ದಾವಣಗೆರೆ.ಜೂ.೧೪: ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ‘ಗಂಗಾ ಮೊಹೋತ್ಸವ’ದ ಅಂಗವಾಗಿ ಗಂಗಾಮತಸ್ಥರು ಬಾಜಾ-ಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಕೆರೆಗೆ ತೆರಳಿ ಗಂಗಾಮಾತೆಗೆ ಹಾಗೂ ನಾಗದೇವತೆಗೆ ವಿಶೇಷವಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಂಗಾಮತಸ್ಥರೊಂದಿಗೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ನಾಡಿನಲ್ಲಿ ಕಾಲಕಾಲಕ್ಕೆ ಮಳೆಯಾಗಿ ರೈತರ, ಜನ-ಜಾನುವಾರುಗಳ ಬಾಳು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.