ಎಲೆಗಳಲ್ಲಿ ಅರಳಿದ ಕಲೆ 

ದಾವಣಗೆರೆ.ನ.೧೩: , ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರದ ಬಸಪ್ಪ ಎಜುಕೇಶನ್ ಅಸೋಸಿಯೇಷನ್ ನ ರಾಜರಾಜೇಶ್ವರಿ  ವಿದ್ಯಾಸಂಸ್ಥೆಯಲ್ಲಿ  ವಿದ್ಯಾರ್ಥಿಗಳ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಪ್ರತಿಭೆ ಅನಾವರಣಗೊಳಿಸುವ ಹಿನ್ನೆಲೆಯಲ್ಲಿ ಲೀವ್ಸ್ ಕ್ರಾಫ್ಟ್ ಶೀರ್ಷಿಕೆಯಡಿ ಬಾಲಕರಿಗೆ ಎಲೆಗಳಿಂದ ಅಲಂಕಾರ ವಸ್ತು ತಯಾರಿಸುವ ವಿವಿಧ ಸೃಜನಾತ್ಮಕ ಚಟುವಟಿಕೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.6 ರಿಂದ 10 ನೇ ತರಗತಿಯ ಸುಮಾರು 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದಕ್ಕಿಂತ ಒಂದು ವೈವಿಧ್ಯಮಯ ಎಲೆಯ ಕಲಾಕೃತಿಗಳು ಅನಾವರಣಗೊಂಡವು.  ಪ್ರತಿ ತರಗತಿಗೂ ತಲಾ ಮೂರು ಬಹುಮಾನ ಘೋಷಿಸಿ ಪ್ರೋತ್ಸಾಹಿಸಲಾಯಿತು.ಪ್ರಥಮ ಬಹುಮಾನಕ್ಕೆ ಭಾಜನರಾದ 10ನೇ ತರಗತಿ ವಿದ್ಯಾರ್ಥಿ ಒ.ಜಿ ಕಾರ್ತಿಕ್ ಹಾಗೂ 8 ನೇ ತರಗತಿ ವಿದ್ಯಾರ್ಥಿ ನವೀದ್ ಷಾ ಇವರು ತಯಾರಿಸಿದ ಎಲೆಗಳ ಕಲಾತ್ಮಕ ಚಟುವಟಿಕೆ ಎಲ್ಲರ ಗಮನ ಸೆಳೆಯಿತು