ಭಾಲ್ಕಿ:ಎ.27:ಭಾರತೀಯ ಜೀವ ವಿಮಾ ನಿಗಮವು (ಎಲ್‍ಐಸಿ)ಜನರ ವಿಶ್ವಾಸ ಗಳಿಸಿ ದೇಶಾದ್ಯಂತ ಬೆಳೆಸುವಲ್ಲಿ
ಎಲ್‍ಐಸಿ ಪ್ರತಿನಿಧಿಗಳ (ಏಜೆಂಟ್‍ರ) ಪಾತ್ರ ಬಹು ಮುಖ್ಯವಾಗಿದೆ ಎಂದು ಬಸವ ಕಲ್ಯಾಣ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ವ್ಯವಸ್ಥಾಪಕ ಕೆ.ಬಾಲಚಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಎಲ್‍ಐಸಿ ಕಛೇರಿಯಲ್ಲಿ ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಮ್‍ಡಿಆರ್‍ಟಿ ಯುಎಸ್‍ಎ)ಮತ್ತು ಗ್ಯಾಲಕ್ಸಿ ಪ್ರವೇಶದಲ್ಲಿ ಸಾಧನೆ ಮಾಡಿದ ಎಲ್‍ಐಸಿ ಪ್ರತಿನಿಧಿಯಾದ ಸ್ನೇಹಾ ಸುಭಾಷಚಂದ್ರ ದಾಡಗೆ ದಂಪತಿಗಳಿಗೆ ಗೌರವಿಸಿ ಮಾತನಾಡಿದರು.
ಎಲ್‍ಐಸಿ ವಿಮೆ ವ್ಯಕ್ತಿಯ ನಿಧನದ ನಂತರ ಮತ್ತು ಜೀವತಾವಧಿಯಲ್ಲಿ ಕುಟುಂಬದ ಸದಸ್ಯರಿಗೆ ಆಧಾರ ಸ್ಥಂಭವಾಗಿದೆ.ವಿಮೆ ವಹಿವಾಟಿನಲ್ಲಿ ಹಣ ತೊಡಗಿಸಿದರೆ ದೀರ್ಘಾವಧಿಯ ಉಳಿತಾಯ ಸಾಧ್ಯವಾಗುತ್ತದೆ ಎಂದು ಹೇಳಿ,ಎಮ್‍ಡಿಆರ್‍ಟಿ ಮತ್ತು ಗ್ಯಾಲಕ್ಸಿ ಸಾಧಕ ಎಲ್‍ಐಸಿ ಪ್ರತಿನಿಧಿಯಾದ ಸ್ನೇಹಾ ಸುಭಾಷಚಂದ್ರ ದಾಡಗೆ ದಂಪತಿಗಳು ನಿರಂತರ ಪ್ರಯತ್ನ ಮತ್ತು ನಿರ್ದಿಷ್ಠ ಗುರಿ ಹಾಗೂ ಛಲದೊಂದಿಗೆ ಪರಿಶ್ರಮಿಸಿ ಅಲ್ಪಾವಧಿಯಲ್ಲಿ ಎಮ್‍ಡಿಆರ್‍ಟಿ ಸದಸ್ಯರಾಗಿ ಇತರೆ ಪ್ರತಿನಿಧಿಗಳಿಗೆ ಪ್ರೇರಕರಾಗಿ ಮಾದರಿಯಾಗಿದ್ದಾರೆ ಎಂದರು.
ಪ್ರಾಚಾರ್ಯ ಅಶೋಕ ರಾಜೋಳೆ ಮಾತನಾಡಿ,1956ರಲ್ಲಿ ಸ್ಥಾಪನೆಗೊಂಡ ಎಲ್‍ಐಸಿ ವಿಮೆ ಸೌಲಭ್ಯವು ಬದುಕಿನ ಅನಿರೀಕ್ಷಿತ ಅವಘಡಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.ಪ್ರತಿಯೊಬ್ಬರೂ ವಿಮೆ ಪಡೆದು ಭಾವಿ ಜೀವನಕ್ಕೆ ಸುರಕ್ಷತೆ ಮತ್ತು ಭದ್ರತೆ ಒದಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಲ್‍ಐಸಿ ಡಿಓ ರಾಜಶೇಖರ ಪಾಟೀಲ್,ಡಿಓ ನಾಗರಾಜ ಮತ್ತು ಎಲ್‍ಐಸಿ ಪ್ರತಿನಿಧಿಗಳಾದ ವೀರಭದ್ರ ಬಿರಾದಾರ,ಅಶೋಕ ಚೆಲವಾ,ಶರಣು ಹಣಮಶೆಟ್ಟೆ, ಕಲ್ಯಾಣರಾಯ ಶಿವಣಕರ್,ಪ್ರೊ.ರತ್ನದೀಪ ಶೇರಿಕಾರ ಮಾತನಾಡಿ,ಎಮ್‍ಡಿಆರ್‍ಟಿ ಸಾಧಕ ಸುಭಾಷಚಂದ್ರ ದಾಡಗೆ ತಾವು ಬದುಕಿ ಇತರರಿಗೆ ಬದುಕುವ ಕಲೆ ತಿಳಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಹೇಳಿ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ:ಎಮ್‍ಡಿಆರ್‍ಟಿ ಯುಎಸ್‍ಎ ಮತ್ತು ಗ್ಯಾಲಕ್ಸಿ ಪ್ರವೇಶದಲ್ಲಿ ಸಾಧನೆ ಮಾಡಿದ ಎಲ್‍ಐಸಿ ಪ್ರತಿನಿಧಿಯಾದ ಸ್ನೇಹಾ ಸುಭಾಷಚಂದ್ರ ದಾಡಗೆ ದಂಪತಿಗಳಿಗೆ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಭಾಷಚಂದ್ರ ದಾಡಗೆ,ನಾನು ಎಲ್‍ಐಸಿಯಲ್ಲಿ ನಿಗದಿತ ಗುರಿ ತಲುಪುವಲ್ಲಿ ಪತ್ನಿ ಸ್ನೇಹಾ ಮತ್ತು ಮೇಲಾಧಿಕಾರಿಗಳ ಮಾರ್ಗದರ್ಶನ,ಪ್ರೋತ್ಸಾಹ ಹಾಗೂ ಸಹಪಾಠಿಗಳ ಸಹಕಾರವೇ ಕಾರಣ ಎಂದು ತಿಳಿಸಿದರು.
ಎಲ್‍ಐಸಿ ಡಿಓ ಸಂಗಮೇಶ ಪಾಟೀಲ್,ಎಒ ವೇಣುಗೋಪಾಲ,ಶಶಿಕಾಂತ ಅಷ್ಟೂರೆ,ರಾಘವೇಂದ್ರ ಪ್ರಸಣ್ಣೆ,ವೀರಶೆಟ್ಟಿ ಮುಲಗೆ,ಶಿವಶರಣಪ್ಪ,ನಾಗಶೆಟ್ಟಿ,ಅನೀಲ ಕಳಸೆ,ಅಮರ ಹಲ್ಮಂಡಗಿ,ಬಸವರಾಜ ಪಾಟೀಲ,ರಾಜಶೇಖರ ಮುದ್ದಾ,ಎಮ್.ಮುದ್ದಾ,ಚಿಲ್ಲರ್ಗೆ,ಶಿವುಕುಮಾರ ಪಾಟೀಲ,ಪವನ,ಬಿ.ಚಿಲ್ಲರ್ಗೆ,ಶರಣು ಪಾಟೀಲ್,ಸುರೇಶ ಎಮ್.,ಅಮೃತ ಹೂಗಾರ,ಶೋಭಾ ಮುದ್ದಾ,ಜಗದೇವಿ ಹೂಗಾರ,ವಿಜಯಲಕ್ಷ್ಮೀ ಹೊಸಾಳೆ,ಗುಂಡಮ್ಮ ಬಿರಾದಾರ,ಮೀನಾಕ್ಷಿ ಶೇರಿಕಾರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಾಧವರಾವ ತುಕ್ಕಣ್ಣ ಸ್ವಾಗತಿಸಿದರು.ಭಾಲ್ಕಿಯ ಉಪಗೃಹ ಆಧಾರಿತ ಶಾಖೆಯ ವ್ಯವಸ್ಥಾಪಕ ವಿಜಯ ಅಫಜಲಪುರಕರ್ ಪ್ರಾಸ್ತಾವಿಕ ಮಾತನಾಡಿದರು.ಹಣಮಂತ ಕಾರಾಮುಂಗೆ ನಿರೂಪಿಸಿದರು.ಸೋಮನಾಥ ಹೊಸಾಳ್ಳೆ ವಂದಿಸಿದರು.