ಎಲ್‌ಎಸಿ ಉದ್ದಕ್ಕೂ ಸೇನೆ ಜಮಾವಣೆ: ಪಾಂಡೆ

ನವದೆಹಲಿ,ನ.೨೧- ವಾಸ್ತವ ಗಡಿ ರೇಖೆ ಉದ್ದಕ್ಕೂ ಚೀನಾದಿಂದ ನಿರಂತರ ಮೂಲಸೌಕರ್ಯ ಹೆಚ್ಚು ಮಾಡಿದೆ. ಅದರಲ್ಲಿಯೂ ಲಡಾಖ್‌ನ ಆಕ್ರಮಿತ ಅಕ್ಸಾಯ್ ಚಿನ್‌ನಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.
ಚೀನಾದ ಪೀಪಲ್ ಲಿಬರೇಷನ್ ಆರ್ಮಿ ಗಡಿ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಿದೆ. ಜೊತೆಗೆ ಸೇನಾ ಪಡೆಗಳನ್ನು ಕಡಿತ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ ಚೀನಾ ಗಡಿ ಭಾಗ್ ೩,೪೮೮ ಕಿಮೀ ವಾಸ್ತವಿಕ ನಿಯಂತ್ರಣ ರೇಖೆ ಉದ್ದಕ್ಕೂ ಭಾರತೀಯ ಸೇನೆ ಚಳಿಗಾಲದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದು ಹೆಚ್ಚಿನ ಸೇನೆ ನಿಯೋಜಿಸಲಾಗಿದೆ ಎಂದರು.
ಗಡಿ ಭಾಗದಲ್ಲಿ ಮೂರು ಸಂಯೋಜಿತ ಸಶಸ್ತ್ರ ಬ್ರಿಗೇಡ್‌ಗಳ ಚಲನೆಯ ಮೇಲೆ ನಿಗಾ ಇರಿಸಲಾಗಿದೆ. ಚೀನೀ ಸೇನೆ ಪೂರ್ವ ವಲಯದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ೨೦ ನೇ ಪಕ್ಷದ ಕಾಂಗ್ರೆಸ್‌ಗೆ ಒಂದು ತಿಂಗಳ ಮೊದಲು ಬಿಗಿ ಭದ್ರತೆ ಒದಗಿಸಲಾಗಿದೆ ಎಂದರು.
ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಸುಬ್ರಹ್ಮಣ್ಯಂ ಜೈಶಂಕರ್ ಅವರು ದ್ವಿಪಕ್ಷೀಯ ಸಂಬಂಧ ಮರುಸ್ಥಾಪಿಸಲು ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಶಾಂತಿ ಮತ್ತು ನೆಮ್ಮದಿ ವಾತಾವರಣ ಸೃಷ್ಠಿ ಏಕೈಕ ಕೀಲಿ ಕೈ ಆಗಿದೆ ಎಂದಿದ್ದಾರೆ.
೨೦೨೦ರ ಮೇ ತಿಂಗಳಲ್ಲಿ ಪೂರ್ವ ಲಡಾಖ್‌ನಲ್ಲಿ ಉಭಯ ಸೇನೆಯ ಗಡಿ ಉಲ್ಲಂಘನೆಯ ನಂತರ ಎರಡೂ ಕಡೆ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಅದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಹಲವು ರಾಜತಾಂತ್ರಿಕ ಸಭೆಗಳೂ ನಡೆದಿವೆ ಎಂದು ಹೇಳಿದ್ದಾರೆ.
ದಿನಾಂಕ ಅಂತಿಮವಾಗಬೇಕಾಗಿದೆ.
ಭಾರತ ಮತ್ತು ಚೀನಾ ನಡುವೆ ೧೭ನೇ ಸುತ್ತಿನ ಹಿರಿಯ ಸೇನಾ ಅಧಿಕಾರಿಗಳ ಸಭೆಯ ದಿನಾಂಕ ಇನ್ನೂ ಅಂತಿಮವಾಗಬೇಕಿದ್ದರೂ, ಭಾರತೀಯ ಸೇನೆಯ ಚಳಿಗಾಲದ ಹಿನ್ನೆಲೆಯಲ್ಲಿ ಮೂರು ಸಂಯೋಜಿತ ಸಶಸ್ತ್ರ ದಳಗಳನ್ನು ಗಡಿ ಭಾಗದಲ್ಲಿ ನಿಯೋಜಿಸಿದೆ.
ಪ್ರತಿ ದಳದಲ್ಲಿ ಪ್ರತಿ ದಳ ಸುಮಾರು ಒಂದು ವಿಭಾಗದ ಬೆಂಬಲ ಅಂಶಗಳೊಂದಿಗೆ ೪,೫೦೦ ಸೈನಿಕರನ್ನು ಹೊಂದಿದೆ ಎಂದು ಹೇಳಿದ್ದಾರೆ.
ಚೀನಾ-ಭೂತಾನ್ ಗಡಿಯ ಸಮೀಪವಿರುವ ಸಿಲ್ಲಿಗುರಿ ಕಾರಿಡಾರ್‌ನಾದ್ಯಂತ ಫರಿ ಜೊಂಗ್ ಪ್ರದೇಶದ ಸುತ್ತಲೂ ಚೀನಾದ ಸೇನೆ ಸಂಯೋಜಿತ ಸಶಸ್ತ್ರ ದಳವನ್ನು ಮೀಸಲು ಎಂದು ನಿಯೋಜಿಸಿದೆ ಎಂದು ಮಾಹಿತಿ ನೀಡಿದ್ದಾರೆ.