ಹುಬ್ಬಳ್ಳಿ,ಜೂ.3: ಹು-ಧಾ ಮಹಾನಗರದಲ್ಲಿ ಎಲ್‍ಆ್ಯಂಡ್‍ಟಿ ತೆಗೆದು ಹಾಕಿ ರಾಜ್ಯ ಸರ್ಕಾರ ಮತ್ತೇ ಜಲಮಂಡಳಿಯವರಿಗೆ ಕಾರ್ಯ ನಿರ್ವಹಣೆಯ ಉಸ್ತುವಾರಿಯನ್ನು ನೀಡಬೇಕೆಂದು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ್ ರಾಜ್ಯಾಧ್ಯಕ್ಷರಾದ ವಿಜಯಲಕ್ಷ್ಮಿ ಧಾರವಾಡಕರ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಡಿಯಲ್ಲಿರುವ ವಾರ್ಡ್ ಗಳಲ್ಲಿ ನೀರು ಸ್ವಚ್ಛ ಹಾಗೂ ಶುದ್ಧೀಕರಣಗೊಳಿಸುತ್ತಿಲ್ಲ ಹಾಗೂ ಯಾವುದೇ ಶುದ್ಧೀಕರಣ ರಾಸಾಯನಿಕಗಳನ್ನು ಬಳಸದೇ ಅವಳಿನಗರ ಜನತೆಯ ಆರೋಗ್ಯ ಹದಗೆಡುವಲ್ಲಿ ಕಾರಣವಾಗಿದ್ದು, ಎಲ್&ಟಿ ಯವರ ಮೇಲೆ ಯಾವುದೇ ಕ್ರಮಗಳನ್ನು ತಗೆದುಕೊಳ್ಳುತ್ತಿಲ್ಲ ಈ ನಿಟ್ಟಿನಲ್ಲಿ ಎಲ್‍ಆ್ಯಂಡ್‍ಟಿ ರದ್ದುಗೊಳಿಸಬೇಕು ಅಥವಾ ಎಲ್‍ಆ್ಯಂಡ್‍ಟಿ ಅವರು ಸರಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.
ಎಲ್‍ಆ್ಯಂಡ್‍ಟಿ ಸರಿಯಾದ ಕಾರ್ಯ ನಿರ್ವಹಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಎಲ್‍ಆ್ಯಂಡ್‍ಟಿ ವಿರುದ್ದ ಪ್ರತಿಭಟನೆ ನಡೆಸುವ ಮೂಲಕ ಮತ್ತೇ ಜಲನಿರ್ವಹಣೆ ಕಾರ್ಯವನ್ನು ಜಲಮಂಡಳಿಗೆ ಹಸ್ತಾಂತರ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಂಗ್ ಜಿಲ್ಲಾಧ್ಯಕ್ಷ ಚಂದನ ದಳವಿ, ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಜುಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೆಹಬೂಬ್ ದಾಂಡೆವಾಲೆ, ಧಾರವಾಡ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಮರ್ಥ ಕುಲಕರ್ಣಿ, ರಾಜ್ಯ ಕಾರ್ಯದರ್ಶಿ ರಕ್ಷಿತಾ ಆರ್.ಡಿ ಉಪಸ್ಥಿತರಿದ್ದರು.