ಎಲೆಬೇತೂರು ಪ್ರೌಢ ಶಾಲೆಯಲ್ಲಿ “ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ

ಸಂಜೆವಾಣಿ ವಾರ್ತೆ

ಎಲೆಬೇತೂರು, ಫೆ. ೧೮: ಇಲ್ಲಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಮತ್ತು ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ “ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ”ನವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.ಪ್ರಾಸ್ತಾವಿಕವಾಗಿ ವಿಶ್ವಗುರು ಬಸವಣ್ಣನವರ ಅನಾವರಣ ಕುರಿತು ಅಧ್ಯಾಪಕ ಹೆಚ್.ಎಸ್. ದ್ಯಾಮೇಶ್ ಮಾತನಾಡಿದರು. “ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ”ನವರ ಭಾವಚಿತ್ರವನ್ನು ತರಳಬಾಳು ಪ್ರಾಥಮಿಕ ಶಾಲಾ ಸಲಹಾ ಸಮಿತಿಯ ಅಧ್ಯಕ್ಷರಾದ ಹೆಚ್. ಬಸವರಾಜಪ್ಪ ಅನಾವರಣಗೊಳಿಸಿದರು. ಹಿರಿಯರಾದ ಶಿಖರಪ್ಳ ಮರುಳಸಿದ್ದಪ್ಪ, ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಮಾತನಾಡಿದರು. ವೇದಿಕೆಯ ಮೇಲೆ ಶಾಲಾ ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾದ ಹಳ್ಳಿಕೇರಿ ರಾಜಣ್ಣ, ಎಲಿಗೇರ್ ಮಹೇಶ್, ಮಾಗೋಡ್ರು ಕೊಟ್ರೇಶ್ ಮತ್ತು ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು. ಮುಖ್ಯೋಪಾದ್ಯಾಯಿನಿ ಎಂ.ಬಿ. ಪ್ರೇಮಾ ಸ್ವಾಗತಿಸಿದರು. ಷಣ್ಮುಖಪ್ಪ ವಂದಿಸಿದರು. ಅಧ್ಯಾಪಕಿ ಉಷಾ ಸುಶ್ರಾವ್ಯವಾಗಿ ಬಸವಣ್ಣನವರ ವಚಗಳನ್ನು ಹಾಡಿದರು. ಅಧ್ಯಾಪಕರಾದ ಎಸ್.ಆರ್. ನಾಗರಾಜ್ ಕಾರ್ಯಕ್ರಮ ನಡೆಸಿಕೊಟ್ಟರು. ಉಭಯ ಶಾಲೆಯ ವಿದ್ಯಾರ್ಥಿಗಳು ವಚನಗಳನ್ನು ಹೇಳಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಉಭಯ ಶಾಲೆಗಳ ವಿದ್ಯಾರ್ಥಿಗಳು ಹಾಗೂ ನೌಕರರು ಭಾಗವಹಿಸಿದ್ದರು.