`ಎಲ್ಟು ಮುತ್ತಾ’ ನೆಲದ ಕಥೆಯ ಚಿತ್ರ

ಕನ್ನಡದಲ್ಲಿ ಇತ್ತೀಚೆಗೆ ಹೊಸಬಗೆಯ ಕಥೆಗಳನ್ನು ಹೊಂದಿರುವ ಚಿತರ ಸೆಟ್ಟೇರುತ್ತಿವೆ. ಜೊತೆಗೆ ಸಿನಿಮಾ ಮೇಲಿನ ಪ್ರೀತಿಯಿಂದ ಚಿತ್ರರಂಗಕ್ಕೆ ಬರುವ ಮಂದಿಯ ಸಂಖ್ಯೆ ಹೆಚ್ಚಾಗುತ್ತಿದೆ. ಬೇರೆಬೇರೆ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಐವರು ಜೊತೆ ಗೂಡಿ ನಿರ್ಮಿಸಿರುವ ಚಿತ್ರ “ಎಲ್ಟು ಮತ್ತಾ”.

ಕೊಡಗಿನ ನೈಜ ಘಟನೆಯ ಎಳೆಯನ್ನಿಟ್ಟುಕೊಂಡು ನಿರ್ದೇಶಕ ರಾ.ಸೂರ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅವರ ತಂಡದ ಹೈ ಫೈವ್ ಜೋಡಿ ಸಾಥ್ ನೀಡಿದೆ.

ಎಲ್ಲರೂ ಹೊಸಬರು ಸೇರಿಕೊಂಡು ಹೊಸತನದ ಚಿತ್ರ ನೀಡಲು ಇಡೀ ತಂಡ ಮುಂದಾಗಿದೆ. ಕೊಡಗು ಭಾಗದ ಕಥೆ ಆದ ಹಿನ್ನೆಲೆಯಲ್ಲಿ ಆ ಭಾಗದಲ್ಲಿಯೇ ಚಿತ್ರೀಕರಣ ಪೂರ್ಣ ಮಾಡಿದೆ ತಂಡ. ಚಿತ್ರೀಕರಣ ಪೂರ್ಣಗೊಳಿಸಿ ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ.

ಚಿತ್ರದ ಪಾತ್ರ ಪರಿಚಯ ಮಾಡುವ ಮೂಲಕ ತಂಡ ಹೊಸತನದ ಮೂಲಕ ಗಮನ ಸೆಳೆದಿದೆ. ಹೊಂಬಾಳೆ ಸಂಸ್ಥೆಯ ಶೈಲಜಾ ಕಿರಂಗದೂರು, ಗಾಯಕಿ ಸಂಗೀತ ಕಟ್ಟಿ , ನಿರ್ದೇಶಕ ಎಎಂಆರ್ ರಮೇಶ್ ಮತ್ತಿತರು ಚಿತ್ರಕ್ಕೆ ಶುಭಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ರಾ.ಸೂರ್ಯ, ಕೊಡಗಿನವನು, ಚಿತ್ರದಲ್ಲಿ ಮುತ್ತನ ಪಾತ್ರ ಮಾಡಿದ್ದೇನೆ. ಎಲ್ಟು ಮತ್ತು ಮತ್ತ ಇಬ್ಬರು ಸ್ನೇಹಿತರ ಕತೆ. ಎಲ್ಟು ಸಾವಿನ ಸಂದರ್ಭದಲ್ಲಿ ಡೋಲು ಬಡಿದರೆ ಮತ್ತಾ ಕಾರ್ಯಕ್ರಮಕ್ಕೆ ಡೋಲು ಬಡಿಯುವ ಇಂತಹ ಘಟನೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಜುಲೈನಲ್ಲಿ ಚಿತ್ರ ತೆರೆಗೆ  ತರುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.

ಚಿತ್ರದಲ್ಲಿ ಕಾಣಿಸಿಕೊಂಡಿರುವ ಶೌರ್ಯ ಪ್ರತಾಪ್ ಮಾತನಾಡಿ ವಿಬಿನ್ನವಾದ ಪಾತ್ರ ಮಾಡಿದ್ದೇನೆ ನೋಡಿ ಹರಿಸಿ ಎಂದರೆ ಕಲಾವಿದರಾದ  ಕಾಕ್ರೋಚ್ ಸುಧಿ,ಯಮುನಾ ಶ್ರೀನಿಧಿ, ನಿರ್ಮಾಪಕರಾದ ಬಸವರಾಜೇಶ್ವರಿ ಭೂಮರೆಡ್ಡಿ ,ಸತ್ಯ ಶ್ರೀನಿವಾಸನ್ ,  ಪ್ರಸನ್ನ ಕೇಶವ,  ರುಹಾನ್ ಆರ್ಯ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.