾಲ ಕೂಡಿಬಂದಿದೆ ಎಂದರು

ಕಥೆಗಾರ ರಾಜ್ ಗುರು ಮಾಹಿತಿ ನೀಡಿ ಕುಟುಂಬ ಸಮೇತ ಚಿತ್ರ ನೋಡಬಹುದಾಗಿದೆ ಎನ್ನುವ ಭರವಸೆ ನೀಡಿದರು. ಸಹ ನಟರಾದ ರಾಕೇಶ್ ಪೂಜಾರಿ, ಆಕರ್ಷ್, ರಜನಿಕಾಂತ್, ಛಾಯಾಗ್ರಾಹಕ ವಿಶ್ವಜಿತ್ ರಾವ್ ಮಾಹಿತಿ ಹಂಚಿಕೊಂಡರು.