ಎಲೇಬೇತೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ. ೧೬; ತಾಲ್ಲೂಕಿನ ಎಲೇಬೇತೂರು  ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಕೊಂಡಜ್ಜಿ ಬಸಪ್ಪ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವತಂತ್ರ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಬಸವರಾಜಪ್ಪನವರು ಧ್ವಜಾರೋಹಣ ನೆರವೇರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಂಜಾನೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳು ಸಮವಸ್ತ್ರದೊಂದಿಗೆ, ಘೋಷಣೆಗಳನ್ನು ಕೂಗುತ್ತ ಪ್ರಭಾತ್ ಫೇರಿ ನಡೆಸಿದರು. ನಂತರ ಶಾಲಾ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವಂದೇಮಾತರಮ್ ಗೀತೆ, ರಾಷ್ಟ್ರಗೀತೆ, ಧ್ವಜಗೀತೆಗಳನ್ನು ಸಾಮೂಹಿಕವಾಗಿ ಹಾಡಲಾಯಿತು. ಸ್ಕೌಟ್ ಅಂಡ್ ಗೈಡ್ಸ್ ಮತ್ತು ಎನ್ ಸಿ ಸಿ ಪಡೆಯವರು ಧ್ವಜವಂದನೆ ಸಲ್ಲಿಸಿದರು. `ಸಾರೇ ಜಹಾ ಸೇ ಅಚ್ಚಾ’ ಗೀತೆಗೆ ಆಕರ್ಷಕ ನೃತ್ಯ ನೀಡಿದರು.ಪ್ರಾರಂಭದಲ್ಲಿ ಅನುಷಾ ಮತ್ತು ಸಂಗಡಿಗರು ವಚನ ಪ್ರಾರ್ಥನೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಪ್ರಗತಿ, ದೃಷ್ಟಿ, ಸಿಂಚನಾ, ಪವಿತ್ರ, ನಿಹಾಲ್, ಯಶ್ವಂತ್ ದೇಶಭಕ್ತಿಗೀತೆಗಳನ್ನು ಹಾಡಿದರು. ಛಾಯಾ, ಹರ್ಷಿತಾ, ಮೇಘನಾ, ನಿಹಾರಿಕಾ, ಯಶೋಧ, ಅನನ್ಯ, ಖುಷಿ, ಮಹಾಲಕ್ಷ್ಮಿ, ತೇಜಸ್ವಿನಿ, ವಿಭಾ, ರಿಷಿಕಾ ಮತ್ತು ಅಧ್ಯಾಪಕರಾದ ಡಾ. ಎಸ್ ಓ  ಷಣ್ಮುಖಪ್ಪ ಸ್ಚತಂತ್ರೋತ್ಸವ ಕುರಿತಂತೆ ಮಾತನಾಡಿದರು.ಮುಖ್ಯ ಅತಿಥಿಗಳಾದ ಹೆಚ್ ಬಸವರಾಜಪ್ಪ, ಮರುಳಸಿದ್ದಪ್ಪ ಮತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಎಂ ಬಸವರಾಜಪ್ಪನವರು  ಸ್ವಾತಂತ್ರ್ಯೋತ್ಸವದ ಮಹತ್ವ ಕುರಿತಂತೆ ಮಾತನಾಡಿದರು.ವೇದಿಕೆಯ ಮೇಲೆ ಸ್ಥಳೀಯ ಸಲಹಾ ಸಮಿತಿಗಳ ಪದಾಧಿಕಾರಿಗಳಾದ ಬಿ ವಿರುಪಾಕ್ಷಪ್ಪ, ಪತ್ರಬಸಪ್ಪ, ಹಳ್ಳಿಕೇರಿ ರಾಜಪ್ಪ, ಬಿ ಪ್ರಭು, ಎಂ ಷಡಕ್ಷರಪ್ಪ ನರೇಂದ್ರ, ಕೊಟ್ರೇಶ್, ಚೇತನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.ಮಕ್ಕಳು ಸ್ವತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಹಾಕಿ ಗಮನಸೆಳೆದರು. ವಿವಿಧ ದೇಶಭಕ್ತಿ ಗೀತೆಗಳಿಗೆ ಮಕ್ಕಳು ಆಕರ್ಷಕ ನೃತ್ಯ ನೀಡಿದರು. ವಿಶ್ವಬಂಧು ಪೆಟ್ರೋಲ್ ಬಂಕ್ ನ ಮಾಲಿಕರಾದ ಮರುಳಸಿದ್ದಪ್ಪನವರು ಎಲ್ಲರಿಗೂ ಚೌಚೌ ಬಾತ್ ದಾಸೋಹಿಗಳಾಗಿದ್ದರು.

ಮುಖ್ಯ ಶಿಕ್ಷಕಿ ಬಿ ಎಂ ಶಶಿಕಲಾ ಸ್ವಾಗತಿಸಿದರೆ, ಎಂ ಬಿ ಪ್ರೇಮಾ ವಂದಿಸಿದರು. ಹೆಚ್ ಎಸ್ ದ್ಯಾಮೇಶ್ ಕಾರ್ಯಕ್ರಮ ನಡೆಸಿಕೊಟ್ಟರು.