ಎಲೆಬೇತೂರಿನಲ್ಲಿ ರೈತ ಉತ್ಪಾದನಾ ಕಚೇರಿ ಉದ್ಘಾಟನೆ

ದಾವಣಗೆರೆ.ಆ.೧; ತಾಲ್ಲೂಕು ಎಲೆಬೇತೂರು ಗ್ರಾಮದಲ್ಲಿ  ಸಂಪನ್ಮೂಲ ಸಂಸ್ಥೆಯಾದ ಐಸಿಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ, ಜಲಾನಯನ ಅಭಿವೃದ್ಧಿ ಇಲಾಖೆ ಬೆಂಗಳೂರು, ಕೃಷಿ ಇಲಾಖೆ ದಾವಣಗೆರೆ ಹಾಗೂ ಬೇತೂರು ತರಳಬಾಳು ಅಮೃತ ರೈತ ಉತ್ಪಾದನಾ ಕಂಪನಿ ಲಿ. ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಪಶು ಆಸ್ಪತ್ರೆ ಹತ್ತಿರ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ತರಳಬಾಳು ಕೃಷಿ ಕೇಂದ್ರದ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಬೇತೂರು ತರಳಬಾಳು ಅಮೃತ ರೈತ ಉತ್ಪಾದನಾ ಕಂಪನಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರು, ಜನಪ್ರತಿನಿಧಿಗಳು, ಕಂಪನಿಯ ರೈತ ಷೇರುದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Attachments area